Sindhulokanath: ಬಾಂಬ್ ಬ್ಲ್ಯಾಸ್ಟ್ ಕತೆ ಹೇಳೋಕೆ ರಾ ಏಜೆಂಟ್ ಆಗಿ ಬರ್ತಿದ್ದಾರೆ ನಟಿ ಸಿಂಧು ಲೋಕನಾಥ್

ಕಳೆದ ಕೆಲ ವರ್ಷಗಳಿಂದ ಸ್ಯಾಂಡಲ್ ವುಡ್ ನಿಂದ ದೂರವೇ ಉಳಿದಿದ್ದ ನಟಿ ಸಿಂಧು ಲೋಕನಾಥ್, ಢಿಪರೆಂಟ್ ಲುಕ್ ಹಾಗೂ ವಿಭಿನ್ನ ಪಾತ್ರದಲ್ಲಿ ಮತ್ತೆ ಚಂದನವನಕ್ಕೆ ಕಾಲಿಡೋಕೆ ಸಜ್ಜಾಗಿದ್ದಾರೆ.

ಇದುವರೆಗೂ ಹಳ್ಳಿಹುಡುಗಿ, ಕಾಲೇಜ್ ಗರ್ಲ್ ಪಾತ್ರದಲ್ಲಿ ಮಿಂಚಿದ್ದ ಸಿಂಧು ಲೋಕನಾಥ್, ಮೊದಲ ಬಾರಿಗೆ ರಾ ಏಜೆಂಟ್ ಪಾತ್ರದಲ್ಲಿ ಇನ್ವಸ್ಟಿಗೇಶನ್ ಕಥೆಯೊಂದನ್ನು ತೆರೆಗೆ ತರಲಿದ್ದಾರೆ.

2008 ರಲ್ಲಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಸರಣಿ ಬಾಂಬ್ ಸ್ಪೋಟದ ಕತೆ ವೆಬ್ ಸೀರಿಸ್ ರೂಪದಲ್ಲಿ ತೆರೆಗೆ ಬರಲಿದೆ. ಈ ವೆಬ್ ಸೀರಿಸ್ ನ ಲೀಡ್ ರೋಲ್ ನಲ್ಲಿ ನಟಿ ಸಿಂಧು ಲೋಕನಾಥ್ ನಟಿಸುತ್ತಿದ್ದಾರೆ.

ಈ ಹಿಂದೆ ಲೂಸ್ ಕನೆಕ್ಷನ್ ಎಂಬ ವೆಬ್ ಸೀರಿಸ್ ನಲ್ಲಿ ಸಿಂಧು ನಟಿಸಿದ್ದು, ಇದು ಸಿಂಧುಗೆ ಎರಡನೇ ವೆಬ್ ಸೀರಿಸ್. ಅಟೆಮ್ಟ್ ಟೂ ಮರ್ಡರ್ ಸಿನಿಮಾ ನಿರ್ಮಿಸಿದ್ದ ಅಮರ್ ಗೌಡ ಬೆಂಗಳೂರು ಸರಣಿ ಬಾಂಬ್ ಬ್ಲ್ಯಾಸ್ಟ್  ಹಾಗೂ ಆರೋಪಿಗಳ ಬಂಧನಕ್ಕೆ ಪೊಲೀಸರು ನಡೆಸಿದ ಸರ್ಕಸ್ ಸ್ಟೋರಿಯನ್ನು 10 ಎಪಿಸೋಡ್ ಗಳಲ್ಲಿ ತೆರೆಗೆ ತರಲಿದ್ದಾರೆ.

30 ನಿಮಿಷಗಳ ಈ ವೆಬ್ ಸೀರಿಸ್ ಡಿಸೆಂಬರ್ ವೇಳೆಗೆ ತೆರೆಗೆ ಬರಲಿದೆ. ಸಿಂಧು ಲೋಕನಾಥ್ ಜೊತೆ ಭರತ್ ಬೋಪಣ್ಣ ಸೇರಿದಂತೆ ಹಲವು ಬಣ್ಣಹಚ್ಚಿದ್ದಾರೆ. ಈಗಾಗಲೇ 75 ರಷ್ಟು ಚಿತ್ರೀಕರಣ ಮುಗಿದಿದ್ದು, ವೆಬ್ ಸೀರಿಸ್ ಗೆ ಹೆಸರು ಫೈನಲ್ ಆಗಿಲ್ಲ. ತಮ್ಮ ಪಾತ್ರದ ಬಗ್ಗೆ ಮಾತನಾಡಿರೋ ಸಿಂಧು ಮೊದಲ ಬಾರಿಗೆ ಢಿಪರೆಂಟ್ ರೋಲ್ ಸಿಕ್ಕಿದೆ. ಉತ್ಸುಕಳಾಗಿ ನಟಿಸಿದ್ದೇನೆ ಎಂದಿದ್ದಾರೆ.

Actress sindhu loknath acting in web series related to bangalore bomb blast.

Comments are closed.