India’s 1st Omicron Death : ಓಮಿಕ್ರಾನ್​ ರೂಪಾಂತರಿ ಅಟ್ಟಹಾಸಕ್ಕೆ ದೇಶದಲ್ಲಿ ಮೊದಲ ಬಲಿ

India’s 1st Omicron Death :ವೇಗವಾಗಿ ಹರಡುತ್ತಿರುವ ಓಮಿಕ್ರಾನ್​ ರೂಪಾಂತರಿಗೆ ರಾಜಸ್ಥಾನದಲ್ಲಿ ಮೊದಲ ಬಲಿಯಾಗಿದ್ದು ಈ ಮೂಲಕ ದೇಶದಲ್ಲಿ ಓಮಿಕ್ರಾನ್​ನಿಂದ ಓರ್ವ ಸೋಂಕಿತ ಸಾವನ್ನಪ್ಪಿದಂತಾಗಿದೆ ಎಂದು ಫೆಡರಲ್​ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ .


ದೇಶದಲ್ಲಿ ಓಮಿಕ್ರಾನ್​ ಪ್ರಕರಣಗಳು 2135ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಓಮಿಕ್ರಾನ್​ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಕೋವಿಡ್​ ವರದಿಯು ಡಿಸೆಂಬರ್​ 15ರಂದು ಪಾಸಿಟಿವ್​ ಬಂದಿತ್ತು. ಸೋಂಕಿಗೆ ಒಳಗಾದ ವ್ಯಕ್ತಿಯು ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.


ಇವರ ಸ್ಯಾಂಪಲ್​ಗಳನ್ನು ಜಿನೋಮ್​ ಸಿಕ್ವೆನ್ಸಿಂಗ್​​ಗೆ ಕಳುಹಿಸಲಾಗಿತ್ತು. ಈ ನಡುವೆ ಡಿಸೆಂಬರ್​ 21ರಂದು ವ್ಯಕ್ತಿಯ ವರದಿಯು ನೆಗೆಟಿವ್​ ಬಂದಿತ್ತು. ಈ ವ್ಯಕ್ತಿಯು ಕೊರೊನಾದ ಎರಡೂ ಡೋಸ್​ಗಳನ್ನು ಸ್ವೀಕರಿಸಿದ್ದು ಯಾವುದೇ ಅಂತಾರಾಷ್ಟ್ರೀಯ ಟ್ರಾವೆಲ್​ ಹಿಸ್ಟರಿಯನ್ನು ಹೊಂದಿರಲಿಲ್ಲ.


ಆದರೆ ವ್ಯಕ್ತಿಯಲ್ಲಿ ಆರೋಗ್ಯ ಸಮಸ್ಯೆ ಇದ್ದುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಓಮಿಕ್ರಾನ್​ ಮೊದಲ ಸಾವು ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಜಿನೋಮ್​ ಸಿಕ್ವೆನ್ಸಿಂಗ್​ ವರದಿಯು ಡಿಸೆಂಬರ್​ 25ರಂದು ಬಂದಿದ್ದು ಇದರಲ್ಲಿ ಓಮಿಕ್ರಾನ್​ ರೂಪಾಂತರಿ ಪತ್ತೆಯಾಗಿದೆ. ಈ ವ್ಯಕ್ತಿಯು ಡಿಸೆಂಬರ್​ 31ರ ಮುಂಜಾನೆ 3:30ರ ಸುಮಾರಿಗೆ ಸಾವನ್ನಪ್ಪಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹೋಂ ಐಸೋಲೇಷನ್​​ಗೆ ಪರಿಷ್ಕೃತ ಮಾರ್ಗಸೂಚಿ ರಿಲೀಸ್​


ಸೌಮ್ಯ ಹಾಗೂ ಲಕ್ಷಣ ರಹಿತ ಸೋಂಕನ್ನು ಹೊಂದಿದ ಬಳಿಕ ಹೋಂ ಐಸೋಲೇಷನ್​​ನಲ್ಲಿರುವ ಕೋವಿಡ್​ ರೋಗಿಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿಯನ್ನು ರಿಲೀಸ್​ ಮಾಡಿದೆ.

ಹೊಸ ಮಾರ್ಗಸೂಚಿಯ ಪ್ರಕಾರ ಕೊರೊನಾ ಪಾಸಿಟಿವ್​ ವರದಿ ಪಡೆದ ಕನಿಷ್ಟ 1 ವಾರಗಳ ಬಳಿಕ ಹಾಗೂ ಸತತವಾಗಿ ಮೂರು ದಿನಗಳ ಕಾಲ ಯಾವುದೇ ಜ್ವರದ ಲಕ್ಷಣಗಳು ಕಂಡು ಬರದೇ ಇದ್ದಲ್ಲಿ ಅವರು ಐಸೋಲೇಷನ್​ ಕೊನೆಗೊಳಿಸಬಹುದು ಎಂದು ಹೇಳಲಾಗಿದೆ.

ಇದರ ಜೊತೆಯಲ್ಲಿ ಹೋಂ ಐಸೋಲೇಷನ್​ ಅವಧಿಯನ್ನು ಪೂರ್ಣಗೊಳಿಸಿದ ರೋಗಿಗಳು ಮತ್ತೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದೂ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೋಂ ಐಸೋಲೇಷನ್​ನಲ್ಲಿ ಇರುವವರಿಗೆ ವಿವಿಧ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ದೀರ್ಘಕಾಲದ ಶ್ವಾಸಕೋಶ ಸಂಬಂಧಿ ಸಮಸ್ಯೆ, ಯಕೃತ್ತು, ಮೂತ್ರಪಿಂಡ ಕಾಯಿಲೆ ಸೇರಿದಂತೆ ವಿವಿಧ ದೇಹಾರೋಗ್ಯ ಸಮಸ್ಯೆಯನ್ನು ಹೊಂದಿರುವವು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು ವೈದ್ಯರ ಬಳಿ ಸೂಕ್ತವಾದ ಮೌಲ್ಯಮಾಪನ ಮಾಡಿಸಿಕೊಂಡು ಅವರ ಅನುಮತಿ ನೀಡಿದ ಬಳಿಕವೇ ಹೋಂ ಐಸೋಲೇಷನ್​ನಲ್ಲಿ ಇರಲು ಅನುಮತಿ ನೀಡಲಾಗುತ್ತದೆ ಎಂದು ಹೇಳಿದೆ.

ಹೆಚ್​ಐವಿ, ಟ್ರಾನ್ಸ್​ಪ್ಲಾಂಟ್​ ಮಾಡಿಸಿಕೊಳ್ಳುವವರು, ಕ್ಯಾನ್ಸರ್​ ಮುಂತಾದ ಕಾಯಿಲೆಗಳನ್ನು ಹೊಂದಿರುವವರಿಗೆ ಹೋಂ ಐಸೋಲೇಷನ್​ಗೆ ಅನುಮತಿ ನೀಡಲಾಗುವುದಿಲ್ಲ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಸರಿಯಾದ ಮೌಲ್ಯಮಾಪನದ ಬಳಿಕ ಮಾತ್ರ ಅವರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಅನುಮತಿ ನೀಡಬಹುದು ಎಂದು ಹೇಳಲಾಗಿದೆ.

ರೋಗಿಗಳಿಗೆ ಹೋಂ ಐಸೋಲೇಷನ್​ಗೆ ಅವಕಾಶ ನೀಡಲಾಗಿದೆಯಾದರೂ ಅವರ ಕುಟುಂಬ ಸದಸ್ಯರು ಹಾಗೂ ಮನೆಯಲ್ಲಿ ರೋಗಿಗಳ ಜೊತೆ ಸಂಪರ್ಕದಲ್ಲಿರುವ ಇತರೆ ಯಾವುದೇ ವ್ಯಕ್ತಿಗಳು ಕೇಂದ್ರ ಆರೋಗ್ಯ ಸಚಿವಾಲಯದ ವೆಬ್​ಸೈಟ್​ನಲ್ಲಿರುವ ಹೋಂ ಕ್ವಾರಂಟೈನ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ತಿಳಿಸಲಾಗಿದೆ.

ಈ ನಡುವೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದ್ದು ಇದರಿಂದಾಗಿ ಕೋವಿಡ್​ ಪಾಸಿಟಿವಿಟಿ ದರ 4.18 ಪ್ರತಿಶತಕ್ಕೆ ಏರಿಕೆಯಾಗಿದೆ . ದೇಶದಲ್ಲಿ ಪ್ರಸ್ತುತ 2,14,404 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

India’s 1st Omicron Death In Rajasthan: 10 Points

ಇದನ್ನು ಓದಿ :

Comments are closed.