ಭಾನುವಾರ, ಏಪ್ರಿಲ್ 27, 2025
HomeCinemaಪವರ್ ಸ್ಟಾರ್ ಅಭಿನಯದ ಗಂಧದ ಗುಡಿ ಬಿಡುಗಡೆ ಯಾವಾಗ ಗೊತ್ತಾ ?

ಪವರ್ ಸ್ಟಾರ್ ಅಭಿನಯದ ಗಂಧದ ಗುಡಿ ಬಿಡುಗಡೆ ಯಾವಾಗ ಗೊತ್ತಾ ?

- Advertisement -

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾವು ಒಪ್ಪಿಕೊಳ್ಳಲು ಅಸಾಧ್ಯವಾದ ಕಟು ಸತ್ಯವಾಗಿ ಉಳಿದು ಬಿಟ್ಟಿದೆ. ಪುನೀತ್‌ ನಿಧನರಾಗುವ ಮುಂಚೆ ಹಲವು ಸಿನಿಮಾಗಳು ಅಂತಿಮ ಹಂತದವರೆಗೂ ತಲುಪಿತ್ತು. ಅದರಲ್ಲಿ ಗಂಧದ ಗುಡಿ ಸಿನಿಮಾವನ್ನು ಚಿತ್ರ ತಂಡ ಬಿಡುಗಡೆ ಮಾಡಲು ಯೋಚಿಸುತ್ತಿದೆ ಎಂಬ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿದೆ.

ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಗಂಧದ ಗುಡಿ ಸಿನಿಮಾಕ್ಕಾಗಿ ಪುನೀತ್‌ 2 ತಿಂಗಳು ಕಾಡನ್ನು ಸುತ್ತಿದ್ದಾರೆ. ಆ ಸಮಯದಲ್ಲಿ ಕೆಲ ಚಿತ್ರಿಕರಣಗಳು ನಡೆದಿದ್ದವು.  ಚಿತ್ರವನ್ನು ನವೆಂಬರ್‌ 1 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. 90 ನಿಮಿಷಗಳ ಆ ಚಿತ್ರವನ್ನು ಕನ್ನಡ ರಾಜ್ಯೋತ್ಸವದ ದಿನ ರಾಜ್ಯದ ಜನತೆ ಎದುರಿಡಲು ಪುನೀತ್‌ ಆಸೆ ಪಟ್ಟಿದ್ದರು.

ಇದನ್ನೂ ಓದಿ: ಪುನೀತ್‌ ಮನೆಗೆ ಸೆಲೆಬ್ರೆಟಿಗಳ ದಂಡು : ಅಪ್ಪು ನೆನೆದು ಕಣ್ಣೀರಿಟ್ಟ ಜಯಪ್ರದಾ, ರಾಗಿಣಿ, ಪ್ರಿಯಾಮಣಿ

ಪುನೀತ್‌ ಕಂಡ ಕನಸು ಪುನೀತ್‌ ಮೃತ ಪಟ್ಟ ಕಾರಣದಿಂದ ನನಸಾಗಲಿಲ್ಲ. ಆದರೆ  ಗಂಧದ ಗುಡಿ ಸಿನಿಮಾವನ್ನು ಪುನೀತ್‌ ಪತ್ನಿ ಜೊತೆ ಮಾತುಕತೆ ನಡೆಸಿ ಪುನೀತ್‌ ರಾಜ್‌ ಕುಮಾರ್‌ ಅವರ 11 ನೇ ದಿನದ ಕಾರ್ಯದ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ ಎಂದು ಪುನೀತ್‌ ಆಪ್ತವಲಯದಿಂದ ಮಾತುಗಳು ಕೇಳಿಬರುತ್ತವೆ.

ಇದನ್ನೂ ಓದಿ: ಪುನೀತ್‌ ರಾಜ್‌ ಕುಮಾರ್‌ 11 ನೇ ದಿನದ ಕಾರ್ಯಕ್ಕೆ ಸಿದ್ಧತೆ : ನ.9 ರಂದು ಅಭಿಮಾನಿಗಳಿಗೆ ಅನ್ನದಾನ

( Do you know when power star starrer Gandha Gudi released?)

RELATED ARTICLES

Most Popular