ಸ್ಯಾಂಡಲ್‌ವುಡ್ ನಟಿ ಪ್ರಿಯಾಂಕ ತಿಮ್ಮೇಶ್ ಬಿಗ್‌ಬಾಸ್ ಮೂಲಕ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ಮಾತಿನ ಶೈಲಿ, ಬ್ಯೂಟಿಪುಲ್ ಲುಕ್, ನೇರ ಮಾತಿನ ಮೂಲಕ ವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಪ್ರಿಯಾಂಕ, ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವಲ್ಲೇ ಕ್ಯಾಮರಾ ಮುಂದೆ ನಿಂತು ಕೊಟ್ಟಿರೋ ಪೋಟೋಗಳು ಪಡ್ಡೆಗಳ ನಿದ್ದೆಕದ್ದಿದೆ.

ಪ್ರಿಯಾಂಕ ತಿಮ್ಮೇಶ್. ಪರಿಶುದ್ದ ಮಲೆನಾಡ ಬೆಡಗಿ. ಕನ್ನಡದ ಗಣಪ, ಅಖಿರಾ, ಪಟಾಕಿ ಹಾಗೂ ತಮಿಳಿನ ಉತ್ತರವು ಮಹಾರಾಜ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ಭೀಮ ಸೇನ ನಳಮಹರಾಜ, ಶುಗರ್ ಲೆಸ್ ಹಾಗೂ ಅರ್ಜುನ್ ಗೌಡ ಸಿನಿಮಾ ತೆರಗೆ ಬರಲು ಸಿದ್ದವಾಗಿದೆ. ಬಿಗ್‌ಬಾಸ್ ನಂತರದಲ್ಲಿ ಪ್ರಿಯಾಂಕ ತಿಮ್ಮೇಶ್ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಬರ್ತಿದ್ದು, ಹಲವು ಸಿನಿಮಾಗಳಲ್ಲಿ ಪಿಗ್ಗಿ ಬ್ಯುಸಿಯಾಗಿದ್ದಾರೆ.

ಈ ನಡುವಲ್ಲೇ ಪ್ರಿಯಾಂಕ, ಬೋಲ್ಡ್ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬೋಲ್ಡ್ ಪೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ. ಮಾತ್ರವಲ್ಲ ನಿಮ್ಮ ಫ್ಯಾಷನ್ ಹುಡುಕಲು ವಯಸ್ಸು ಮುಖ್ಯವಲ್ಲ ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕ ಅವರ ಬೋಲ್ಡ್ ಪೋಟೋಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ.

ಇದನ್ನೂ ಓದಿ : ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್
ಬಿಗ್‌ಬಾಸ್ ಕನ್ನಡ ಶೋ ಮೂಲಕ ವೈಲ್ಡ್ ಕಾರ್ಡ್ ಮೂಲ ಎಂಟ್ರಿ ಗಿಟಿಸಿದ್ದ ಪ್ರಿಯಾಂಕ, ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸಿನಿಮಾವೊಂದರ ಸಲುವಾಗಿಯೇ ತಮ್ಮ ತೂಕವನ್ನೂ ಹೆಚ್ಚಿಸಿಕೊಂಡಿದ್ದಾರಂತೆ. ಪ್ರಿಯಾಂಕ ಮಾಡಿರೋ ಹಾಟ್ ಪೋಟೋ ಗಳು ಸಾಕಷ್ಟು ವೈರಲ್ ಆಗಿವೆ.

ಅದ್ರಲ್ಲೂ ಪ್ರಿಯಾಂಕ ಪೋಟೋಗಳಿಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಪ್ರಿಯಾಂಕ ಫ್ಯಾಷನ್ ಪೋಟೋಗೆ ಕ್ಯೂಟ್, ಹಾಟ್, ಬ್ಯೂಟಿಪುಲ್ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದು, ಪೋಟೋ ಶೂಟ್‌ಗಳ್ಲಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : “ಬಾ ಗುರು ಕನ್ನಡ ಸಿನಿಮಾ ನೋಡೋಣ” : ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ ಕನ್ನಡ ಆಲ್ಬಮ್ ಸಾಂಗ್
( Age is not important to fashion Priyanka Thimmesh : See Photos )