ಚಾಲಕನ ದಾರಿ ತಪ್ಪಿಸಿದ Google Map ! ಲಾರಿಗೆ ಎಕ್ಸ್‌ಪ್ರೆಸ್‌ ರೈಲು ಢಿಕ್ಕಿ

ಬೆಂಗಳೂರು : ದೂರ ಪ್ರಯಾಣದ ವೇಳೆಯಲ್ಲಿ ಗೂಗಲ್‌ ಮ್ಯಾಪ್‌ ಬಳಕೆ ಮಾಡೋದು ಮಾಮೂಲು. ಆಂತೆಯೇ ಚಾಲಕನೋರ್ವ ಗೂಗಲ್‌ ಮ್ಯಾಪ್‌ ನಂಬಿ ಲಾರಿ ಚಲಾಯಿಸಿ ದ್ದಾನೆ. ಆದರೆ ಗೂಗಲ್‌ ಮ್ಯಾಪ್‌ ಚಾಲಕನನ್ನು ಯಾಮಾರಿಸಿದ್ದು, ಲಾರಿ ಎಕ್ಸ್‌ಪ್ರೆಸ್‌ ರೈಲಿಗೆ ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಬಾರೀ ದುರಂತವೊಂದು ತಪ್ಪಿದಂತಾಗಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೈಸೂರು ಮತ್ತು ಪುದುಕೋಟೈ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲಿಗೆ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಲಾರಿಯ ಇಂಜಿನ್‌ ಸಂಪೂರ್ಣವಾಗಿ ಪೀಸ್‌ ಪೀಸ್‌ ಆಗಿದೆ. ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಹಾಗೂ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗೂಗಲ್‌ ಮ್ಯಾಪ್‌ ನಂಬಿ ಕೆಟ್ಟ ಲಾರಿ ಚಾಲಕ !

ರಾತ್ರಿ 9 ಗಂಟೆ ಸುಮಾರಿಗೆ ಲಾರಿ ಚಾಲಕ ಗೂಗಲ್ ಮ್ಯಾಪ್ ಅಲ್ಲಿ ಲೊಕೇಶನ್‌ ಸೆಟ್‌ ಮಾಡಿಕೊಂಡು, ಲಾರಿ ಚಲಾಯಿಸಿಕೊಂಡು ಬಂದಿದ್ದಾನೆ. ಆದರೆ ಕಳೆದ ಎರಡು ವರ್ಷಗಳ ಹಿಂದೆಯೇ ರಸ್ತೆಯನ್ನು ಬಂದ್‌ ಮಾಡಿ ಪಕ್ಕದಲ್ಲಿಯೇ ಅಂಡರ್‌ ಪಾಸ್‌ ನಿರ್ಮಾಣ ಮಾಡಲಾಗಿತ್ತು. ಆದರೆ ಅವೈಜ್ಞಾನಿಕವಾಗಿ ಅಂಡರ್‌ಪಾಸ್‌ ಕಾಮಗಾರಿಯನ್ನು ನಡೆಸಲಾಗಿತ್ತು. ಹೀಗಾಗಿ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಲಾರಿ ಚಾಲಕನಿಗೆ ಇದ್ಯಾವುದರ ಅರಿವೇ ಇರಲಿಲ್ಲ. ಹೀಗಾಗಿ ಚಾಲಕ ಹಳೆಯ ರಸ್ತೆಯಲ್ಲಿಯೇ ಸಾಗಿದ್ದಾನೆ. ಆದರೆ ಲಾರಿಯನ್ನು ಹಳಿ ದಾಟಿಸುವ ವೇಳೆಯಲ್ಲಿಯೇ ರೈಲು ಲಾರಿಗೆ ಢಿಕ್ಕಿ ಹೊಡೆದಿದೆ. ಈ ವೇಳೆಯಲ್ಲಿ ಚಾಲಕ ಲಾರಿಯನ್ನು ಬಿಟ್ಟು ಪಕ್ಕಕ್ಕೆ ಓಡಿದ್ದಾನೆ. ಇದರಿಂದಾಗಿ ಅನಾಹುತವೊಂದು ತಪ್ಪಿದಂತಾಗಿದೆ. ರೈಲು ಸುಮಾರು ಅರ್ಧ ಕಿ.ಲೋ ಮೀಟರ್‌ ನಷ್ಟು ದೂರದ ವರೆಗೂ ಲಾರಿಯನ್ನು ಎಳೆದುಕೊಂಡು ಹೋಗಿತ್ತು.

ಅಧಿಕಾರಿಗಳ ಎಡವಟ್ಟಿಗೆ ಸಾರ್ವಜನಿಕರ ಹಿಡಿಶಾಪ

ರೈಲು ಅಪಘಾತದಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಲಾರಿಯ ಅವಶೇಷಗಳನ್ನು ತೆರವು ಮಾಡಲು ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯನ್ನು ನಡೆಸಬೇಕಾಯ್ತು. ಹೀಗಾಗಿ ಕೇರಳ ಹಾಗೂ ತಮಿಳುನಾಡಿನ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಆದರೆ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಬೈಯ್ಯಪ್ಪನಹಳ್ಳಿ ರೈಲ್ವೇ ಪೊಲೀಸರು ಹಾಗೂ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕುಡಿದ ಮತ್ತಲ್ಲಿ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ : ಬಿಬಿಎಂಪಿ ಅಧಿಕಾರಿ ಅರೆಸ್ಟ್‌

ಇದನ್ನೂ ಓದಿ : ಕರಾವಳಿ ಸೇರಿ ರಾಜ್ಯದಲ್ಲಿ 4 ದಿನಗಳ ಭಾರೀ ಮಳೆ : ಯೆಲ್ಲೋ ಅಲರ್ಟ್‌ ಘೋಷಣೆ

(Google Map who misled the driver! Express train crashes into lorry, misses tragedy)

Comments are closed.