ಸೋಮವಾರ, ಏಪ್ರಿಲ್ 28, 2025
HomeCinemaಡೆಡ್ ಮ್ಯಾನ್ಸ್ ಆಂಥಮ್ ರಿಲೀಸ್: ಕಿಚ್ಚನ ಅವತಾರಕ್ಕೆ ಫ್ಯಾನ್ಸ್ ಫಿದಾ

ಡೆಡ್ ಮ್ಯಾನ್ಸ್ ಆಂಥಮ್ ರಿಲೀಸ್: ಕಿಚ್ಚನ ಅವತಾರಕ್ಕೆ ಫ್ಯಾನ್ಸ್ ಫಿದಾ

- Advertisement -

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬಕ್ಕೆ ವಿಕ್ರಾಂತ್ ರೋಣ ಚಿತ್ರತಂಡ ಸಖತ್ ಸ್ಪೆಶಲ್ ಗಿಫ್ಟ್ ನೀಡಿದೆ. ವಿಕ್ರಾಂತ್ ರೋಣ ಬಿಡುಗಡೆ ಮಾಡಿದ ಸ್ಪೆಶಲ್ ವಿಡಿಯೋ ದಾಖಲೆ ವೀಕ್ಷಣೆಯತ್ತ ಸಾಗುತ್ತಿದೆ.

ಸುದೀಪ್ 49 ವರ್ಷಗಳನ್ನು ಪೊರೈಸಿ 50 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಹೊತ್ತಿನಲ್ಲಿ ಸುದೀಪ್ ಅಭಿಮಾನಿಗಳಿಗೆ ಕೋಟಿಗೊಬ್ಬ-3 ಹಾಗೂ ವಿಕ್ರಾಂತ್ ರೋಣ ಎರಡು ಬಹುನೀರಿಕ್ಷಿತ ಚಿತ್ರಗಳನ್ನು ಗಿಫ್ಟ್ ಆಗಿ ನೀಡಲು ಸಿದ್ಧವಾಗುತ್ತಿದ್ದಾರೆ.

Sudeep-sandalwood actor-biography

ಈ ಪೈಕಿ ವಿಕ್ರಾಂತ್ ರೋಣ ಚಿತ್ರತಂಡ ಸುದೀಪ್ ಬರ್ತಡೆಗಾಗಿ ಹಾರರ್, ಕ್ರೈಂ, ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ವಿಕ್ರಾಂತ್ ರೋಣ ಸಿನಿಮಾದ ಡೆಡ್ ಮ್ಯಾನ್ ಆ್ಯಂಥಮ್ ವಿಡಿಯೋ ಬಿಡುಗಡೆ ಮಾಡಿದೆ‌.

ಈ ವಿಡಿಯೋದಲ್ಲಿ ಸಿನಿಮಾದ ಸಣ್ಣ ಸಣ್ಣ ಝಲಕ್ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದ್ದು ಅದ್ದೂರಿ ಮೇಕಿಂಗ್, ಗ್ರ್ಯಾಂಡ್ ವಿಶ್ಯುವಲ್ಸ್, ಸಖತ್ ಫೈಟಿಂಗ್ ಹಾಗೂ ಸುದೀಪ್ ಸ್ಪೆಶಲ್, ಸ್ಟೈಲಿಶ್ ಲುಕ್ ಗಮನ ಸೆಳೆಯುವಂತಿದೆ.

ವಿಡಿಯೋವನ್ನು ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಚಿತ್ರತಂಡ ಶೇರ್ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ಟ್ರೆಂಡ್ ಆಗಿದ್ದು ವೀಕ್ಷಣೆಯಲ್ಲಿ ಹೊಸ ದಾಖಲೆಯತ್ತ ಸಾಗುತ್ತಿದೆ. ಜಾಕ್ ಮಂಜು ನಿರ್ಮಿಸಿರುವ ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ ಸೇರಿದಂತೆ ಹಲವು ನಟ-ನಟಿಯರು ಕಿಚ್ಚ ಸುದೀಪ್ ಗೆ ಸಾಥ್ ನೀಡಿದ್ದಾರೆ.


( Dead Man’s Anthem Release: Sudeep Birthday Gift )

RELATED ARTICLES

Most Popular