ಸೋಮವಾರ, ಏಪ್ರಿಲ್ 28, 2025
HomeCinemaRamya:ಸ್ಯಾಂಡಲ್ ವುಡ್ ಗೆ ಶಾಕ್: ಆರೋಗ್ಯ ಸಮಸ್ಯೆಯಿಂದ ನಟನೆ ಹಾಗೂ ರಾಜಕೀಯ ತೊರೆದ್ರಾ ನಟಿ ರಮ್ಯ?

Ramya:ಸ್ಯಾಂಡಲ್ ವುಡ್ ಗೆ ಶಾಕ್: ಆರೋಗ್ಯ ಸಮಸ್ಯೆಯಿಂದ ನಟನೆ ಹಾಗೂ ರಾಜಕೀಯ ತೊರೆದ್ರಾ ನಟಿ ರಮ್ಯ?

- Advertisement -

ರಾಜಕೀಯದಲ್ಲಿ ಮತ್ತಷ್ಟು ಬೆಳೆಯುವ ಕನಸು ಹೊತ್ತು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಜವಾಬ್ದಾರಿ ವಹಿಸಿಕೊಂಡ ರಮ್ಯ ಗಂಭೀರ ಆರೋಗ್ಯ ಸಮಸ್ಯೆಯೊಂದರಿಂದ ಬಳಲುತ್ತಿದ್ದಾರಂತೆ. ಹೀಗಾಗಿ ರಮ್ಯ ವಿದೇಶದಲ್ಲಿದ್ದು, ಅಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಚಿಕಿತ್ಸೆ ಕಾರಣಕ್ಕೆ ಭಾರತ ತೊರೆದು ವಿದೇಶಕ್ಕೆ ತೆರಳಿರುವ ರಮ್ಯ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದು, ಕಾಂಗ್ರೆಸ್ ಪಕ್ಷದ ಜೊತೆ ಕರ್ನಾಟಕ,ಬೆಂಗಳೂರು,ಮಂಡ್ಯವನ್ನು ಮರೆತೇ ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಅನಾರೋಗ್ಯದ ಕಾರಣಕ್ಕೆ ರಮ್ಯ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಮುಖ,ಭಾವಚಿತ್ರ ತೋರಿಸದೇ ಸಕ್ರಿಯವಾಗಿದ್ದಾರೆ.  ಮಾಹಿತಿಯನ್ನು ರಮ್ಯ ಆಪ್ತರು ಒಪ್ಪಿಕೊಂಡಿದ್ದು, ಆರೋಗ್ಯ ಸಮಸ್ಯೆ ಏನೆಂಬುದನ್ನು ಬಹಿರಂಗ ಪಡಿಸಿಲ್ಲ.  

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲೂ ಆರೋಗ್ಯ ಸಮಸ್ಯೆಗಳ ಬಗ್ಗೆ ಹಾಗೂ ಜನರು ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾತನಾಡಿರುವ ರಮ್ಯ ಆರೋಗ್ಯ ಕಾಪಾಡಿಕೊಳ್ಳುವ ಟಿಪ್ಸ್ ಒಳಗೊಂಡ ಹಳೆ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಆರೋಗ್ಯವೇ ಭಾಗ್ಯ, ನಿಮ್ಮ ಚರ್ಮದ ಬಗ್ಗೆ ಕಾಳಜಿ ವಹಿಸಿ, ಮಹಿಳೆಯರು ಕಬ್ಬಿಣ ಅಂಶದ ಸಪ್ಲಿಮೆಂಟ್ ಬಗ್ಗೆ ಗಮನ ವಹಿಸಿ ಎಂಬುದು ಸೇರಿದಂತೆ ಹಲವು ಸಲಹೆ ನೀಡಿದ್ದಾರೆ. ರಮ್ಯ  ಈ ವಿಡಿಯೋವನ್ನು 50 ಸಾವಿರ ಮಂದಿ ವೀಕ್ಷಿಸಿದ್ದಾರೆ.

actress ramya left politics and cinema for health issues

RELATED ARTICLES

Most Popular