I LOVE U ರಚ್ಚು ಸಿನಿಮಾಕ್ಕೆ ಸಂಕಷ್ಟ : ಬಂಧಿತರರಿಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಐಲವ್‌ಯೂ ರಚ್ಚು ಸಿನಿಮಾದ ತಂಡ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿಡದಿ ಸಮೀಪದಲ್ಲಿ ನಡೆಯುತ್ತಿದ್ದ ಚಿತ್ರಕರಣದ ವೇಳೆಯಲ್ಲಿ ಸಹಾಯಕ ಫೈಟರ್‌ ಸಾವನ್ನಪ್ಪಿದ್ದ ಪ್ರಕರಣದಿಂದಾಗಿ ಮೂವರು ಅರೆಸ್ಟ್‌ ಆಗಿದ್ದಾರೆ. ನ್ಯಾಯಾಲಯ ಮೂವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ರಾಮನಗರದ ಜಿಲ್ಲೆಯ ಬಿಡಿದಿಯಲ್ಲಿರುವ ಈಗಲ್‌ ಟನ್‌ ರೆಸಾರ್ಟ್‌ ಸಮೀಪದಲ್ಲಿ ಐಲವ್‌ಯೂ ರಚ್ಚು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆಯಲ್ಲಿ ಫೈಟಿಂಗ್‌ ದೃಶ್ಯದ ವೇಳೆ ಸಹಾಯಕ ಫೈಟರ್‌ಗೆ ವಿದ್ಯುತ್‌ ಸ್ಪರ್ಶ ಉಂಟಾಗಿದೆ. ಇದರಿಂದಾಗಿ 28 ವರ್ಷ ವಿವೇಕ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ವಿವೇಕ್‌ ಪೋಷಕರು ನೀಡಿದ ದೂರಿನ ಮೇರೆಗೆ ಐಲವ್‌ ಯೂ ಸಿನಿಮಾದ ನಿರ್ದೇಶಕ ಶಂಕರ್‌, ಮಹೇಶ್‌ ಹಾಗೂ ಫೈಟ್‌ ಮಾಸ್ಟರ್‌ ವಿನೋದ್‌ ಅವರ ವಿರುದ್ದ ಪ್ರಕರಣ ದಾಖಲಾಗಿದ್ದು, ಮೂವರು ಜೈಲು ಸೇರಿದ್ದಾರೆ.

ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಚಿತ್ರದ ನಾಯಕ ಅಜಯ್‌ ರಾವ್‌ ಖುದ್ದು ಆರೋಪಿಸಿದ್ದಾರೆ. ಇದೀಗ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಗಂಭೀರವಾಗಿ ಗಾಯಗೊಂಡಿರುವ ರಂಜಿತ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇದನ್ನೂ ಓದಿ : I LOVE U ರಚ್ಚು ಸಿನಿಮಾ ವೇಳೆ ದುರಂತ : ನಾಲ್ವರ ಬಂಧನ, ಸಂಕಷ್ಟದಲ್ಲಿ ಚಿತ್ರತಂಡ

ಇದನ್ನೂ ಓದಿ : ಮದ್ವೆ ಯಾವಾಗ ಎಂದವರಿಗೆ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಏನಂದ್ರು ಗೊತ್ತಾ…?!

ಘಟನೆ ನಡೆಯುತ್ತಿದ್ದಂತೆ ಶೂಟಿಂಗ್ ನಿಲ್ಲಿಸಿ ಚಿತ್ರತಂಡ ಪ್ಯಾಕಪ್ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿತ್ತು. ಚಿತ್ರೀಕರಣಕ್ಕೆ ಸಿನಿಮಾ ತಂಡ ಸ್ಥಳೀಯ ಪೊಲೀಸರ ಅನುಮತಿ ಸಹ ಪಡೆದುಕೊಂಡಿರಲಿಲ್ಲ. ಇನ್ನು ನಿರ್ಮಾಪಕ ಗುರು ದೇಶಪಾಂಡೆ ನಾಪತ್ತೆಯಾಗಿದ್ದಾರೆ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಬಿಡದಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments are closed.