ಬಾಲಿವುಡ್ ಹಾಡುಗಳು ಹಿಟ್ ಆಗೋದು ಅದಕ್ಕೆ ಸ್ಯಾಂಡಲ್ ವುಡ್ ನಟ-ನಟಿಯರು ಹೆಜ್ಜ ಹಾಕೋದು ಕಾಮನ್. ಸದ್ಯ ಎಲ್ಲೆಡೆ ಟ್ರೆಂಡ್ ಆಗಿರೋದು ಪರಮ ಪರಮ ಸುಂದರಿ ಹಾಡು. ಈ ಹಾಡಿಗೆ ಸೂಪರ್ ಮಮ್ಮಿ ಖ್ಯಾತಿಯ ಪ್ರಿಯಾಂಕಾ ಉಪೇಂದ್ರ್ ಹೆಜ್ಜೆ ಹಾಕಿದ್ದು, ಅಭಿಮಾನಿಗಳಿಗಾಗಿ ವಿಡಿಯೋ ಶೇರ್ ಮಾಡಿದ್ದಾರೆ.

ಬಾಲಿವುಡ್ ನಟಿ ಕೃತಿ ಸನೋನ್ ಮೈಬಳುಕಿಸಿ ಕುಣಿದಿರುವ ಮಿಮಿ ಚಿತ್ರ ಪರಮ ಪರಮ ಸುಂದರಿ ಹಾಡು ಸದ್ಯ ಬಾಲಿವುಡ್, ಸ್ಯಾಂಡಲ್ ವುಡ್ , ಟಾಲಿವುಡ್ ಎಲ್ಲೆಡೆಯೂ ಟ್ರೆಂಡ್ ಸೃಷ್ಟಿಸಿದೆ. ಮೊನ್ನೆ ಮೊನ್ನೆಯಷ್ಟೇ ಕಿರುತೆರೆ ನಟಿ ವೈಷ್ಣವಿ ಗೌಡ ಈ ಹಾಡಿಗೆ ಹೆಜ್ಜೆ ಹಾಕಿದ್ದರು.

ಇದರ ಬೆನ್ನಲ್ಲೇ, ಸದ್ಯ ಕೋಲ್ಕತ್ತಾದ ತವರು ಮನೆಯಲ್ಲಿ ವೆಕೇಶನ್ ಎಂಜಾಯ್ ಮಾಡ್ತಿರೋ ಪ್ರಿಯಾಂಕಾ ಉಪೇಂದ್ರ್ ತಂಗಿಯ ಜೊತೆ ಪರಮ ಪರಮ ಸುಂದರೀ ಹಾಡಿಗೆ ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಾವು ಪರಮ ಸುಂದರಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವನ್ನು ಪ್ರಿಯಾಂಕಾ ಶೇರ್ ಮಾಡಿದ್ದು, ಲಕ್ಷಾಂತರ ಅಭಿಮಾನಿಗಳು ಹಾಡಿಗೆ ಲೈಕ್ ಒತ್ತಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ.
ಇದನ್ನೂ ಓದಿ : ಮತ್ತೊಂದು ಪ್ರಾಜೆಕ್ಟ್ ಗೆ ಸಿದ್ಧವಾಯ್ತು ಹೊಂಬಾಳೆ ಫಿಲ್ಸ್ಮಂ: ಅನ್ನದಾತನ ಕತೆಯೊಂದಿಗೆ ಬರಲಿದ್ಯಾ ಸಿನಿಮಾ ?
ಇದನ್ನೂ ಓದಿ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು : 2 ತಿಂಗಳ ಬಳಿಕ ಬಿಡುಗಡೆ ಭಾಗ್ಯ
(Priyanka Upendra dance for parama sundari song)