NEET ಪರೀಕ್ಷೆ ಫಲಿತಾಂಶದ ಭಯ : ನಾಲ್ಕು ದಿನಗಳಲ್ಲಿ 3 ವಿದ್ಯಾರ್ಥಿಗಳು ಆತ್ಮಹತ್ಯೆ

ಚೆನ್ನೈ: ವೈದ್ಯಕೀಯ ಪ್ರವೇಶ (NEET) ಪರೀಕ್ಷೆಯ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಆದ್ರೆ ನೀಟ್‌ ಪರೀಕ್ಷೆಯಲ್ಲಿ ಅನುತೀರ್ಣರಾಗುತ್ತೇವೆ ಅನ್ನೋ ಭಯದಲ್ಲಿ ತಮಿಳುನಾಡಿನ ವೆಲ್ಲೂರಿ ನಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೀಟ್‌ ವಿಚಾರಕ್ಕೆ ಕಳೆದ ನಾಲ್ಕು ದಿನಗಳಲ್ಲಿ ತಮಿಳುನಾಡಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣವಾಗಿದೆ.

ವೆಲ್ಲೂರಿನ ಸೌಂದರ್ಯ (16 ವರ್ಷ), ಟಿ ಪೇರೂರು ಸತ್ತಂಪಾಡಿಯಲ್ಲಿ ಕನಿಮೊಳಿ (16 ವರ್ಷ), ಸೇಲಂ ಮೂಲದ ಧನುಷ್ (19 ವರ್ಷ ) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ. ಇಂದು ವೆಲ್ಲೂರಿನ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಕೆಲವು ದಿನಗಳಿಂದಲೂ ನೀಟ್‌ ಪರೀಕ್ಷೆಯಲ್ಲಿ ಅನುತೀರ್ಣಳಾಗುತ್ತೇನೆ ಒತ್ತಡದಲ್ಲಿದ್ದಳು ಎಂದು ಪೋಷಕರು ತಿಳಿಸಿದ್ದಾರೆ.

ನೀಟ್‌ ಪರೀಕ್ಷೆಯಲ್ಲಿ ಅನುತೀರ್ಣರಾಗುವ ಭಯದಲ್ಲಿ ತಮಿಳುನಾಡಿನಲ್ಲಿ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆಯಷ್ಟೇ ಟಿ ಪೇರೂರು ಸತ್ತಂಪಾಡಿಯಲ್ಲಿ ಕನಿಮೊಳಿ ಎಂಬ ವಿದ್ಯಾರ್ಥಿ, ಅರಿಯಲೂರಿನಲ್ಲಿರುವ ತನ್ನ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಅಲ್ಲದೇ ಕಳೆದ ಭಾನುವಾರ ಸೇಲಂ ಮೂಲದ ಧನುಷ್ ಆತ್ಮಹತ್ಯೆ ಮಾಡಿಕೊಂಡಿದ್ದ. ಎರಡು ಬಾರಿ ನೀಟ್‌ ಪರೀಕ್ಷೆಗೆ ಹಾಜರಾಗಿದ್ದ ಧನುಷ್‌ಗೆ ವೈದ್ಯಕೀಯ ಪ್ರವೇಶ ನಿರಾಕರಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ಪರೀಕ್ಷೆ ಬರೆದಿದ್ದರೂ ಕೂಡ, ಅರ್ಹತೆ ಪಡೆಯುವುದಿಲ್ಲ ಅನ್ನೋ ಭಯದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ, ಕರ್ನಾಟಕದ ಗೌರ‌ವ್ ದಾಸ್ ಗೆ ಮೊದಲ ಸ್ಥಾನ

ಇದನ್ನೂ ಓದಿ : Doctor Maizy Fernandes : ವಾರಣಾಸಿ ಫಾರ್ಮ್‌ಹೌಸ್‌ ಕೆರೆಯಲ್ಲಿ ಮುಳುಗಿ ಮಂಗಳೂರಿನ ವೈದ್ಯೆ ಸಾವು

( Tamil Nadu : 3 children die in four days in fear of result for NEET exam )

Comments are closed.