ಪುನೀತ್‌ ಮನೆಗೆ ಸೆಲೆಬ್ರೆಟಿಗಳ ದಂಡು : ಅಪ್ಪು ನೆನೆದು ಕಣ್ಣೀರಿಟ್ಟ ಜಯಪ್ರದಾ, ರಾಗಿಣಿ, ಪ್ರಿಯಾಮಣಿ

ಪುನೀತ್ ರಾಜ್ ಕುಮಾರ್ (Puneeth Raj Kumar) ನಿಧನದ ಹಿನ್ನೆಲೆಯಲ್ಲಿ ಸೆಲೆಬ್ರೆಟಿಗಳು ಪುನೀತ್ ನಿವಾಸಕ್ಕೆ ಭೇಟಿ ನೀಡುತ್ತಿದ್ದು ಪುನೀತ್ ಪತ್ನಿ,ಕುಟುಂಬಸ್ಥರು ಹಾಗೂ ಸಹೋದರರನ್ನು ಸಂತೈಸುವ ಯತ್ನ ನಡೆಸಿದ್ದಾರೆ.

ಪುನೀತ್ ರನ್ನು ಚಿಕ್ಕ ಮಗುವಾಗಿದ್ದಾಗಿನಿಂದಲೂ ಎತ್ತಿ ಆಡಿಸಿದ ನಟಿ ಜಯಪ್ರದಾ ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದು ಪುನೀತ್ ರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ನಾನು ರಾಜ್ ಕುಟುಂಬದಲ್ಲಿ ಒಬ್ಬಳಾಗಿದ್ದೆ. ಪುನೀತ್ ರಾಜ್ ಕುಮಾರ್ ಇಲ್ಲ ಎಂಬ ಸಂಗತಿ ಒಪ್ಪಿಕೊಳ್ಳುವುದೇ ಕಷ್ಟವಾಗುತ್ತಿದೆ ಎಂದಿದ್ದಾರೆ.

ಇನ್ನು ನಟಿ ಪ್ರಿಯಾಮಣಿ ತಮ್ಮ ಪತಿ ಜೊತೆ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದು ಸಹೋದರನ ನಿಧನದ ದುಃಖದಲ್ಲಿದ್ದ ಶಿವಣ್ಣನನ್ನು ಸಾಂತ್ವನಿಸುವ ಪ್ರಯತ್ನ ಮಾಡಿದ್ದಾರೆ.

ನಟಿ ರಾಗಿಣಿ ಪುನೀತ್ ಪತ್ನಿ ಅಶ್ವಿನಿಯವರನ್ನು ಭೇಟಿ ಮಾಡಿದ್ದು ಸಂತಾಪ ಕೋರಿದ್ದಾರೆ. ಬಳಿಕ ಮಾತನಾಡಿದ ರಾಗಿಣಿ, ಪುನೀತ್ ನಿಧನದಿಂದ ಸ್ಯಾಂಡಲ್ ವುಡ್ ಗೆ ಆಗಿರುವ ನಷ್ಟವನ್ನು ತುಂಬಿಕೊಡಲು ಸಾಧ್ಯವಿಲ್ಲ.

ಸದಾ ನಗು ನಗುತ್ತ ಹೊಸಬರನ್ನು ಪ್ರೋತ್ಸಾಹಿಸುತ್ತ ಇರುತ್ತಿದ್ದ ಪುನೀತ್ ರಾಜ್ ಕುಮಾರ್ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಭಾವುಕರಾಗಿದ್ದಾರೆ. ತಬಲಾ ನಾಣಿ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು ರಾಜ್ ಕುಮಾರ್ ನಿಲ್ಲದ ಅರಮನೆಯಲ್ಲಿ ಕುಟುಂಬ ಸದಸ್ಯರನ್ನು ಸಂತೈಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ : Puneeth Raj Kumar ನಿಧನದ ಐದೇ ದಿನಕ್ಕೆ ಅಪ್ಪು ಪುತ್ರಿ ಧೃತಿ ವಿದೇಶಕ್ಕೆ : ದಿಟ್ಟ ನಿರ್ಧಾರದ ಹಿಂದಿದೆ ಭಾವನಾತ್ಮಕ ವಿಚಾರ

ಇದನ್ನೂ ಓದಿ : ಪುನೀತ್ ರಾಜ್‌ ಕುಮಾರ್ ಸಾವಿನ ಸತ್ಯ ಹುಡುಕಲು ಆಗ್ರಹ: ತನಿಖೆಗೆ ಆಗ್ರಹಿಸಿ ದಾಖಲಾಯ್ತು ದೂರು

( Actress Priyamani, Jaya pradha and Ragini Dwivedi Visit Puneeth Raj Kumar House )

Comments are closed.