ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಲು,ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್. ಆದರೆ ಈ ಮಿಲ್ಕಿ ಬ್ಯೂಟಿ ಸ್ಮೋಕಿಂಗ್ ಮಾಡ್ತಾರಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆಯಂತೆ ಆಶಿಕಾ ನ್ಯೂ ಪೋಟೋ.

ಸದ್ಯ ಕನ್ನಡದ ಮದಗಜ ಸಿನಿಮಾದಲ್ಲಿ ಬ್ಯುಸಿಯಾಗಿರೋ ಆಶಿಕಾ ತಮಿಳು ಸಿನಿಮಾಗೂ ಎಂಠ್ರಿಕೊಡ್ತಿದ್ದಾರೆ. ಆಶಿಕಾ ಹುಟ್ಟುಹಬ್ಬಕ್ಕೆ ಮದಗಜ ತಂಡ ಪೋಸ್ಟರ್ ಹಾಗೂ ಫರ್ಸ್ಟ್ ಲುಕ್ ರಿಲೀಸ್ ಮಾಡಿದ್ದು, ಪೋಟೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಆಶಿಕಾ ಕೈಯಲ್ಲಿ ಸಿಗರೇಟ್ ಹಿಡಿದು ಸಖತ್ ಹಾಟ್ ಆಂಡ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮದಗಜ ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶಿಸುತ್ತಿದ್ದು, ರೋರಿಂಗ್ ಸ್ಟಾರ್ ಶ್ರೀಮುರುಳಿ ನಾಯಕರಾಗಿರುವ ಸಿನಿಮಾ ಸಖತ್ ನೀರಿಕ್ಷೆ ಮೂಡಿಸಿದೆ.

ಮೂಲಗಳ ಮಾಹಿತಿ ಪ್ರಕಾರ ಮದಗಜ ಸಿನಿಮಾದಲ್ಲಿ ಆಶಿಕಾ ಡಬ್ಬಲ್ ಶೇಡ್ ಪಾತ್ರದಲ್ಲಿ ನಟಿಸುತ್ತಿದ್ದು, ಒಂದು ಪಾತ್ರದಲ್ಲಿ ಹಳ್ಳಿಹುಡುಗಿ ಹಾಗೂ ಇನ್ನೊಂದು ಸಖತ್ ಮಾಡರ್ನ್ ಲುಕ್ ನ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಮದಗಜದಲ್ಲಿ ಆಶಿಕಾ ಮಾಡರ್ನ್ , ಹಾಟ್ ಲುಕ್ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದೇವೆ ಅಂತ ಕಮೆಂಟ್ ಮಾಡ್ತಿದ್ದಾರೆ.