ಮಂಗಳವಾರ, ಜೂನ್ 17, 2025
HomeCinemaಸೈಕೋ ಸುಂದರಿಗೆ ಟ್ರೋಲ್ ಕಾಟ: ಬ್ಯಾಡ್ ಕಮೆಂಟ್ ವಿರುದ್ಧ ಪೊಲೀಸರ ಮೊರೆ ಹೋದ ನಟಿ

ಸೈಕೋ ಸುಂದರಿಗೆ ಟ್ರೋಲ್ ಕಾಟ: ಬ್ಯಾಡ್ ಕಮೆಂಟ್ ವಿರುದ್ಧ ಪೊಲೀಸರ ಮೊರೆ ಹೋದ ನಟಿ

- Advertisement -

ಸೈಕೋ ಸುಂದರಿ, ಸ್ಯಾಂಡಲ್ ವುಡ್ ನ ಹಾಟ್ ಬೆಡಗಿ ಎಂದೇ ಕರೆಯಿಸಿಕೊಳ್ಳೋ ನಟಿ ಅನಿತಾ ಭಟ್ ತಮ್ಮ ಸೋಷಿಯಲ್ ಮೀಡಿಯಾ ಸ್ವಾತಂತ್ರಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಅನಿತಾ ಭಟ್ ಹಲವಾರು ವಿಚಾರಗಳು, ಪುಸ್ತಕಗಳ ಬಗ್ಗೆ ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಹವ್ಯಾಸ ಹೊಂದಿದ್ದಾರೆ. ಆದರೆ ಈ ಪೋಸ್ಟ್ ಗಳಿಗೆ ಕೆಲವರು ವೈಯಕ್ತಿಕ ದಾಳಿ ನಡೆಸಿ ಅಶ್ಲೀಲ ಕಮೆಂಟ್ ಮಾಡುತ್ತಿದ್ದಾರೆ.

ಅಸಭ್ಯ ವರ್ತನೇ, ಅಶ್ಲೀಲ ಕಮೆಂಟ್ ಮಾಡುವ ಕೆಲ ಅಕೌಂಟ್ ದಾರರ ವಿರುದ್ಧ ಕ್ರಮ ಜರುಗಿಸುವಂತೆ ನಟಿ ಅನಿತಾ ಭಟ್ ಒತ್ತಾಯಿಸಿದ್ದು ಯಲಹಂಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಂಪ್ಲೆಂಟ್ ಪ್ರತಿಯೊಂದಿಗೆ ಟ್ವೀಟ್ ಮಾಡಿರುವ ಅನಿತಾ ಭಟ್, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದು.ವೈಯಕ್ತಿನ ನಿಂದನೆ,ದಾಳಿ ಮಾಡುವ ವೇದಿಕೆ ಅಲ್ಲ. ನಮ್ಮ ಜೀವನಕ್ಕೆ ನಾವೇ ಜವಾಬ್ದಾರರಾದಾಗ ಬೇರೆಯವರಿಗೆ ಮಾತನಾಡುವ ಹಕ್ಕಿಲ್ಲ ಎಂದು ಬರೆದಿದ್ದಾರೆ.

ಈ ಹಿಂದೆ ಅನಿತಾ ಭಟ್ ಬ್ರಾಹ್ಮಣ್ಯ ಹಾಗೂ ಗೋಡೆ ಕುರಿತು ಟ್ವೀಟ್ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮಾತ್ರವಲ್ಲ ಗೋಡ್ಸೆ ದೇಶಭಕ್ತ ಎಂಬ ನಟಿ ಅನಿತಾ ಭಟ್ ಅಭಿಪ್ರಾಯಕ್ಕೆ ತೀವ್ರ ವಿರೋಧ ಹಾಗೂ ಕಮೆಂಟ್ ಗಳು ಬಂದಿದ್ದವು.

( Anita Bhatt has lodged a complaint with the police against the troll pages )

RELATED ARTICLES

Most Popular