K. V. Tirumalesh: ಖ್ಯಾತ ಸಾಹಿತಿ, ಭಾಷಾ ವಿಜ್ಞಾನಿ ಕೆ. ವಿ. ತಿರುಮಲೇಶ್ ಇನ್ನಿಲ್ಲ

(K. V. Tirumalesh) ಕನ್ನಡದ ಖ್ಯಾತ ಕಥೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್‌ (82 ವರ್ಷ) ಇಂದು ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಹೈದರಾಬಾದ್‌ ನ ತಮ್ಮ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ತಿರುಮಲೇಶ್ (K. V. Tirumalesh) ಅವರು ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಇತ್ತೀಚೆಗೆ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಲಾಗಿತ್ತು. ನಿನ್ನೆಯ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಬಂದಿದ್ದು, ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ 1940 ರ ಸೆಪ್ಟೆಂಬರ್‌ 12 ರಂದು ಕೆ.ವಿ. ತಿರುಮಲೇಶ್‌ ಜನಿಸಿದ್ದು, ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕ. ಹೈದರಾಬಾದಿನ ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ ಆಫ್‌ ಇಂಗ್ಲೀಷ್‌ ಆಂಡ್‌ ಫಾರಿನ್‌ ಲಾಂಗ್ವೇಜಸ್‌ ಸಂಸ್ಥೆಯಲ್ಲಿ ಪ್ರಾಧ್ಯಾಪರಾಗಿ ನಿವೃತ್ತಿ ಹೊಂದಿದ್ದರು.

ಇವರು ಅನೇಕ ಕೃತಿಗಳನ್ನು ರಚಿಸಿದ್ದು, ಹಲವು ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. ವಠಾರ ಸಂಕಲನದ ಮೂಲಕ ಕಾವ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಇವರು, ಅಕ್ಷಯ ಕಾವ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ನಂತರದಲ್ಲಿ ಒಂಬತ್ತು ಕವನ ಸಂಕಲನಗಳನ್ನು ಪ್ರಕಟನೆ ಮಾಡಿದ್ದು, ತಿರುಮಲೇಶ್‌ ಅವರ ಆಯ್ದ ಕವಿತೆಗಳು ಈ ಸಂಕಲನವನ್ನು ಒಳಗೊಂಡಿದೆ. ಕಾವ್ಯ, ಕತೆ, ಕಾದಂಬರಿ, ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆ.ವಿ. ತಿರುಮಲೇಶ್‌ (K. V. Tirumalesh) ಅವರು ಕೆಲಸ ಮಾಡಿದ್ದು, ಸಾಹಿತ್ಯ ವಿಮರ್ಶೆ ಹಾಗೂ ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : Haryana car accident: ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಅಪಘಾತ: 3 ಮಂದಿ ಸಾವು, 7 ಮಂದಿಗೆ ಗಾಯ

ಇದನ್ನೂ ಓದಿ : Race Bike accident: ರಸ್ತೆ ದಾಟುತ್ತಿದ್ದ ಮಹಿಳೆಗೆ ರೇಸಿಂಗ್‌ ಬೈಕ್‌ ಢಿಕ್ಕಿ: ಮಹಿಳೆ ಸಾವು, ಬೈಕ್‌ ಸವಾರ ಗಂಭೀರ ಗಾಯ

ಇದನ್ನೂ ಓದಿ : ಪಿಎಮ್‌ ಕಿಸಾನ್‌ ಯೋಜನೆ : 2023ರ ಬಜೆಟ್‌ನಲ್ಲಿ ಸಿಗಲಿದೆ ಭರ್ಜರಿ ಗಿಫ್ಟ್

K. V. Tirumalesh: Eminent Literature, Linguist K. V. Tirumalesh is no more

Comments are closed.