ಕೊರೋನಾದಿಂದ ರದ್ದಾಗಿದ್ದ 2019 ನೇ ಸಾಲಿನ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಹೈದ್ರಾಬಾದ್ ನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಹಲವು ಪ್ರಶಸ್ತಿಗಳು ದೊರೆತಿದ್ದು ಜ್ಯೂನಿಯರ್ ರೆಬೆಲ್ ಗೆ ಮೊದಲ ಗೌರವ ದಕ್ಕಿದೆ.
ರೆಬೆಲ್ ಸ್ಟಾರ್ ಪುತ್ರ ಅಭಿಷೇಕ ಅಂಬರೀಶ್ ಸ್ಯಾಂಡವ್ ವುಡ್ ಗೆ ಕಾಲಿಟ್ಟ ಮೊದಲ ಚಿತ್ರ ಅಮರನ ನಟನೆಗಾಗಿ ಅಭಿಷೇಕ್ ಗೆ ಅತ್ಯುತ್ತಮ ಹೊಸ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಚೊಚ್ಚಲಸಿನಿಮಾದಲ್ಲಿ ಜ್ಯೂನಿಯರ್ ರೆಬೆಲ್ ಸ್ಟಾರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಸ್ಯಾಂಡಲ್ ವುಡ್ ಸಂಭ್ರಮಿಸಿದೆ. ಈ ಮಧ್ಯೆ ಮಗನಿಗೆ ಸಂದ ಗೌರವಕ್ಕೆ ಸಮಾರಂಭದಲ್ಲಿ ಪಾಲ್ಗೊಂಡ ನಟಿ ಹಾಗೂ ಸಂಸದೆ ಸುಮಲತಾ ಹರ್ಷ ವ್ಯಕ್ತಪಡಿಸಿದ್ದಾರೆ. ಟ್ವೀಟ್ ನಲ್ಲಿ ಈ ಖುಷಿಹಂಚಿಕೊಂಡಿರುವ ಸುಮಲತಾ ಸಂತೋಷದ ಗಳಿಗೆಯಲ್ಲೂ ಅಂಬರೀಶ್ ಇರಬೇಕಿತ್ತು ಎಂದು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಅತ್ಯುತ್ತಮ ಚೊಚ್ಚಲ ಸಿನಿಮಾ ನಟನೆಗಾಗಿ ಅಭಿಷೇಕ್ ( best debut award) ಪಡೆದಿರುವುದು ಸಂಭ್ರಮ ಮತ್ತು ಹೆಮ್ಮೆಯ ಕ್ಷಣ. ನಟಿ ರಾಧಿಕಾ ಶರತ್ಕುಮಾರ್ ಮಗನ ಕುರಿತಾಗಿ ಆಡಿದ ಒಳ್ಳೆಯ ಮಾತಿಗೂ ಧನ್ಯವಾದಗಳು. ಈ ಕ್ಷಣಕ್ಕೆ ಅಂಬರೀಶ್ ಸಾಕ್ಷಿಯಾಗಿದ್ದರೇ ಸಂಭ್ರಮ ಖುಷಿ ಇಮ್ಮುಡಿಯಾಗುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ವರ್ಚುವಲ್ ಎಂಗೇಜಮೆಂಟ್ ಮೂಲಕ ಗಮನ ಸೆಳೆದ ಬಿಗ್ ಬಾಸ್ ಸೀಸನ್ 8 ಸ್ಪರ್ಧಿ
ಇದನ್ನೂ ಓದಿ : ಸಾಕ್ಷಿ ಅವಾರ್ಡ್ ಫಂಕ್ಷನ್ ನಲ್ಲಿ ಮಿಂಚಿದ ಪೂಜಾ ಹೆಗ್ಡೆ: ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್
( First Award to Abhishek Ambarish : Sumalatha, who recalled Ambarish )