ಭಾನುವಾರ, ಏಪ್ರಿಲ್ 27, 2025
HomeBreakingರಾಧಾರಮಣ ನಾಯಕಿಗೆ ಕೂಡಿಬಂತು ಕಂಕಣ…! ಮೇ 13 ರಂದು ನಟಿ ಕಾವ್ಯಾಗೌಡ ವಿವಾಹ…! ಮನಸೆಳೆದ ಅದ್ದೂರಿ...

ರಾಧಾರಮಣ ನಾಯಕಿಗೆ ಕೂಡಿಬಂತು ಕಂಕಣ…! ಮೇ 13 ರಂದು ನಟಿ ಕಾವ್ಯಾಗೌಡ ವಿವಾಹ…! ಮನಸೆಳೆದ ಅದ್ದೂರಿ ಫ್ರಿವೆಡ್ಡಿಂಗ್ ಪೋಟೋಶೂಟ್…!!

- Advertisement -

ಸ್ಯಾಂಡಲ್ ವುಡ್ ಬಳಿಕ ಇದೀಗ ಕನ್ನಡ ಕಿರುತೆರೆಯಲ್ಲೂ  ಮಂಗಳವಾದ್ಯ ಮೊಳಗಲಿದ್ದು, ರಾಧಾ ರಮಣ ಖ್ಯಾತಿಯ ನಟಿ  ಕಾವ್ಯಾ ಗೌಡ ಹೊಸಬದುಕಿಗೆ ಕಾಲಿಡಲು ನಿರ್ಧರಿಸಿದ್ದಾರೆ.

ದುಬೈನಲ್ಲಿ ಅದ್ದೂರಿ ಪೋಟೋಶೂಟ್ ನಡೆಸಿ, ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕಾವ್ಯಾಗೌಡ ತಮ್ಮ ಲೈಫ್ ಪಾರ್ಟನರ್ ನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ರಾಧಾರಮಣ ಖ್ಯಾತಿಯ ನಟಿ ಕಾವ್ಯಾಗೌಡ ಇತ್ತೀಚಿಗೆ  ದುಬೈಗೆ  ವೆಕೇಶನ್ ಗಾಗಿ ತೆರಳಿದ್ದರು. ಅಲ್ಲಿಯೇ ತಮ್ಮ ಭಾವಿ ಪತಿಯೊಂದಿಗೆ ಅದ್ದೂರಿ ಪೋಟೋಶೂಟ್ ನಡೆಸಿರುವ ಕಾವ್ಯಾ ಪೋಟೋಹಂಚಿಕೊಂಡು ತಾವು ಮದುವೆಯಾಗುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಕಾವ್ಯಾ ಗೌಡ ಬೆಂಗಳೂರು ಮೂಲದ ಉದ್ಯಮಿ ಸೋಮಶೇಖರ್ ಅವರನ್ನು ವರಿಸಲಿದ್ದು, ಮೇ 13 ರಂದು ಈ ಜೋಡಿ ಹಸೆಮಣೆ ಏರಲಿದೆ.

ಕಾವ್ಯಾ ಹಾಗೂ ಸೋಮಶೇಖರ್ ದು ಆರೇಂಜ್ ಮ್ಯಾರೇಜ್ ಆಗಿದ್ದು, ಕೆಲವೇ ಕೆಲವು ನೆಂಟರು,ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಕಾವ್ಯಾ ಮದುವೆ ಸರಳವಾಗಿ ನಡೆಯಲಿದೆ.

2015 ರಲ್ಲಿ ಶುಭ ವಿವಾಹ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದ ಕಾವ್ಯಾ, ಬಳಿಕ ರಾಧಾರಮಣದಲ್ಲಿ ರಾಧಾ ಹಾಗೂ ಗಾಂಧಾರಿ ಧಾರಾವಾಹಿಯಲ್ಲಿ ಕಾವ್ಯ ಪಾತ್ರದಲ್ಲಿ ನಟಿಸಿದ್ದರು. ಮಾತ್ರವಲ್ಲ, 2018 ರಲ್ಲಿ ಬಕಾಸುರ ಸಿನಿಮಾದ ಮೂಲಕ ಹಿರಿತೆರೆಗೂ ಎಂಟ್ರಿ ನೀಡಿದ್ದರು.

ದುಬೈನಿಂದಲೇ ಮದುವೆ ವಿಚಾರ ತಿಳಿಸಿ, ವುಡ್ ಬೀ ಜೊತೆ ಪೋಟೋಶೂಟ್ ಪೋಟೋಗಳನ್ನು ಹಂಚಿಕೊಂಡ ಕಾವ್ಯಾ ತಮ್ಮ ಭಾವಿಪತಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.

RELATED ARTICLES

Most Popular