ಸದಾ ಕಾಲ ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡೋ ಅದ್ದೂರಿ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮಂ ಕೊಟ್ಟ ಮಾತಿನಂತೆ ತಮ್ಮ 12 ನೇ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದು, ಜಗ್ಗೇಶ್ ಮಾಲಿಕತ್ವದಲ್ಲಿ ರಾಘವೇಂದ್ರ ಸ್ಟೋರ್ ಆರಂಭಿಸಲಿದೆ.
ಎರಡು ದಿನಗಳ ಹಿಂದೆಯಷ್ಟೇ ಅನ್ನದಾತೋ ಸುಖಿಭವಃ ಎಂದಿದ್ದ ಹೊಂಬಾಳೆ ಫಿಲ್ಸ್ಮಂ ಸೆ. 22 ರಂದು 12 ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ರಿಲೀಸ್ ಮಾಡೋದಾಗಿ ಹೇಳಿಕೊಂಡಿತ್ತು. ಕೊಟ್ಟ ಮಾತಿನಂತೆ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್ ಮಾಡಿದೆ.

ರಾಘವೇಂದ್ರ ಸ್ಟೋರ್ ಹೆಸರಿನಲ್ಲಿ ಸಿನಿಮಾ ತೆಗೆಯಲಿರುವ ಹೊಂಬಾಳೆ ಫಿಲ್ಸ್ಮಂಗೆ ಜಗ್ಗೇಶ್ ಸಾಥ್ ನೀಡಲಿದ್ದಾರೆ. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯಶ್, ರಕ್ಷಿತ್ ಶೆಟ್ಟಿ ಹೀಗೆ ಸ್ಯಾಂಡಲ್ ವುಡ್ ನ ಎಲ್ಲ ಹೀರೋಗಳಿಗಾಗಿ ಸಿನಿಮಾ ನಿರ್ಮಿಸಲು ಸಿದ್ಧವಾಗಿರುವ ಮುಂದಿನ ಪ್ರಾಜೆಕ್ಟ್ ಗೆ ಜಗ್ಗೇಶ್ ರನ್ನು ಆಯ್ಕೆ ಮಾಡಿದೆ.
ಪುನೀತ್ ರಾಜ್ ಕುಮಾರ್ ಯುವರತ್ನ, ರಾಜ್ ಕುಮಾರದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಆನಂದ್ ರಾಮ್ ರಾಘವೇಂದ್ರ ಸ್ಟೋರ್ಸ್ ಗೆ ಆಕ್ಷ್ಯನ್ ಕಟ್ ಹೇಳಲಿದ್ದಾರಂತೆ. ಸಿನಿಮಾದ ಬಗ್ಗೆ ಮಾಹಿತಿ ನೀಡಿರುವ ಚಿತ್ರತಂಡ, ಸಾಮಾಜಿಕ ಸಂದೇಶವಿರುವ ಹಾಸ್ಯ ರಾಜಕೀಯಗಳನ್ನು ಒಳಗೊಂಡ ಹೊಸತನದ ಕತೆ ಹೇಳಲು ಹೊರಟಿದ್ದೇವೆ ಎಂದಿದೆ.
ಜಗ್ಗೇಶ್ ಮೊದಲ ಬಾರಿಗೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಟಿಸುತ್ತಿದ್ದು, ಅವರೊಂದಿಗೆ ಸಿನಿಮಾ ನಿರ್ಮಿಸುತ್ತಿರುವುದು ನಮ್ಮ ಭಾಗ್ಯ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಬಗ್ಗೆ ವಿವರವಾದ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ ನಿರ್ಮಾಪಕ ವಿಜಯ್ ಕಿರಂಗದೂರ.
ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಹೊಂಬಾಳೆ ಫಿಲ್ಮ್ಸಂ ಸಿನಿಮಾ ದ ಮೇಲೆ ಸಿನಿಮಾ ಘೋಷಿಸಿ ಅಚ್ಚರಿ ಸೃಷ್ಟಿಸಿದ್ದು, ರಿಚರ್ಡ್ ಆಂಟ್ಯನಿ, ಕಾಂತಾರಾ, ದ್ವಿತ್ವ, ರಾಘವೇಂದ್ರ ಸ್ಟೋರ್ ಹೀಗೆ ಸಾಲು ಸಾಲು ಸಿನಿಮಾಗಳು ಚಿತ್ರರಸಿಕರಿಗೆ ರಸದೌತಣ ನೀಡಲಿದೆ.
( Breaking News for Hommbale Movies : Raghavendra Store under Jaggesh Proprietorship )