ಸೋಮವಾರ, ಏಪ್ರಿಲ್ 28, 2025
HomeBreakingಕೊರೋನಾಕ್ಕೆ ಆಪ್ತನ ಪುತ್ರ ಬಲಿ…! ಮನಸ್ಸು ಒಡೆದು ಚೂರಾಗಿದೆ ಎಂದ ನವರಸನಾಯಕ…!!

ಕೊರೋನಾಕ್ಕೆ ಆಪ್ತನ ಪುತ್ರ ಬಲಿ…! ಮನಸ್ಸು ಒಡೆದು ಚೂರಾಗಿದೆ ಎಂದ ನವರಸನಾಯಕ…!!

- Advertisement -

ಕೊರೋನಾ ಸಂಕಷ್ಟ ಬಡವ-ಬಲ್ಲಿದ ಎನ್ನದೇ ಎಲ್ಲರನ್ನು ಬಲಿಪಡೆಯುತ್ತಿದೆ. ಈಗಾಗಲೇ ಸ್ಯಾಂಡಲ್ ವುಡ್ ನ ಹಲವರು ಕೊರೋನಾಕ್ಕೆ ಬಲಿಯಾಗಿದ್ದಾರೆ. ಈ ಮಧ್ಯೆ ತಮ್ಮ ಸಹೋದರನಂತಿದ್ದ ಆಪ್ತನ ಪುತ್ರ ಕೊರೋನಾಕ್ಕೆ ಬಲಿಯಾಗಿರೋದರಿಂದ ತೀವ್ರನೊಂದುಕೊಂಡಿರೋ ಜಗ್ಗೇಶ್, ನೋವಿನಲ್ಲೇ ಟ್ವಿಟರ್ ಗೂ ವಿದಾಯದ ಮಾತನ್ನಾಡಿದ್ದಾರೆ.

https://kannada.newsnext.live/sandalwood-kavitha-chandan-marriage-bangalore-simple/

ನವರಸ ನಾಯಕ ಜಗ್ಗೇಶ್ ಕುಟುಂಬಕ್ಕೆ ಕೊರೋನಾ ಇನ್ನಿಲ್ಲದಂತೆ ಕಾಡಿದೆ. ಕೆಲದಿನಗಳ ಹಿಂದೆಯಷ್ಟೇ ಕೊರೋನಾ ಸೋಂಕಿಗೆ ತುತ್ತಾದ ಕೋಮಲ್ ಆಸ್ಪತ್ರೆ ಸೇರಿದ್ದು, ಹೋರಾಡಿ ತಮ್ಮನನ್ನು ಬದುಕಿಸಿಕೊಂಡೇ ಎಂದು ಜಗ್ಗೇಶ್ ಹೇಳಿಕೊಂಡಿದ್ದರು.

https://kannada.newsnext.live/sandalwood-actor-comedy-chikkanna-mysore-food-supply-coronapendamic/

ಇದರ ಬೆನ್ನಲ್ಲೇ ಜಗ್ಗೇಶ್ ಆಪ್ತ ಹಾಗೂ ಪಿಎ ಕಳೆದ 30 ವರ್ಷದಿಂದ ಜಗ್ಗೇಶ್ ಜೊತೆಗಿದ್ದ ಮಾದೇಗೌಡನ ಮಗ ಕೊರೋನಾಕ್ಕೆ ಬಲಿಯಾಗಿದ್ದಾನೆ. ಮಾದೇಗೌಡನ ಪುತ್ರನ ಸಾವಿಗೆ ಮರುಗಿರುವ ಜಗ್ಗೇಶ್, ಇದ್ದೊಬ್ಬ ಮಗನನ್ನು ಕಳೆದುಕೊಂಡ ಮಾದೇಗೌಡನ ನೋವು ನೋಡಲಾಗುತ್ತಿಲ್ಲ.

https://kannada.newsnext.live/black-pungus-infection-270-case-confirm-pune/

ನನ್ನ ಮಗನಿಗಿಂತ ಒಂದು ವರ್ಷ ಕಿರಿಯವನು. ಅವನಿಗೆ ಕಳೆದ ಆರು ತಿಂಗಳ ಹಿಂದೆ ಮಗಳು ಹುಟ್ಟಿದ್ದಾಳೆ. ಈಗ ಆತನಿಲ್ಲ ಎಂದ್ರೇ ಮಾದೇಗೌಡನಿಗೆ ಏನೆಂದು ಸಮಾಧಾನ ಮಾಡಲಿ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಹೇಗೆ ಸಹಿಸುತ್ತಾನೆ ಮಾದೇಗೌಡ ಈ ದುಃಖವನ್ನು. ನನ್ನ ದೇಹವೇ ಸುಟ್ಟಂತೆ ಆಗಿದೆ. ಕೆಲ ದಿನ ನಾ ಇಲ್ಲಿಂದ ದೂರ ಉಳಿಯುವೆ. ಮನಸ್ಸು ಒಡೆದು ಚೂರಾಗಿದೆ. ಏನು ಮಾಡಿದರೂ ಸಮಾಧಾನ ಆಗುತ್ತಿಲ್ಲ. ಬಂಗಾರದಂತಹ ಆತ್ಮೀಯ ಬಂಧುಗಳೇ,ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಯಾರು ನಮಗಾಗಿ ಬರರು.

ಇಂದಿನ  ಈ ಸ್ವಾರ್ಥಿಗಳ ಜಗದಲ್ಲಿ. ಸ್ವಾರ್ಥ,ಮೋಸ ಹಾಗೂ ಧನದಾಹಿ ಜಗತ್ತು.  ಒಳ್ಳೆಯವರಿಗಲ್ಲಾ ಇಂದಿನ ಜಗತ್ತು ಎಂದು ಟ್ವೀಟರ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.

RELATED ARTICLES

Most Popular