AI ಪೋಟೋಸ್ ಗೆ ಮನಸೋತ ಸ್ಯಾಂಡಲ್ ವುಡ್: ನಟಿಮಣಿಯರ ಪೋಟೋಸ್ ವೈರಲ್

ಸ್ಯಾಂಡಲ್ ವುಡ್, ಬಾಲಿವುಡ್ ಹೀಗೆ ಸಿನಿರಂಗ ಯಾವುದೇ ಇರಲಿ, ಟ್ರೆಂಡ್ ಗಳು ಸದ್ದು ಮಾಡೋದು ಕಾಮನ್. ಇಷ್ಟು ದಿನಗಳ ಕಾಲ ರೀಲ್ಸ್ ಗಳಲ್ಲಿ ಟ್ರೆಂಡಿ ಸಾಂಗ್ಸ್ ಗೆ ಹೆಜ್ಜೆ ಹಾಕ್ತಿದ್ದ ನಟ-ನಟಿಯರು ಈಗ AI ಪೋಟೋಗಳ (AI Photos) ಮೋಡಿಗೆ ಮರುಳಾಗಿದ್ದಾರೆ. ಫಲವಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಂತಾರದ ಲೀಲಾನಿಂದ ಆರಂಭಿಸಿ, ರಾಧಿಕಾ ಪಂಡಿತ್‌ವರೆಗೆ ಎಲ್ಲರ ಏಐ ಪೋಟೋಸ್ ವೈರಲ್ ಆಗಿದೆ.

ಟ್ರೆಂಡ್ ಗಳಿಗೆ ತಕ್ಕನಾಗಿ ನಟ-ನಟಿಯರು ಮಿಂಚೋದು ಕಾಮನ್. ಇಷ್ಟು ದಿನಗಳ ಕಾಲ ಟ್ರೆಂಡಿ ಡ್ರೆಸ್ ನಲ್ಲಿ ಪೋಟೋ ಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದ ನಟಿಯರು ಈಗ ಏಐ ಪೋಟೋಸ್ ಹಂಚಿಕೊಂಡು ಅಭಿಮಾನಿಗಳಿಗೆ ರಸದೌತಣ ನೀಡ್ತಿದ್ದಾರೆ.ಕೆಆರ್ ಜಿ ಸಿದ್ಧಪಡಿಸ್ತಿರೋ ಆರ್ಟಿಫಿಶಲ್ ಇಂಟಲಿಜೆನ್ಸಿ ಆಧರಿಸಿದ AI ಚಿತ್ರಗಳು ಎಲ್ಲರ ಮನ ಸೆಳೆದಿದೆ. ಇತ್ತೀಚಿಗಷ್ಟೇ ಕಾಂತಾರ ಸಿನಿಮಾದ ನಟಿ ಲೀಲಾ ಖ್ಯಾತಿಯ ಸಪ್ತಮಿ ಗೌಡ ಏಐ ಪೋಟೋಸ್ ಶೇರ್ ಮಾಡಿಕೊಂಡು ವಾರಿಯರ್ ಪೋಸ್ ಎಂದಿದ್ದರು.

ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ಪ್ರಿನ್ಸಸ್ ಎನ್ನಿಸಿಕೊಂಡ ರಾಧಿಕಾ ಪಂಡಿತ್ ಕೂಡ ಏಐ ಪೋಟೋಸ್ ಶೇರ್ ಮಾಡಿಕೊಂಡಿದ್ದರು. ರಾಧಿಕಾರನ್ನು ಏಐ ಅವತಾರದಲ್ಲಿ‌ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು.ರಾಧಿಕಾ ಪಂಡಿತ್ ಬೆನ್ನಲ್ಲೇ ಸ್ಯಾಂಡಲ್ ವುಡ್ ಹಲವು ನಟಿಮಣಿಯರು ಏಐ ಪೋಟೋಸ್ ಶೇರ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಟೋಗಳು ಅಭಿಮಾನಿಗಳ ಗಮನ ಸೆಳೆದಿದೆ.

ಕೇವಲ ನಟಿಮಣಿಯರು ಮಾತ್ರವಲ್ಲ ಸ್ಯಾಂಡಲ್ ವುಡ್ ನಟರೂ ಕೂಡ ಏಐ ಮೋಡಿಗೆ ಮರುಳಾಗಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ ಕೂಡ ಬೇರೆ ಬೇರೆ ರೀತಿಯಲ್ಲಿ ಪೋಸ್ ನೀಡಿ ಏಐ ಪೋಟೋಸ್ ಮಾಡಿಸಿಕೊಂಡಿದ್ದಾರೆ. ಫೇಸ್ ಬುಕ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾದಲ್ಲಿ ಈಗ ಸ್ಟಾರ್ ಗಳ ಏಐ ಪೋಟೋಸ್ ಸಂಚಲನ ಮೂಡಿಸಿದೆ. ಕೆಆರ್ ಜಿ ಕಂಟೆಂಟ್ ಕ್ರಿಯೇಟರ್ ಈ ರೀತಿ ಏಐ ಪಿಚ್ಚರ್ಸ್ ಕ್ರಿಯೇಟ್ ಮಾಡ್ತಿದ್ದು, ಸ್ಯಾಂಡಲ್ ವುಡ್ ನಾದ್ಯಂತ ನಟಿಮಣಿಯರ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ.

ಇದನ್ನೂ ಓದಿ : Saanya Iyer : ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು

ಇದನ್ನೂ ಓದಿ : Jailer Movie : ಕಡಲನಗರಿಗೆ ಬಂದಿಳಿದ ತಲೈವಾ ರಜನಿಕಾಂತ್‌ : ಮಂಗಳೂರಿನಲ್ಲಿ “ಜೈಲರ್‌” ಚಿತ್ರೀಕರಣ

ಇದನ್ನೂ ಓದಿ : ಡಾ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ : ಇದರ ಒಳಗೆ ಏನೇನೂ ಇದೆ ಗೊತ್ತಾ ?

ಚುಟು ಚುಟು ಹಾಡಿನ ಮೂಲಕ ಕನ್ನಡಿಗರ ಮನಗೆದ್ದ ಆಶಿಕಾ ರಂಗನಾಥ್ ಕೂಡ ಈ ಏಐ ಪೋಟೋಸ್ ಮೋಡಿಗೆ ಮನಸೋತಿದ್ದು ಇನ್ ಸ್ಟಾಗ್ರಾಂನಲ್ಲಿ ಆಶಿಕಾ ರಂಗನಾಥ್ ಪೋಟೋಸ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

AI Photos: Sandalwood is heartbroken by AI photos: Heroines photos are viral

Comments are closed.