ಮಂಗಳವಾರ, ಏಪ್ರಿಲ್ 29, 2025
HomeCinemaMeghana Comeback : ಚಂದನವನಕ್ಕೆ ಕಂಬ್ಯಾಕ್‌ ಮಾಡಿದ ಮೇಘನಾ ರಾಜ್‌ : ಪತಿಯ ಜನ್ಮದಿನದಂದೇ ಬಣ್ಣ...

Meghana Comeback : ಚಂದನವನಕ್ಕೆ ಕಂಬ್ಯಾಕ್‌ ಮಾಡಿದ ಮೇಘನಾ ರಾಜ್‌ : ಪತಿಯ ಜನ್ಮದಿನದಂದೇ ಬಣ್ಣ ಹಚ್ಚಿದ ಚಿರು ಪತ್ನಿ

- Advertisement -

ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಜನ್ಮ ದಿನ. ಇದೇ ಸಂದರ್ಭದಲ್ಲಿಯೇ ಮೇಘನಾ ರಾಜ್‌ ಬಣ್ಣ ಹಚ್ಚಿದ್ದಾರೆ. ಪನ್ನಾಗಭರಣ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾಕ್ಕೆ ಮೇಘನಾ ರಾಜ್‌ ನಾಯಕಿಯಾಗಿದ್ದಾರೆ. ಪತಿಯ ಬರ್ತಡೇ ದಿನದಂದೇ ಸಿನಿಮಾಕ್ಕೆ ರೀ ಎಂಟ್ರಿ ಕೊಡ್ತಿರೋದಕ್ಕೆ ಮೇಘನಾ ಸಖತ್‌ ಖುಷಿಯಾಗಿದ್ದಾರೆ. ಯಾರೂ ಏನೇ ಹೇಳಿದ್ರೂ ಕೂಡ, ವರ್ಷಂಪ್ರತಿ ಚಿರು ಬರ್ತಡೇಯನ್ನು ಆಚರಿಸೋದಾಗಿ ಹೇಳಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಹುಟ್ಟಿದ ದಿನದ ಹಿನ್ನೆಲೆಯಲ್ಲಿಂದು ಮೇಘನಾ ರಾಜ್‌ ಸುದ್ದಿಗೋಷ್ಠಿ ನಡೆಸಿದ್ರು. ಅಭಿಮಾನಿಗಳು ಮೇಘನಾ ಯಾವಾಗ ಸಿನಿಮಾ ಮಾಡ್ತಾರೆ ಅಂತಾ ಕೇಳ್ತಾ ಇದ್ರು. ಆದರೆ ಇದೀಗ ಸಿನಿಮಾ ಮಾಡುವ ಸಮಯ ಬಂದಿದೆ. ನಾನು ಒಂದು ದಿನ ಜಾಹೀರಾತು ಚಿತ್ರೀಕರಣ ಮುಗಿಸಿದೆ. ಗೆಳೆಯ ಪನ್ನಾಗಭರಣ ಶೂಟಿಂಗ್‌ ಹೇಗಿತ್ತು ಅಂತಾ ಕೇಳಿದ್ರು. ನಾನು ನಾರ್ಮಲ್‌ ಅನುಭವ ಬಂದಿದೆ ಎಂದು ಹೇಳಿದೆ.

ಕೂಡಲೇ ಪನ್ನಾಗಭರಣ ಸಿನಿಮಾ ಕಥೆಯಿದೆ ವಿಶಾಲ್‌ನನ್ನು ಮನೆಗೆ ಕಳುಹಿಸುತ್ತೇನೆ ಎಂದು ಹೇಳಿದ್ದ. ನಾನು ಕಥೆ ಕೇಳಿದ ನಂತರದಲ್ಲಿ ಒಂದು ಬಿರುಗಾಳಿ ಬಂದು ಹಾಗೆ ಹೊಡೆದು ಹೋದ ಅನುಭವವಾಗಿತ್ತು. ನಾನು ಅರ್ಧ ಗಂಟೆಗಳ ಕಾಲ ಶಾಕ್‌ ಆಗಿದ್ದೆ. ಸಿನಿಮಾದ ಕಥೆ ಅತ್ಯದ್ಬುತವಾಗಿದೆ ಎಂದು ಪನ್ನ ಬಳಿಯಲ್ಲಿ ಹೇಳಿದ್ದೆ. ನಾನು ಆತ ಸಿನಿಮಾ ನಿರ್ದೇಶನ ಮಾಡಬಹುದು ಎಂದು ಭಾವಿಸಿಕೊಂಡಿದ್ದೆ.

ಆದರೆ ಪನ್ನಾಗಭರಣ ಈ ಸಿನಿಮಾವನ್ನು ನಾನು ಪ್ರೊಡ್ರೂಸ್‌ ಮಾಡ್ತಾ ಇದ್ದೇನೆ. ನೀವು ನಟಿಸುತ್ತೀಯಾ ಅಂತಾ ಕೇಳಿದಾಗ ನನಗೆ ತುಂಬಾ ಖುಷಿಯಾಯ್ತು. ಚಿರು ಹೆಚ್ಚಾಗಿ ಥ್ರಿಲ್ಲರ್‌ ಸಿನಿಮಾಗಳನ್ನೇ ನೋಡ್ತಾ ಇದ್ರು, ಹಾಗಾಗಿ ಈ ಸಿನಿಮಾವನ್ನು ಚಿರುವೇ ಇಷ್ಟು ಪಟ್ಟು ನನಗೆ ಮಾಡುವಂತೆ ಹೇಳಿರಬೇಕು. ಇದೇ ಕಾರಣಕ್ಕೆ ನಾನೂ ಕೂಡ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೇನೆ.

ಗೆಳೆಯ ಪನ್ನಾಭರಣದ ಪ್ರೊಡೆಕ್ಷನ್‌ನಲ್ಲಿ ಕೆಲಸ ಮಾಡೋದಕ್ಕೆ ಖುಷಿಯಿದೆ. ಜೊತೆಗೆ ವಿಶಾಲ್‌ ಸಿನಿಮಾವನ್ನು ನಿರ್ದೇಶನ ಮಾಡ್ತಾ ಇದ್ರೆ, ಬಿಗ್‌ ಬಾಸ್‌ ಖ್ಯಾತಿಯ ವಾಸುಕಿ ವೈಭವ್‌ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇನೆ. ಚಿರಂಜೀವಿ ಸರ್ಜಾ ಹುಟ್ಟಿದ ದಿನದಂದೇ ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದ್ದೇವೆ. ದಸರಾ ಜೊತೆಗೆ ಚಿರು ಬರ್ತಡೇ ಆಗಿರುವ ಕಾರಣಕ್ಕೆ ನಾವು ಈ ದಿನವನ್ನು ಸಂಭ್ರಮಿಸುತ್ತೇವೆ. ಯಾರು ಏನೇ ಹೇಳಿದ್ರೂ ಕೂಡ ವರ್ಷಂಪ್ರತಿ ಚಿರು ಹುಟ್ಟುಹಬ್ಬವನ್ನು ನಾವು ಆಚರಿಸುತ್ತೇವೆ ಎಂದು ಮೇಘನಾ ಹೇಳಿದ್ದಾರೆ.

ಖ್ಯಾತ ನಿರ್ದೇಶಕ ನಾಗಾಭರಣ ಹಾಗೂ ನಟ ಸುಂದರ್‌ ರಾಜ್‌ ಇಬ್ಬರೂ ಕೂಡ ಸ್ನೇಹಿತರು. ಇಬ್ಬರೂ ಹಲವು ಸಿನಿಮಾಗಳನ್ನು ಚಂದನವನಕ್ಕೆ ಕೊಟ್ಟಿದ್ದಾರೆ. ಅವರಂತೆಯೇ ನಾವು ಕೂಡ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಬೇಕು ಅನ್ನೋದು ನಮ್ಮ ಬಯಕೆ. ಇದೀಗ ಹೊಸ ಸಿನಿಮಾವೊಂದರಲ್ಲಿ ನಾನು ನಟಿಸುತ್ತಿದ್ದೇನೆ. ಅಭಿಮಾನಿಗಳು, ಕನ್ನಡಿಗರ ಸಹಕಾರ ನಮ್ಮ ಜೊತೆಗಿರಲಿ ಎಂದು ಮೇಘನಾ ಹೇಳಿಕೊಂಡಿದ್ದಾರೆ.

ಇದನ್ನೂಓದಿ : Meghanaraj ಹೊಸ ಪೋಟೋ ಶೂಟ್‌ : ಮಹಾರಾಣಿಯಾಗಿ ಮಿಂಚಿದ ಮೇಘನಾ

ಇದನ್ನೂ ಓದಿ : Meghana Raj : ಸುರಂಗದ ಕೊನೆಯಲ್ಲಿ ಬೆಳಕು, ನನ್ನ ಪಾಲಿಗೆ ಆ ಬೆಳಕು ಚಿರು : HAPPY BIRTHDAY DEAR HUSBAND‌ ಎಂದ ಮೇಘನಾ

( Sandalwood Actress Meghana Raj Sarja Come back new Movie, celebrate Chiranjeevi Sarja Birthday )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular