ಸ್ಯಾಂಡಲ್ ವುಡ್ ಯುವರಾಜ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ಕರುನಾಡನ್ನು ಅಗಲಿದ್ದರೂ ಮಾನಸಿಕವಾಗಿ ಅಭಿಮಾನಿಗಳ ಮನಸ್ಸಲ್ಲೇ ನೆಲೆಸಿದ್ದಾರೆ . ಹೀಗಾಗಿ ಪ್ರತಿನಿತ್ಯ ವಿಶ್ವದಾದ್ಯಂತ ಪುನೀತ್ ರನ್ನು ನೆನಪಿಸಿಕೊಳ್ಳುವ ಒಂದಿಲ್ಲೊಂದು ಪ್ರಯತ್ನ ನಡೆಯುತ್ತಲೇ ಇರುತ್ತೆ. ಇದಕ್ಕೆ ಕಳೆದ ಮೂರು ತಿಂಗಳಲ್ಲಿ ಈ ನಾಡಿನಲ್ಲಿ ಸ್ಥಾಪನೆಯಾದ ಪುನೀತ್ ಪುತ್ಥಳಿ, ನಾಮಕರಣವಾದ ಪುನೀತ್ ಹೆಸರು, ರಸ್ತೆ,ಉದ್ಯಾನಗಳೇ ಸಾಕ್ಷಿ. ಇದೀಗ ಇಂತಹುದೇ ಅದ್ಭುತ ಪ್ರಯತ್ನವೊಂದು ( Puneeth Raj Kumar production ) ಆಮೇಜಾನ್ ಪ್ರೈಮ್ ನಿಂದ ನಡೆಯಲಿದೆ.
ಪುನೀತ್ ರಾಜ್ ಕುಮಾರ್ ನೆನಪಿಗಾಗಿ ಅಮೇಜಾನ್ ಪ್ರೈ ಪುನೀತ್ ಮಾಲಿಕತ್ವದ ನಿರ್ಮಾಣ ಸಂಸ್ಥೆ ಪಿಆರ್ ಕೆ ಸ್ಟುಡಿಯೋದ ಮೂರು ಸಿನೆಮಾಗಳ ವಿಶೇಷ ಪ್ರಿಮಿಯರ್ ಹಾಗೂ ಪುನೀತ್ ಅಭಿನಯದ ಐದು ಸಿನಿಮಾಗಳ ಉಚಿತ ವೀಕ್ಷಣೆಯ ಅವಕಾಶವನ್ನು ಅಮೇಜಾನ್ ಪ್ರೈಮ್ ಘೋಷಿಸಿದೆ. ಪಿಆರ್ ಕೆ ಪ್ರೊಡಕ್ಷನ್ ಸ್ಯಾಂಡಲ್ ವುಡ್ ನ ಹೊಸ ಪ್ರತಿಭೆಗಳಿಗಾಗಿ ಸಿನಿಮಾಗಳನ್ನು ನಿರ್ಮಿಸುವ ಕೆಲಸಮಾಡಿಕೊಂಡು ಬಂದಿತ್ತು. ರಾಗಿಣಿ ಪ್ರಜ್ಚಲ್ ಸೇರಿದಂತೆ ಹಲವು ಪ್ರತಿಭೆಗಳಿಗೆ ಪಿಆರ್ಕೆ ಪ್ರೊಡಕ್ಷನ್ ಹೌಸ್ ಆಸರೆಯಾಗಿತ್ತು.
ಆದರೆ ಪಿಆರ್‌ಕೆ ಪ್ರೊಡಕ್ಷನ್ ಇಂತಹ ಒಳ್ಳೆಯ ಕೆಲಸಗಳನ್ನು ಸ್ಯಾಂಡಲ್ ವುಡ್ ನ ಹೊಸ ಪ್ರತಿಭೆಗಳಿಗಾಗಿ ಮಾಡುತ್ತಿರುವಾಗಲೇ ಪುನೀತ್ ರಾಜಕುಮಾರ್ ಎಲ್ಲರನ್ನು ಅಗುವ ಮೂಲಕ ಶಾಕ್ ನೀಡಿದ್ದರು. ಈಗ ಅಪ್ಪು ಅಭಿಮಾನಿಗಳಿಗಾಗಿ ಪಿಆರ್ಕೆ ಪ್ರೊಡಕ್ಷನ್ಸ್ ನ ಮ್ಯಾನ್ ಆಫ್ ದಿ ಮ್ಯಾಚ್, ಒನ್ ಕಟ್ ಟು ಕಟ್ ಮತ್ತು ಫ್ಯಾಮಿಲಿ ಪ್ಯಾಕ್ ಸಿನಿಮಾಗಳನ್ನು ಅಮೇಜಾನ್ ಪ್ರೈನಲ್ಲಿ ಉಚಿತ ವೀಕ್ಷಣೆಗೆ ಲಭ್ಯವಿದೆ.
ಇದಲ್ಲದೇ ಪುನೀತ್ ನಿರ್ಮಾಣದ ಐದು ಚಿತ್ರಗಳು ಫೆ.1 ರಿಂದ ಉಚಿತವಾಗಿ ಅಮೇ ಜಾನ್ ಪ್ರೈಂ ನಲ್ಲಿ ತೆರೆ ಕಾಣಲಿದೆ. ಪುನೀತ್ ನಿರ್ಮಾಣದ ಕವಲುದಾರಿ, ಮಾಯಾಬಜಾರ್, ಲಾ ಫ್ರೆಂಚ್ ಬಿರಿಯಾನಿ ಹಾಗೂ ಅವರೇ ನಟಿಸಿದ ಯುವರತ್ನ ಉಚಿತವಾಗಿ ವೀಕ್ಷಿಸಲು ಲಭ್ಯವಾಗಲಿದೆ. ಫೆ.1 ರಿಂದ 28 ರವರೆಗೆ ಈ ಚಿತ್ರಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶವಿದ್ದು, ಅಭಿಮಾನಿಗಳು ವೀಕ್ಷಿಸಿ ಎಂದು ಅಮೇಜಾನ್ ಪ್ರೈಮ್ ಮನವಿ ಮಾಡಿದೆ. ಅಮೇಜಾನ್ ಪ್ರೈಮ್ ವಿಡಿಯೋ ಇನ್ ಅಕೌಂಟ್ ನಲ್ಲಿ ಈ ಕುರಿತು ಮಾಹಿತಿಯನ್ನು ಟ್ವೀಟ್ ಮೂಲಕ ಹಂಚಿಕೊಳ್ಳಲಾಗಿದೆ. ಸದ್ಯ ಪುನೀತ್ ಹೊಸ ಸಿನಿಮಾಗಳನ್ನು ನೋಡಲಾಗದೇ ನೊಂದಿದ್ದ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ಕೊಟ್ಟಿದೆ.
ಇದನ್ನೂ ಓದಿ : ಸೌಂದರ್ಯದ ಖಣಿ ಬ್ರಿಟಿಷ್ ಗಾಯಕಿ ಸೋಫಿ ಚೌದರಿ ಹಾಟ್ ಪೋಟೋಸ್ ವೈರಲ್
ಇದನ್ನೂ ಓದಿ : ಚಿತ್ತಾರದ ಬೆಡಗಿ ಅಮೂಲ್ಯ ಸೀಮಂತ: ಪೋಟೋಸ್ ವೈರಲ್
( Puneeth Raj Kumar production Cinema Free Show on Amazon Prime)