ಪೆರ್ಡೂರು ಮೇಳದ ಖ್ಯಾತ ಕಲಾವಿದ ಉದಯ ಹೆಗಡೆ ಕಡಬಾಳ ನಾಪತ್ತೆ

ಕೋಟ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರು ನಾಪತ್ತೆಯಾಗಿ ದ್ದಾರೆ‌. ಈ ಕುರಿತು ಅವರ ಪತ್ನಿ ಅಶ್ವಿನಿ ಕೊಂಡದಕುಳಿ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮತ್ಯಾಡಿ ಗುಡ್ಡೆಯಂಗಡಿ ನಿವಾಸಿಯಾಗಿರುವ ಉದಯ ಹೆಗಡೆ ಕಡಬಾಳ ಅವರು ಎಪ್ರಿಲ್ 21 ರಂದು ಮನೆಯಿಂದ ತೆರಳಿದ್ದರು. ಆದರೆ ಮನೆಗೆ ವಾಪಾಸಾಗಿಲ್ಲ. ಅಲ್ಲದೇ ಅವರ ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ.

ಈ ಹಿನ್ನೆಲೆಯಲ್ಲೀಗ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಉದಯ ಹೆಗಡೆ ಕಡಬಾಳ ಅವರು ಪೆರ್ಡೂರು ಮೇಳದಲ್ಲಿ ಕಲಾವಿದ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಯೂ ಗುರುತಿಸಿಕೊಂಡಿದ್ದಾರೆ.

ಉದಯ ಕಡಬಾಳ್ ಪತ್ನಿ ಅಶ್ವಿನಿ ಕೊಂಡದಕುಳಿ ಕೂಡ ಖ್ಯಾತ ಯಕ್ಷಗಾನ ಕಲಾವಿದೆ ಹಾಗೂ ಭಾಗವತಿಕೆಯಲ್ಲೂ ಹೆಸರು ಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಡಬಾಳ ಮೂಲದ ಉದಯ್ ಹೆಗಡೆಯವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅಳಿಯ ಹೀಗೆ ಅಚಾನಕ್ ಕಾಣೆಯಾಗಿರುವುದಕ್ಕೆ ಖ್ಯಾತ ಕಲಾವಿದ ಹಾಗೂ ಅಶ್ವಿನಿ ತಂದೆ ರಾಮಚಂದ್ರ ಹೆಗಡೆ ಕೊಂಡದಕುಳಿ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ಪಾತ್ರನಿ ನಿರ್ವಹಣೆಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಉದಯ್ ಕಡಬಾಳ ಮನೆಗೆ ಮರಳದೇ ನಾಪತ್ತೆಯಾಗಿದ್ದಾರೆ.  ಯಾವುದೇ ಆಪ್ತರ ಸಂಪರ್ಕಕ್ಕೂ ಬಾರದ ಉದಯ್ ಅವರ ಪೋನ್ ಕೂಡ ಸಂಪರ್ಕಕ್ಕೆ ಸಿಗದ ಕಾರಣ ಪತ್ನಿ ಅಶ್ವಿನಿ ಪೊಲೀಸರ ಮೊರೆ ಹೋಗಿದ್ದಾರೆ.

Comments are closed.