ಬೆಂಗಳೂರು : ಕನ್ನಡ ಕಿರುತೆರೆ ಸ್ಯಾಂಡಲ್‌ವುಡ್ ನಟಿ ಸೌಜನ್ಯ ( ಸವಿ ಮಾದಪ್ಪ) ಆತ್ಮಹತ್ಯೆ ಪ್ರಕರಣ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಸೌಜನ್ಯ ಸಾವಿನ ಬೆನ್ನಲ್ಲೇ ಪ್ರಿಯಕರ ನಟ ವಿವೇಕ್ ಹಾಗೂ ಪಿಎ ಮಹೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಸವಿ ಮಾದಪ್ಪ ಸಾವಿಗೂ ಮುನ್ನ ನಡೆದಿದ್ದೇನು ಅನ್ನೋ ಡಿಟೇಲ್ಸ್ ಇಲ್ಲಿದೆ.
ನಟಿ ಸವಿ ಮಾದಪ್ಪ ಸಾವಿಗೂ ಮುನ್ನ ತನ್ನ ತಮ್ಮ ಹಾಗೂ ತಾಯಿಯ ಜೊತೆಯಲ್ಲಿ ಮಾತನಾಡಿದ್ದರು. ಆದರೆ ಸಹಜವಾಗಿಯೇ ಸೌಜನ್ಯ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ತಾನು ನೋವಿನಲ್ಲಿರುವ ವಿಚಾರವನ್ನ ತನ್ನ ತಾಯಿಯ ಬಳಿಯಲ್ಲಿ ಹೇಳಿಕೊಂಡಿರಲಿಲ್ಲ ಅನ್ನೋದು ತಿಳಿದು ಬಂದಿದೆ. ಹಾಗಾದ್ರೆ ಸಾವಿಗೆ ಮೊದಲು ನಡೆದಿದ್ದೇನು .
ಸಪ್ಟೆಂಬರ್ 30 ರಂದು ಬೆಳಗ್ಗೆ 8.20ರ ಸುಮಾರಿಗೆ ನಟಿ ಸೌಜನ್ಯ ಉಳಿದುಕೊಂಡಿದ್ದ ಅಪಾರ್ಟ್ಮೆಂಟ್ಗೆ ಆಪ್ತ ಸಹಾಯಕ ಮಹೇಶ್ ಆಗಮನವಾಗಿದೆ. ಈ ವೇಳೆಯಲ್ಲಿ ಸಹೋದರನ ಜೊತೆ ನಟಿ ಸೌಜನ್ಯ ಫೋನ್ ಕಾಲ್ನಲ್ಲಿದ್ದರು ಎಂದು ತಿಳಿದು ಬಂದಿದೆ.
ಬೆಳಗ್ಗೆ 8.45 : ನಟಿ ಸೌಜನ್ಯ ತನ್ನ ಆಪ್ತ ಸಹಾಯಕ ಮಹೇಶ್ ಬಳಿಯಲ್ಲಿ ತಿಂಡಿ ತರಲು ಹೇಳಿ ಕಳುಹಿಸಿದ್ದ ಸೌಜನ್ಯ. ಹೀಗಾಗಿ ಮಹೇಶ್ ತಿಂಡಿ ತರಲು ಹೊರಗೆ ತೆರಳಿದ್ದಾನೆ ಎನ್ನಲಾಗುತ್ತಿದೆ.
ಬೆಳಗ್ಗೆ 8.50 : ತಮ್ಮನ ಜೊತೆಗೆ ಕರೆ ಮಾಡಿ ಮಾತನಾಡಿದ್ದ ನಟಿ ಸೌಜನ್ಯ ತನ್ನ ತಾಯಿಗೂ ಕರೆ ಮಾಡಿ ಮಾತನಾಡಿದ್ದಾನೆ. ಆದರೆ ಈ ವೇಳೆಯಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ಅನ್ನೋದು ಖಚಿತವಾಗಿಲ್ಲ. ಆದರೆ ತಾಯಿಗೆ ಮಗಳು ಸಾವಿಗೆ ಶರಣಾಗುತ್ತಾಳೆ ಅನ್ನೋ ಸಣ್ಣದೊಂದು ಕುರುಹು ಕೂಡ ಸಿಕ್ಕಿರಲಿಲ್ಲ.
ಬೆಳಗ್ಗೆ 9.05 : ಸೌಜನ್ಯ ಕರೆ ಕಟ್ ಮಾಡುತ್ತಿದ್ದಂತೆಯೇ ನಟ ವಿವೇಕ್ ಸೌಜನ್ಯ ತಾಯಿಗೆ ಕರೆ ಮಾಡಿ ಮಾತನಾಡಿದ್ದಾನೆ. ಸೌಜನ್ಯ ತಂದೆ ನೀಡಿರುವ ದೂರಿನ ಪ್ರಕಾರ ನಟ ವಿವೇಕ್ ಸೌಜನ್ಯ ಮದುವೆಯಾಗದೇ ಇದ್ರೆ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗುತ್ತಿದೆ.
ಬೆಳಗ್ಗೆ 9.45 : ಹೋಟೆಲ್‌ನಿಂದ ಪಿಎ ಮಹೇಶ್ ತಿಂಡಿ ತೆಗೆದುಕೊಂಡು ವಾಪಸ್ ಬಂದಿದ್ದಾನೆ. ಈ ವೇಳೆಯಲ್ಲಿ ಸೌಜನ್ಯ ರೂಮ್ ಲಾಕ್ ಆಗಿತ್ತು. ಹೀಗಾಗಿ ಸುಮಾರು 15 ನಿಮಿಷಗಳ ಕಾಲ ಕಾದಿದ್ದಾನೆ. ನಂತರ ರೂಮ್ ಒಳಗೆ ಪ್ರವೇಶಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಮಹೇಶ್ ಪೊಲೀಸರ ವಿಚಾರಣೆಯ ವೇಳೆಯಲ್ಲಿ ತಿಳಿಸಿದ್ದಾನೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ನಟಿ ಸೌಜನ್ಯ ಆತ್ಮಹತ್ಯೆ, ಹಲವು ಅನುಮಾನ : ನಟ ವಿವೇಕ್, ಪಿಎ ಮಹೇಶ್ ಅರೆಸ್ಟ್
ಬೆಳಗ್ಗೆ 10.25 : ನಟಿ ಸೌಜನ್ಯ ಆಪ್ತ ಸಹಾಯಕನಾಗಿದ್ದ ಮಹೇಶ್ ಸೌಜನ್ಯ ಅಕ್ಕ ಭಾಗ್ಯಶ್ರೀಗೆ ಕರೆ ಮಾಡಿದ್ದಾನೆ. ಸೌಜನ್ಯ ಸಾವನ್ನಪ್ಪಿರುವ ಕುರಿತು ಅವರಿಗೆ ವಿಷಯವನ್ನು ತಿಳಿಸಿದ್ದಾನೆ ಎನ್ನಲಾಗುತ್ತಿದೆ.
ಬೆಳಗ್ಗೆ 10.30 : ಪಿಎ ಮಹೇಶ್ ಕರೆ ಮಾಡಿ ಸೌಜನ್ಯ ಸಾವನ್ನಪ್ಪಿರೋ ವಿಷಯ ತಿಳಿಸುತ್ತಲೇ ಶಾಕ್‌ಗೆ ಒಳಗಾಗಿದ್ದ ಭಾಗ್ಯಶ್ರೀ ಕೂಡಲೇ ತನ್ನ ತಾಯಿ ರೇಣುಕಾಗೆ ಕರೆ ಮಾಡಿ ಸವಿ ಮಾದಪ್ಪ ಸಾವನ್ನಪ್ಪಿರುವ ವಿಷಯವನ್ನು ತಿಳಿಸಿದ್ದಾರೆ.
ಇದನ್ನೂ ಓದಿ : ನನ್ನ ಜೊತೆ ಚೆನ್ನಾಗಿದ್ದವರಿಗೆ ಮಾತ್ರ Love u ! ಕಿರುತೆರೆ ನಟಿ ಸೌಜನ್ಯ ಡೆತ್ ನೋಟ್‌ನಲ್ಲಿ ಏನಿದೆ ಗೊತ್ತಾ ?
ನಟಿ ಸೌಜನ್ಯ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಲೇ ಪೋಷಕರು ಬೆಂಗಳೂರಿಗೆ ಬಂದಿದ್ದಾರೆ. ಅಲ್ಲದೇ ಮಗಳ ಸಾವಿನ ಬಗ್ಗೆಯೂ ಸಾಕಷ್ಟು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸವಿ ಮಾದಪ್ಪ ಮರಣೋತ್ತರ ಕಾರ್ಯವನ್ನು ನಡೆಸಲಾಗಿದ್ದು, ಕುಂಬಳಗೋಡು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸಾಕ್ಷ್ಯಗಳನ್ನು ಕಲೆ ಹಾಕುವ ಕಾರ್ಯವನ್ನು ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ನಂತರವಷ್ಟೇ ನಿಗೂಢ ಸಾವಿನ ಹಿಂದಿನ ರಹಸ್ಯ ಬಯಲಾಗೋದಕ್ಕೆ ಸಾಧ್ಯ.
( What happened to actress Sowjanya before her death? The actress Savi Madappa told her mother )