ಭಾರತಕ್ಕೆ ಕೊನೆಗೂ ಮಣಿದ ಯುಕೆ : ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಗ್ರೀನ್‌ ಸಿಗ್ನಲ್

ನವದೆಹಲಿ : ಕೊರೊನಾ ಅಟ್ಟಹಾಸಕ್ಕೆ ಹೆದರಿ ಇಡೀ ಪ್ರಪಂಚವೇ ನಡುಗುತ್ತಿದೆ. ಹೀಗಿರುವಾಗ ಬೇರೆ ದೇಶದ ಪ್ರಜೆಗಳನ್ನು ತಮ್ಮ ದೇಶಕ್ಕೆ ಪ್ರವೇಶ ನೀಡಲು ಎಲ್ಲಾ ದೇಶಗಳು ನಿರ್ಬಂಧವನ್ನು ಹೇರುತ್ತಿದೆ. ಇದರ ಬೆನ್ನಲೇ ಯು.ಕೆ ಭಾರತದ ಕೋವಿಶೀಲ್ಡ್‌ ಲಸಿಕೆ ಪಡೆದವರನ್ನೂ ಕೂಡ ತಮ್ಮ ದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಲಿಲ್ಲಾ.

ಭಾರತದ ಒತ್ತಡಕ್ಕೆ ಕೊನೆಗೂ ಯುನೈಟೆಡ್‌ ಕಿಂಗ್‌ ಡಂ ಮಣಿದಿದೆ. ಕೋವಿಶೀಲ್ಡ್‌ ಲಸಿಕೆ ಪಡೆದವರ ದೇಶ ಎಂಟ್ರಿಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಈ ಮೊದಲು ಭಾರತದಲ್ಲಿ ಎರಡು ಡೋಸ್ ಕೋವಿಶೀಲ್ಡ್‌ ಲಸಿಕೆ ಪಡೆದಿದ್ದರೂ ಸಹ ಅಂತಹ ಪ್ರಯಾಣಿಕರು ಬಂದ ವೇಳೆ ಕ್ವಾರಂಟೈನ್‌ ಆಗುವುದನ್ನು ಯುಕೆ ಕಡ್ಡಾಯಗೊಳಿಸಿತ್ತು.

ಇದನ್ನೂ ಓದಿ: Good News : ಜಾನ್ಸನ್​ & ಜಾನ್ಸನ್​ ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಭಾರತದಲ್ಲಿ ಲಭ್ಯ !

ಆದರೆ ಇತರೆ ದೇಶಗಳಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಅಂತಹ ಯಾವುದೇ ನಿಯಮ ವಿಧಿಸಿರಲಿಲ್ಲ. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ:1 Cr Vaccination : ದೇಶದಲ್ಲಿಂದು ಬೃಹತ್‌ ಲಸಿಕಾ ಮೇಳ : ಕೊರೊನಾ ಲಸಿಕೆ ಪಡೆದ್ರು 1 ಕೋಟಿ ಜನ

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಯುಕೆ ಸರ್ಕಾರ ತನ್ನ ಪ್ರಯಾಣದ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದೆ. ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದವರ ಪ್ರಯಾಣಕ್ಕೆ ಈಗ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.

(UK gives green signal to CovShield vaccine)

Comments are closed.