Operation Hasta: ಕರ್ನಾಟಕದಲ್ಲಿ ಮತ್ತೆ ಆಫರೇಶನ್ ಗಲಾಟೆ: ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎಂದ ಬಿಎಸ್ವೈ

ದಾವಣಗೆರೆ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದೂರವಿದ್ದರೂ ಪಕ್ಷಗಳು ಆಗಲೇ ರಾಜಕೀಯ ಲೆಕ್ಕಾಚಾರ ಆರಂಭಿಸಿದ್ದು, ಚುನಾವಣೆಗಾಗಿ ಪಕ್ಷಾಂತರ ಆರಂಭವಾಗಿದೆ. ಈ ಮಧ್ಯೆ ಕಾಂಗ್ರೆಸ್ ನತ್ತ ಗುರುತರ ಆರೋಪ ಮಾಡಿರುವ ಬಿಎಸ್ವೈ, ಕಾಂಗ್ರೆಸ್ ಬಿಜೆಪಿ ನಾಯಕರನ್ನು ಸೆಳೆಯುತ್ತಿದೆ ಎಂದಿದ್ದಾರೆ.

ಯಾಕೆಂದರೇ ಈಗಾಗಲೇ ಕಾಂಗ್ರೆಸ್ ಹಲವು ಬಿಜೆಪಿ ನಾಯಕರನ್ನು ಸಂಪರ್ಕಿಸಿದ್ದು, ಕಾಂಗ್ರೆಸ್ ಗೆ ಅಹ್ವಾನಿಸಿದೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಮಾತ್ರವಲ್ಲ ಇದಕ್ಕೆಲ್ಲ ಡಿಕೆಶಿಯೇ ಕಾರಣ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಫರೇಶನ್ ಹಸ್ತದ ಮುಖಾಂತರವೇ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಚಿಂತನೆ ನಡೆಸಿದ್ದಾರಂತೆ. ಇದಕ್ಕಾಗಿ ಹಲವು ಕ್ಷೇತ್ರಗಳ ಬಿಜೆಪಿ ಹಾಗೂ ಜೆಡಿಎಸ್ ಎಂಎಲ್ಎಗಳನ್ನು ಡಿಕೆಶಿ ಟಾರ್ಗೆಟ್ ಮಾಡಿದ್ದು,ಅವರನ್ನು ಮನವೊಲಿಸಿ ಕೈಪಾಳಯಕ್ಕೆ ಸೇರಿಸಿಕೊಳ್ಳುವ ಸರ್ಕಸ್ ಆರಂಭಿಸಿದ್ದಾರೆ.

ಈಗಾಗಲೇ ಜೆಡಿಎಸ್ ನಾಯಕ ಮಧು ಬಂಗಾರಪ್ಪನವರನ್ನು ಡಿಕೆಶಿ ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದು, ಜೆಡಿಎಸ್ ಜಿ.ಟಿ.ದೇವೆಗೌಡರು ಕೂಡ ಕಾಂಗ್ರೆಸ್ ಹಾದಿಯಲ್ಲಿದ್ದಾರೆ. ಇನ್ನುಳಿದಂತೆ ಹಲವು ಜೆಡಿಎಸ್ ಶಾಸಕರು ಕಾಂಗ್ರೆಸ್ ಜೊತೆ ಕೈಜೋಡಿಸಲು ಪಕ್ಷ ತೊರೆಯುತ್ತಿದ್ದಾರೆ.

ಬಿಜೆಪಿಯ ಶಾಸಕರು ಹಾಗೂ ಗೆಲ್ಲುವ ಕುದುರೆಯಂತಹ ನಾಯಕರನ್ನು ಡಿಕೆಶಿ ಖುದ್ದು ಆಫರೇಶನ್ ಹಸ್ತದ ಮೂಲಕ ಬಿಜೆಪಿಗೆ ಆಹ್ವಾನಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಎಸ್ವೈ ಪಕ್ಷದ ಸಭೆಯಲ್ಲಿ ಈ ಆರೋಪ ಮಾಡಿದ್ದು, ಚುನಾವಣೆ ಹಾಗೂ ರಾಜಕೀಯದ ವಿಚಾರದಲ್ಲಿ ಯಾರನ್ನೂ ಲಘುವಾಗಿ ತೆಗೆದುಕೊಳ್ಳಬಾರದೆಂದು ಬಿಎಸ್ವೈ ಸೂಚನೆ ನೀಡಿದ್ದಾರಂತೆ.

(former cm bsy allegation d k shivkumar for operation hasta)

Comments are closed.