ಸೋಮವಾರ, ಏಪ್ರಿಲ್ 28, 2025
HomeCinemaGovinda: ಸ್ಯಾಂಡಲ್ ವುಡ್ ಗೆ ಬಂದ ಹೀರೋ ನಂ1: ಡೈನಾಮಿಕ್ ಪ್ರಿನ್ಸ್ ಗೆ ಜೋಡಿಯಾದ ಗೋವಿಂದಾ

Govinda: ಸ್ಯಾಂಡಲ್ ವುಡ್ ಗೆ ಬಂದ ಹೀರೋ ನಂ1: ಡೈನಾಮಿಕ್ ಪ್ರಿನ್ಸ್ ಗೆ ಜೋಡಿಯಾದ ಗೋವಿಂದಾ

- Advertisement -

ಬಾಲಿವುಡ್ ನ ಹೀರೋ ನಂ 1 ಖ್ಯಾತಿಯ ಗೋವಿಂದಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಗೋವಿಂದ್ ನಟಿಸಲಿದ್ದಾರೆ.

1986 ರಿಂದಲೂ ಹಿಂದಿಯಲ್ಲಿ ನಟಿಸುತ್ತಿರುವ  ಗೋವಿಂದಾ, ಸೌತ್ ಇಂಡಸ್ಟ್ರಿಯಲ್ಲಿ ಯಾವುದೇ ಸಿನಿಮಾದಲ್ಲೂ ಪೂರ್ಣ ಪ್ರಮಾಣದಲ್ಲಿ ನಟಿಸಿಲ್ಲ. ಇದೇ ಮೊದಲ ಬಾರಿಗೆ ಸೌತ್ ಇಂಡಸ್ಟ್ರಿಗೆ ಪೂರ್ತಿ ಪ್ರಮಾಣದಲ್ಲಿ ಎಂಟ್ರಿಕೊಡಲಿದ್ದಾರೆ.

ಕಳೆದ 10 ವರ್ಷದಿಂದ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿರುವ ನಟ ಗೋವಿಂದ್ ಡ್ಯಾನ್ಸ್ ಮತ್ತು ಸಿಂಗಿಂಗ್ ಶೋಗಳಲ್ಲಿ ನಿರ್ಣಾಯಕರಾಗಿ ಪಾಲ್ಗೊಳ್ಳುತ್ತಿದ್ದಾರೆ. ಹೀಗೆ ಕಿರುತೆರೆಯಲ್ಲಿ ಮಾತ್ರ ಸಕ್ರಿಯವಾಗಿರೋ ಗೋವಿಂದ್ ಚಂದನವನದ ಮೂಲಕ ಮತ್ತೆ ಹಿರಿತೆರೆಗೆ ಬರ್ತಿದ್ದಾರೆ.

ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾಗೆ ಗೋವಿಂದ್ ಎಂಟ್ರಿಬಗ್ಗೆ ಈಗಾಗಲೇ ನಿರ್ದೇಶಕ ಕಿರಣ್ ವಿಶ್ವನಾಥ್ ಹಾಗೂ ನಿರ್ಮಾಪಕ ನವೀನ್ ಗೋವಿಂದ್ ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಗೋವಿಂದ್ ಕನ್ನಡದ ಜೊತೆ ಒಳ್ಳೆಯ ನಂಟು ಹೊಂದಿದ್ದು, ಡಾ.ರಾಜ್ ಕುಮಾರ್  ದೊಡ್ಡ ಅಭಿಮಾನಿಯಾಗಿದ್ದಾರೆ. ಇತ್ತೀಚಿಗೆ ನಟಿ ಹರ್ಷಿಕಾ ಪೂಣಚ್ಚ್ ಗೋವಿಂದ ಅವರನ್ನು ಭೇಟಿ ಮಾಡಿದ್ದು, ಆಗ ಡಾ.ರಾಜ್ ಕುಮಾರ್ ಹಾಡು ಹಾಡಿ ಸಂಭ್ರಮಿಸಿದ್ದರು.

Bollywood actor govinda to make sandalwood debut with prajwal devaraj movie

RELATED ARTICLES

Most Popular