ಸೋಮವಾರ, ಏಪ್ರಿಲ್ 28, 2025
HomeCinemaNikilkumarswamy:ಫೈಟರ್ ವಿವೇಕ್ ಸಾವಿಗೆ ಮರುಗಿದ ನಿಖಿಲ್ ಕುಮಾರಸ್ವಾಮಿ 50 ಸಾವಿರ ಧನಸಹಾಯ ಘೋಷಣೆ…!!

Nikilkumarswamy:ಫೈಟರ್ ವಿವೇಕ್ ಸಾವಿಗೆ ಮರುಗಿದ ನಿಖಿಲ್ ಕುಮಾರಸ್ವಾಮಿ 50 ಸಾವಿರ ಧನಸಹಾಯ ಘೋಷಣೆ…!!

- Advertisement -

ಲವ್ ಯೂ ರಚ್ಚು ಸಿನಿಮಾದ ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದು, ಇನ್ನೊರ್ವ ಫೈಟರ್ ಗಾಯಗೊಂಡಿದ್ದಾನೆ. ಈ ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ನಟ ನಿಖಿಲ್ ಕುಮಾರ್ ಸ್ವಾಮಿ 50 ಸಾವಿರ ಸಹಾಯಧನ ನೀಡಿದ್ದಾರೆ.

ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ವಿವೇಕ್ ಫೈಟರ್ ಸಾವನ್ನಪ್ಪಿದ ಸಂಗತಿ ತಿಳಿದ ನಿಖಿಲ್ ಕುಮಾರಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ತಮ್ಮ ಮ್ಯಾನೇಜರ್ ಮೂಲಕ 50 ಸಾವಿರ ರೂಪಾಯಿ ಸಹಾಯಧನ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.

ಬಿಡದಿ ವೇಳೆ ಶೂಟಿಂಗ್ ನಡೆಯುತ್ತಿದ್ದಾಗ ಈ ಘಟನೆ ನಡೆದಿತ್ತು. ಮೃತ ವಿವೇಕ್ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದು, ಆತನ ಕುಟುಂಬ ಬೀದಿಗೆ ಬಿದ್ದಿದೆ. ವಿವೇಕ್ ಫೈಟರ್ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ನಲ್ಲೂ ನಟಿಸಿದ್ದರು. ಹೀಗಾಗಿ ನಿಖಿಲ್ ಸಹಾಯಹಸ್ತ ಚಾಚಿದ್ದಾರೆ.

RELATED ARTICLES

Most Popular