ಸ್ಯಾಂಡಲ್‌ವುಡ್ ನಲ್ಲಿ ಇದೀಗ ದಿಗ್ಗಜ ನಾಯಕರ ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿದೆ. ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ -3 ಹಾಗೂ ದುನಿಯಾ ವಿಜಯ್ ಅವರ ಸಲಗ ಸಿನಿಮಾ ಅಕ್ಟೋಬರ್ 14ರಂದು ತೆರೆಗೆ ಬರ್ತಿದೆ. ಇದೀಗ ನಟರ ನಡುವೆ ಸ್ಟಾರ್ ವಾರ್ ಶುರುವಾಗಿದೆ ಅನ್ನೋ ಹೊತ್ತಲ್ಲೇ ಕಿಚ್ಚ ಸುದೀಪ್ ಸಲಗ ತಂಡಕ್ಕೆ ಶುಭ ಕೋರಿದ್ದಾರೆ.

ದಸರಾ ಹೊತ್ತಲ್ಲೇ ಸಲಗ ರಿಲೀಸ್ ಆಗ್ತಿದೆ. ಜೊತೆಗೆ ಸುದೀಪ್ ನಟನೆಯ ಕೋಟಿಗೊಬ್ಬ ಕೂಡ ಅದೇ ದಿನವೇ ಥಿಯೇಟರ್‌ಗೆ ಬರಲಿದೆ. ಆದರೆ ಎರಡು ಸಿನಿಮಾಗಳು ಕಳೆದ ಎರಡು ವರ್ಷಗಳಿಂದಲೂ ರಿಲೀಸ್‌ಗೆ ಕಾಯುತ್ತಿವೆ. ಅದ್ರಲ್ಲೂ ಸಲಗ ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ. ಸಿನಿಮಾದ ಬಗ್ಗೆ ದುನಿಯಾ ವಿಜಯ್ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಮಾತ್ರವಲ್ಲ ನಿರ್ಮಾಪಕ ಶ್ರೀಕಾಂತ್ ಸಿನಿಮಾಕ್ಕೆ ಸಾಕಷ್ಟು ಬಂಡವಾಳವನ್ನೂ ಹೂಡಿದ್ದಾರೆ.

ಸ್ಟಾರ್ ನಟರ ನಡುವೆ ಸ್ಟಾರ್ ವಾರ್ ಶುರುವಾಯ್ತು ಅನ್ನೊ ಹೊತ್ತಲ್ಲೇ ಕಿಚ್ಚ ಸಲಗ ತಂಡಕ್ಕೆ ವಿಶ್ ಮಾಡಿದ್ದಾರೆ. ನನ್ನ ಬೆಸ್ಟ್ ಫ್ರೆಂಡ್ ಶ್ರೀಕಾಂತ್ ಹಾಗೂ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ದುನಿನಾ ವಿಜಯ್ ಗೆ ಶುಭಾಯವನ್ನು ಕೋರುವುದಾಗಿ ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರು ಶುಭಕೋರುತ್ತಲೇ ಸಲಗ ತಂಡ ಸಖತ್ ಖುಷಿಯಾಗಿದ್ದಾರೆ.
ಇನ್ನೊಂದೆಡೆಯಲ್ಲಿ ದುನಿಯಾ ವಿಜಯ್ ಕೂಡ ಸುದೀಪ್ ಅಭಿನಯದ ಕೋಟಿಗೊಬ್ಬ – 3 ಸಿನಿಮಾಕ್ಕೆ ಶುಭಕೋರಿದ್ದಾರೆ. ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಸುದೀಪ್ ನಟಿಸುತ್ತಿದ್ದು, ಅವರ ಸಿನಿಮಾ ಯಶಸ್ಸನ್ನು ಕಾಣಲಿ ಎಂದಿದ್ದಾರೆ.
ಸ್ಯಾಂಡಲ್‌ವುಡ್ ನಲ್ಲಿ ಈ ಹಿಂದೆಯೂ ಸಾಕಷ್ಟು ದಿಗ್ಗಜ ನಟರ ಸಿನಿಮಾಗಳು ಒಂದೇ ದಿನ ತೆರೆ ಕಂಡಿದ್ದವು. ಆದ್ರೀಗ ಸುದೀಪ್ ಹಾಗೂ ದುನಿಯಾ ವಿಜಯ್ ನಟನೆಯ ಸಿನಿಮಾಗಳು ಮತ್ತೆ ದಾಖಲೆ ಬರೆಯುತ್ತಿವೆ. ಏನೇ ಆದ್ರೂ ಕೋಟಿಗೊಬ್ಬ ಹಾಗೂ ಸಲಗ ಸಿನಿಮಾಗಳು ಗೆಲವುವನ್ನು ಕಾಣಲಿ ಅನ್ನೋದು ಚಿತ್ರರಸಿಕರ ಅಭಿಪ್ರಾಯ.
ಇದನ್ನೂ ಓದಿ : ಒಂದೇ ದಿನ ಕೋಟಿಗೊಬ್ಬ-3, ಸಲಗ ರಿಲೀಸ್ : ಸುದೀಪ್, ವಿಜಯ್, ಶಿವಣ್ಣ ನಡುವೆ ಸ್ಟಾರ್ ವಾರ್
ಇದನ್ನೂ ಓದಿ : ದುನಿಯಾ ವಿಜಯ್ ಗೆ ಜೋಡಿಯಾದ ಮಂಗಳೂರು ಬೆಡಗಿ..!
( Kiccha Sudeep Wishes Dunia Vijay Salaga Team )