Rahul Gandhi : ಉತ್ತರ ಪ್ರದೇಶ ಭೇಟಿಗೆ ರಾಹುಲ್‌ ಗಾಂಧಿಗೆ ಅವಕಾಶ ನೀಡಿದ ಉತ್ತರ ಪ್ರದೇಶ ಸರಕಾರ

ನವದೆಹಲಿ : ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಲು ಯು.ಪಿ. ಸರಕಾರ ಅನುಮತಿಯನ್ನು ನಿರಾಕರಿಸಿದೆ. ಪ್ರತಿಭಟನೆಯ ವೇಳೆಯಲ್ಲಿ ರೈತರ ಮೇಲೆ ಕಾರು ಹಾರಿಸಿ ಕೊಲೆ ನಡೆದಿದ್ದ ಲಖಿಂಪುರ ಭೇಟಿಗಾಗಿ ರಾಹುಲ್‌ ಗಾಂಧಿ ಅವರಿಗೆ ಉತ್ತರ ಪ್ರದೇಶ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಜೊತೆಗೆ ಯಾವುದೇ ಕಾರಣಕ್ಕೂ ಬರಬೇಡಿ ಎಂದು ಲಖನೌ ಪೊಲೀಸ್‌ ಕಮಿಷನರ್‌ ಡಿ.ಕೆ.ಠಾಕೂರ್‌ ತಿಳಿಸಿದ್ದಾರೆ.

ದೇಶದಲ್ಲಿ ಈಗ ಸರ್ವಾಧಿಕಾರಿ ಆಡಳಿತವಿದೆ. ನಿನ್ನೆಯಿಂದಲೂ ನಮಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡದಂತೆ ತಿಳಿಸಲಾಗುತ್ತಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಅವರಿಂದ ಲಿಖಿತ ಪತ್ರ ಬಂದಿದ್ದು, ಸ್ಥಳದಲ್ಲಿ ನಿಷೇಧಾಜ್ಞೆ ಇದೆ ಹಾಗೂ ಅವರ ಭೇಟಿಯಿಂದಾಗಿ ಸಮಸ್ಯೆ ಸೃಷ್ಟಿಯಾಗಬಹುದು. ಹೀಗಾಗಿ ಅವರ ಭೇಟಿಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಿಟ್ಟು ದೆಹಲಿಗೆ ಬರಲಾರೆ : ಸೋನಿಯಾ ಆಹ್ವಾನ ತಿರಸ್ಕರಿಸಿದ ಸಿದ್ದರಾಮಯ್ಯ

ಭಾನುವಾರ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರ ಹತ್ಯೆ ಮತ್ತು ನಂತರದ ಹಿಂಸಾಚಾರದಲ್ಲಿ ನಾಲ್ಕು ಮಂದಿ ಸಾವಿಗೀಡಾದ ಘಟನೆ ನಡೆದಿದೆ. ಹಿಂಸಾಚಾರ ಮರುಕಳಿಸುವ ಸಾಧ್ಯತೆಯ ಮೇರೆಗೆ ಲಖಿಂಪುರ- ಖೇರಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Priyanka Gandhi Vadra Arrest : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಂಧನ

(The Uttar Pradesh government not allowed Rahul Gandhi to visit Uttar Pradesh)

Comments are closed.