ರಚ್ಚು ಫ್ಯಾನ್ಸ್ ಗೆ ಸಂಕ್ರಾಂತಿ ಮತ್ತಷ್ಟು ಸಿಹಿಯಾಗಲಿದೆ. ಸಾಲು ಸಾಲು ಕನ್ನಡ ಸಿನಿಮಾಗಳ ಜೊತೆ ಸದ್ದಿಲ್ಲದೇ ಟಾಲಿವುಡ್ ನಲ್ಲೂನಟಿಸಿ ಬಂದ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ (Rachita Ram Good News) ಮೊದಲ ತೆಲುಗು ಸಿನಿಮಾ ಸಂಕ್ರಾಂತಿಗೆ ತೆರೆಗೆ ಬರಲಿದೆ. ಕನ್ನಡದಲ್ಲಿ ನಟಿಸಿದ ಬಹುತೇಕ ಸಿನಿಮಾ ಗೆದ್ದಿರುವ ಕಾರಣಕ್ಕೆ ರಚಿತಾರಾಮ್ ಗೆ ಡೈರೈಕ್ಟರ್ ಲಕ್ಕಿ ಹೀರೋಯಿನ್ ಅನ್ನೋ ಹೆಗ್ಗಳಿಕೆ ಇದೆ. ಈಗ ತೆಲುಗಿನಲ್ಲೂ ಈ ಅದೃಷ್ಟ ಪರೀಕ್ಷೆಗೆ ರಚಿತಾ ಸಿದ್ಧವಾಗಿದ್ದಾರೆ.
ಕನ್ನಡದ ಹೀರೋಯಿನ್ ಗಳು ತಮಿಳು, ತೆಲುಗಿನಲ್ಲಿ ಮಿಂಚೋದು ಇದೇನು ಮೊದಲಲ್ಲ ಕನ್ನಡದಿಂದಲೇ ಕೆರಿಯರ್ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಗೆದ್ದಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ರಚಿತಾರಾಮ್. ಕನ್ನಡದಲ್ಲಿ ಕಳೆದ ಮೂರು ವರ್ಷಗಳಿಂದ ಒಂದಾದ ಮೇಲೊಂದು ಸಿನಿಮಾದಲ್ಲಿ ಢಿಪರೆಂಟ್ ಕ್ಯಾರೆಕ್ಟರ್ ನಿಭಾಯಿಸಿ ಗೆದ್ದಿರುವ ರಚಿತಾರಾಮ್ ಲಾಕ್ ಡೌನ್ ತೆರವಾಗಿ ಸಿನಿಮಾ ಶೂಟಿಂಗ್ ಆರಂಭವಾಗುತ್ತಿದ್ದಂತೆ ತೆಲುಗಿಗೆ ಹಾರಿದ್ದರು.
ತೆಲುಗಿನ ಸೂಪರ್ ಮಚ್ಚಿ ಸಿನಿಮಾದಲ್ಲಿ ರಚಿತಾರಾಮ್ ನಟಿಸಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗಲಿದ್ದು ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿದೆ. ಟಾಲಿವುಡ್ ನಲ್ಲಿ ಇದು ರಚಿತಾರಾಮ್ ಗೆ ಮೊದಲ ಚಿತ್ರ. ಈ ಮೊದಲು ಸಾಕಷ್ಟು ಕನ್ನಡದ ಸ್ಟಾರ್ ಗಳು ತೆಲುಗಿನಲ್ಲಿ ನಟಿಸಿ ಗೆದ್ದಿದ್ದಾರೆ. ಈಗ ರಚಿತಾ ಟಾಲಿವುಡ್ ಪ್ರೇಕ್ಷಕರ ಮನಗೆಲ್ಲಲು ಸಿದ್ದವಾಗಿದ್ದು ಸಂಕ್ರಾಂತಿಯಂದು ರಚಿತಾ ಅದೃಷ್ಟ ಪರೀಕ್ಷೆ ನಡೆಯಲಿದೆ. ಪುಲಿವಾಸು ನಿರ್ದೇಶನದಲ್ಲಿ ಮೂಡಿಬಂದಿರೋ ಸೂಪರ್ ಮಚ್ಚಿಸಿನಿಮಾದಲ್ಲಿ ಕಲ್ಯಾಣ್ ದೇವ್ ನಾಯಕರಾಗಿ ನಟಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಂತೂ ಸದ್ಯ ರಚಿತಾರಾಮ್ ಹವಾ ಜೋರಾಗಿದ್ದು, ಏಕ್ ಲವ್ ಯಾ ಸಿನಿಮಾದಲ್ಲಿ ಎಣ್ಣೆ ಬಾಟಲಿ ಹಿಡಿದು ಡ್ಯಾನ್ಸ್ ಮಾಡೋ ಮೂಲಕ ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದ್ದಾರೆ. ಇನ್ನು ರಚಿತಾರಾಮ್ ಮತ್ತೆ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ಲವ್ ಯೂ ರಚ್ಚು ಸಿನಿಮಾ ಕೂಡಾ ಸಖತ್ ಯಶಸ್ಸು ಪಡೆದಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಅಲ್ಲದೇ ಸದ್ಯ ರಚಿತಾರಾಮ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದಲ್ಲೂ ನಟಿಸುತ್ತಿದ್ದು, ಸಖತ್ ಬ್ಯುಸಿಯಾಗಿದ್ದಾರೆ. ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ರಾಮ್ ಮೈ ಬಳುಕಿಸಿದ ಹೆಣ್ಣಿಗೂ ಎಣ್ಣೆಗೂ ಎಲ್ಲಿಂದ ಲಿಂಕಿಟ್ಟೆ ಭಗವಂತಾ ಸಾಂಗ್ ಸಖತ್ ವೈರಲ್ ಕೂಡಾ ಆಗಿದೆ.
ಇದನ್ನೂ ಓದಿ : pushpa 2 ಸಿನಿಮಾದಲ್ಲಿ ಕನ್ನಡಿಗರ ಕಾರುಬಾರು : ರಶ್ಮಿಕಾಗೆ ಜೊತೆಯಾಗ್ತಾರಂತೆ ಕೃತಿ ಶೆಟ್ಟಿ
ಇದನ್ನೂ ಓದಿ : ಸಾಗರ ತೀರದಲ್ಲಿ ಸ್ವೀಟಿ : ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ ರಾಧಿಕಾ ಕುಮಾರಸ್ವಾಮಿ
(Good News for Rachita Ram fans in Makara Sankranti)