ಸ್ಯಾಂಡಲ್‌ವುಡ್‌ನ ಖ್ಯಾತ ನಟಿ, ಡಿಂಪಲ್ ಕ್ವೀನ್ ರಚಿತಾ ರಾಜ್‌ಗೆ ಇಂದು ಬರ್ತಡೇ ಸಂಭ್ರಮ. 29ನೇ ವಸಂತಕ್ಕೆ ಕಾಲಿರಿಸಿರುವ ರಚ್ಚುಗೆ ಅಭಿಮಾನಿಗಳಿಂದ ಅಭಿಮಾನದ ಹೊಳೆಯೇ ಹರಿಯುತ್ತಿದ್ದು, ನಟ, ನಟಿಯರು ಶುಭಾಶಯ ಕೋರಿದ್ದಾರೆ.

ಕಿರುತೆರೆಯ ಅರಸಿ ಧಾರವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ರಚಿತಾ ರಾಮ್ ನಂತರ ಚಂದನವನದ ಖ್ಯಾತ ನಟಿಯಾಗಿ ಹೊರಹೊಮ್ಮಿದ್ದಾರೆ. ಅದ್ರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ರಚ್ಚು, ತನ್ನ ಮೊದಲ ಸಿನಿಮಾದ ಮೂಲಕವೇ ಮೋಡಿ ಮಾಡಿದ್ದಾರೆ.

ರಚಿತಾರಾಮ್ ತಂದೆ ಕೆ.ಎಸ್.ರಾಮ್ ಮೂಲತಃ ಭರತನಾಟ್ಯ ಕಲಾವಿದರು. ಈಗಾಗಿಯೇ ರಚಿತಾ ಕೂಡ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಏಕ್ ಲವ್ ಯಾ, ಸೂಪರ್ ಮಚ್ಚಿ, ಡಾಲಿ, ಎಪ್ರಿಲ್, ವೀರಂ, ಲವ್ ಯೂ ರಚ್ಚು, ಬ್ಯಾಡ್ ಮ್ಯಾನರ್, ಶಬರಿ, ಮನ್ಸೂರ್ ರಾಗ, ಲವ್ ಮಿ ಆರ್ ಹೇಟ್ ಮೀ ಸೇರಿದಂತೆ ಹಲವು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದೆ.

ಚಂದನವನಕ್ಕೆ ಕಾಲಿರಿಸಿದ್ದ ರಚಿತಾ ರಾಮ್ ಎಂದೂ ತಿರುಗಿ ನೋಡಿದ್ದೇ ಇಲ್ಲ. ಗುಳಿ ಕೆನ್ನೆಯ ಬೆಡಗಿ ತನ್ನ ನಗುವಿನಿಂದಲೇ ಲಕ್ಷಾಂತರ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಅಭಿಯನ ಚಕ್ರವರ್ತಿ ಸುದೀಪ್, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಪುನಿತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಅಜಯ್ ರಾವ್, ಡಾರ್ಲಿಂಗ್ ಕೃಷ್ಟಾ ಸೇರಿದಂತೆ ಕನ್ನಡದ ಖ್ಯಾತ ನಾಮ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇದೀಗ 29ನೇ ವಸಂತಕ್ಕೆ ಕಾಲಿರಿಸಿರುವ ನಟಿ ರಚಿತಾ ರಾಮ್‌ಗೆ ಅಭಿಮಾನಿಗಳು ಶುಭಾಶಯವನ್ನು ಕೋರುತ್ತಿದ್ದಾರೆ.
( Sandalwood Actress Rachita Ram Celebrating her 29th Birthday )