ಮಂಗಳವಾರ, ಜೂನ್ 17, 2025
HomeCinemaSruthiHariharan: ಹೆಡ್ ಬುಷ್ ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಬಂದ ಶ್ರುತಿ ಹರಿಹರನ್

SruthiHariharan: ಹೆಡ್ ಬುಷ್ ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಬಂದ ಶ್ರುತಿ ಹರಿಹರನ್

- Advertisement -

ಮೀಟೂ ಆರೋಪದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ನಟಿ ಶ್ರುತಿ ಹರಿಹರನ್ ಮತ್ತೊಮ್ಮೆ ಚಂದನವನಕ್ಕೆ ಮರಳಿದ್ದಾರೆ. ಈ ಭಾರಿ ಡಾಲಿ ಧನಂಜಯ್ ಗೆ ಜೊತೆಯಾಗಿರೋ ಶ್ರುತಿ ಹೆಡ್ ಬುಷ್ ನಲ್ಲಿ ನಟಿಸಲಿದ್ದಾರೆ.

Shruthi1

ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಬಹುಭಾಷಾ ನಟಿ ಶ್ರುತಿ ಹರಿಹರನ್ ಕೆಲ ವರ್ಷಗಳಿಂದ ಸ್ಯಾಂಡಲ್ ವುಡ್ ಹಾಗೂ ನಟನೆಯಿಂದ ದೂರ ಉಳಿದಿದ್ದರು. ಮದುವೆ ಹಾಗೂ ಹೆಣ್ಣುಮಗುವಿನ ತಾಯಿಯಾದ ಕಾರಣಕ್ಕೆ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ಶ್ರುತಿ ಹರಿಹರನ್ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ.

Shruthi3

ಭೂಗತ ಲೋಕದ ಡಾನ್ ಜಯರಾಜ್ ಕತೆ ಆಧರಿಸಿದ ನಟ ಹಾಗೂ ನಿರ್ಮಾಪಕರ ಡಾಲಿ ಧನಂಜಯ್ ನಿರ್ಮಿಸುತ್ತಿರುವ ಸಿನಿಮಾದ ಮೂಲಕ ಶ್ರುತಿ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಹೆಡ್ ಬುಷ್ ನಲ್ಲಿ ಡಾಲಿ, ಶ್ರುತಿ ಜೊತೆ ಪಾಯಲ್ ರಜಪೂತ್, ವಶಿಷ್ಠ ಸಿಂಹ್, ಬಾಲುನಾಗೇಂದ್ರ ಹಾಗೂ ನಾಯಕ ನಟ ಲೂಸ್ ಮಾದಾ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Shruthi34

ಡಾಲಿ ಧನಂಜಯ್ ಹುಟ್ಟುಹಬ್ಬದಂದು ಸಿನಿಮಾದ ಫರ್ಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ರೆಟ್ರೋ ಶೈಲಿಯಲ್ಲಿ ಸಿದ್ಧವಾಗುತ್ತಿರುವ ಸಿನಿಮಾವನ್ನು ಎರಡು ಭಾಗದಲ್ಲಿ ತೆರೆಗೆ ತರಲು ಡಾಲಿ ಸಿದ್ಧತೆ ನಡೆಸಿದ್ದು, ಈ ಚಿತ್ರಕ್ಕೆ ಪತ್ರಕರ್ತ ಅಗ್ನಿಶ್ರೀಧರ್ ಚಿತ್ರಕತೆ ಬರೆದಿದ್ದಾರೆ.

Headbush1

ಕೊನೆಯದಾಗಿ ಆದ್ಯ ಸಿನಿಮಾದಲ್ಲಿ ನಟಿಸಿದ್ದ ಶ್ರುತಿ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಂಡಿದ್ದರು. ಆದರೆ ಮೀಟೂ ವಿವಾದದ ಬಳಿಕ ಇದು ಕನ್ನಡದಲ್ಲಿ ಶ್ರುತಿ ನಟಿಸುತ್ತಿರುವ ಮೊದಲ ಚಿತ್ರವಾಗಿದೆ.

Shruthi hariharan returning sandalwood with dolly’s headbush movie

RELATED ARTICLES

Most Popular