ಕಾಶ್ಮೀರದ ಪ್ರತ್ಯೇಕತಾವಾದಿ ಸಯ್ಯದ್‌ ಅಲಿ ಶಾ ಜಿಲಾನಿ ವಿಧಿವಶ

ನವದೆಹಲಿ : ಕಾಶ್ಮೀರದ ಹಿರಿಯ ಪ್ರತ್ಯೇಕತಾವಾದಿ ರಾಜಕಾರಣಿ ಸೈಯದ್ ಅಲಿ ಶಾ ಜಿಲಾನಿ ( 91ವರ್ಷ ) ಅವರು ನಿಧನರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದ ಸುತ್ತಲೂ ಬಿಗಿಭದ್ರತೆಯನ್ನು ಒದಗಿಸಲಾಗಿದ್ದು, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಸುಮಾರು ಮೂವತ್ತು ವರ್ಷಗಳಿಗೂ ಅಧಿಕ ಕಾಲ ಕಾಶ್ಮೀರದ ಪ್ರತ್ಯೇಕತಾ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದೊಂದು ವರ್ಷ ದಿಂದಲೂ ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದರು. ಬುಧವಾರದ ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ ರಾತ್ರಿ ವಿಧಿವಶರಾಗಿದ್ದಾರೆ.

1990 ರಿಂದ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಮುನ್ನಡೆಸಿದ್ದ ಗಿಲಾನಿ ಅವರು 2020 ರಲ್ಲಿ ಅಖಿಲ ಭಾರತ ಹುರಿಯತ್ ಕಾನ್ಫರೆನ್ಸ್‌ಗೆ ರಾಜೀನಾಮೆ ನೀಡಿದ್ದರು. ಅದ್ರಲ್ಲೂ ಕಳೆದೊಂದು ದಶಕಗಳಿಂದಲೂ ಅಧಿಕ ಕಾಲ ಗೃಹಬಂಧನದಲ್ಲೇ ಇದ್ದ ಗಿಲಾನಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು.

ಇದನ್ನೂ ಓದಿ : ಗೋಮಾಂಸ ಸೇವನೆ ಮೂಲಭೂತ ಹಕ್ಕಲ್ಲ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ : ಅಲಹಾಬಾದ್ ಹೈಕೋರ್ಟ್

ಇದನ್ನೂ ಓದಿ : ಜಾರಿಯಾಯ್ತು ಹೊಸ ನಿಯಮ ; ಏನೆಲ್ಲಾ ಬದಲಾವಣೆಯಾಗಲಿದೆ ಗೊತ್ತಾ ?

( kashmir syed ali sha geelani passes away )

Comments are closed.