ಭಾನುವಾರ, ಏಪ್ರಿಲ್ 27, 2025
HomeCinemaಸ್ಯಾಂಡಲ್ ವುಡ್ ಡ್ಯಾನ್ಸ್ ಪ್ರಿಯರಿಗೆ ಗುಡ್ ನ್ಯೂಸ್: ಒಂದೇ ಡ್ಯಾನ್ಸ್ ಗೆ ಹೆಜ್ಜೆ ಹಾಕ್ತಾರೆ ಪ್ರಭುದೇವ್...

ಸ್ಯಾಂಡಲ್ ವುಡ್ ಡ್ಯಾನ್ಸ್ ಪ್ರಿಯರಿಗೆ ಗುಡ್ ನ್ಯೂಸ್: ಒಂದೇ ಡ್ಯಾನ್ಸ್ ಗೆ ಹೆಜ್ಜೆ ಹಾಕ್ತಾರೆ ಪ್ರಭುದೇವ್ ಮತ್ತು ಪವರ್ ಸ್ಟಾರ್

- Advertisement -

ಡ್ಯಾನ್ಸ್ ಎಂದ್ರೇ ಮೈಕಲ್ ಜಾನ್ಸನ್ ಎನ್ನಿಸೋ ಕಾಲದಲ್ಲಿ ಭಾರತದ ಮೈಕೈಲ್ ಜಾಕ್ಸನ್ ತರ ಕುಣಿದು ಹೆಸರು ಗಳಿಸಿದವರು ಪ್ರಭುದೇವ. ಹಲವು ಭಾಷೆಗಳಲ್ಲಿ ಬಹುನೀರಿಕ್ಷೆಯ ಕೊರಿಯೋಗ್ರಾಫರ್,ಡ್ಯಾನ್ಸರ್,ಸ್ಟಾರ್ ಹಾಗೂ ಡೈರೈಕ್ಟರ್ ಎನ್ನಿಸಿರುವ ಪ್ರಭುದೇವ, ಕನ್ನಡದ ಡ್ಯಾನ್ಸಿಂಗ್ ಕಿಂಗ್ ಪವರ್ ಸ್ಟಾರ್ ಜೊತೆ ಹೆಜ್ಜೆ ಹಾಕಲಿದ್ದಾರೆ.

ಈ ಇಬ್ಬರೂ ಸ್ಟಾರ್ ಡ್ಯಾನ್ಸರ್ ಗಳನ್ನು ಒಂದು ಮಾಡ್ತಿರೋದು ನಟ ಹಾಗೂ ನೃತ್ಯಸಂಯೋಜಕ ಹಾಗೂ ಪ್ರಭುದೇವ ಕಿರಿಯ ಸಹೋದರ ನಾಗೇಂದ್ರ ಪ್ರಸಾದ್. ನಿರ್ದೇಶನಕ್ಕೆ ಮುಂದಾಗಿರೋ ನಾಗೇಂದ್ರ ಪ್ರಸಾದ್, ತಮಿಳಿನಿ ಓ ಮೈ ಕಡುವಲೇ ಸಿನಿಮಾವನ್ನು ಲಕ್ಕಿ ಮ್ಯಾನ್ ಹೆಸರಿನಲ್ಲಿ ಕನ್ನಡಕ್ಕೆ ತರುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ ನಾಯಕರಾಗಿರೋ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅತಿಥಿಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ಸಿನಿಮಾದ ಸಾಂಗ್ ವೊಂದಕ್ಕೆ ಪ್ರಭುದೇವ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಟ್ಟಿಗೆ ಹೆಜ್ಜೆ ಹಾಕಿ ನೃತ್ಯ ಪ್ರಿಯರಿಗೆ ರಸದೌತಣ ನೀಡಲಿದ್ದಾರೆ.

ಬೆಂಗಳೂರಿನ ಎಚ್ಎಂಟಿ ಫ್ಯಾಕ್ಟರಿಯಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಸಂಗೀತಾ ಶೃಂಗೇರಿ ಹಾಗೂ ರೋಷನಿ ಪ್ರಕಾಶ್ ಚಿತ್ರದ ನಾಯಕಿಯರಾಗಿದ್ದಾರೆ.ಲಕ್ಕಿಮ್ಯಾನ್ ನಿರ್ದೇಶಿಸುತ್ತಿರುವ ನಾಗೇಂದ್ರ ಪ್ರಸಾದ್ ಕನ್ನಡದ ಮನಸೆಲ್ಲಾ ನೀನೆ, 123 ಚಿತ್ರಗಳಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

Puneeth rajkumar and prabhudeva will dance in kannada movie

RELATED ARTICLES

Most Popular