water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್‌ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ

ಬೆಂಗಳೂರು : ಈಗಾಗಲೇ ಎರಡು ವರ್ಷಗಳಿಂದ ಅಬ್ಬರಿಸಿದ ಕೊರೋನಾ ಜನಸಾಮಾನ್ಯರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಅದರಲ್ಲೂ ಬೆಂಗಳೂರಿಗರಂತೂ ಮುಚ್ಚಿದ ಮಾಲ್, ಥಿಯೇಟರ್, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಇಂಡಸ್ಟ್ರಿಗಳಿಂದಾಗಿ ಉದ್ಯೋಗಸ್ಥರು ಮತ್ತಷ್ಟು ಸಂಕಷ್ಟದಲ್ಲಿದ್ದಾರೆ. ಈ‌ ಮಧ್ಯೆ ಏರಿಕೆಯಾಗುತ್ತಲೇ ಇರುವ ಪೆಟ್ರೋಲ್, ತರಕಾರಿ, ಕರೆಂಟ್ ಜೊತೆಗೆ ಈಗ ತಣ್ಣಗೆ ಹರಿಯೋ ನೀರು (water price hike) ಕೂಡ ಜನರ ಕೈಸುಡಲಿದೆ.

ಹೌದು ರಾಜ್ಯ ರಾಜಧಾನಿಯ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್ ಎದುರಾಗಿದೆ. ಹಾಲು, ಕರೆಂಟ್ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ನೀರಿನ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ.‌ ಶ್ರೀಘ್ರವೇ ಬೆಂಗಳೂರಿನಲ್ಲಿ ನೀರಿನ ದರ ಏರಿಕೆಯಾಗಲಿದ್ದು ಬರೋಬ್ಬರಿ ಎಂಟು ವರ್ಷಗಳ ಬಳಿಕ BWSSB ಬೆಲೆ ಏರಿಕೆ ಪ್ರಪೋಸಲ್ ನ್ನು ಸರ್ಕಾರದ ಮುಂದಿಟ್ಟಿದೆ .ಗೃಹಬಳಕೆಗೆ ಶೇ.16ರಷ್ಟು ದರ ಹೆಚ್ಚಳ ವಾಣಿಜ್ಯ ಬಳಕೆಗೆ ಶೇ.21ರಷ್ಟು ದರ ಏರಿಕೆ ಹೆಚ್ಚಳ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಂಗಳೂರು ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿದ್ದು, ನಿರ್ವಹಣೆ ವೆಚ್ಚ ಹೆಚ್ಚಳ ಹಿನ್ನೆಲೆ, ನೀರಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಕಳೆದ 2 ವರ್ಷಗಳ ಹಿಂದೆಯೇ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೊರೊನಾ ಕಾರಣಕ್ಕೆ ನೀರಿನ ಬೆಲೆ ಏರಿಕೆಗೆ ಸರಕಾರ ಒಪ್ಪಿಗೆ ನೀಡಿರಲಿಲ್ಲ. ಇದೀಗ ಮತ್ತೊಮ್ಮೆ ನೀರಿನ ದರ ಬೆಲೆ ಏರಿಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಭಾರಿ ಸಿಎಂ ಬೊಮ್ಮಾಯಿ ಈ ಪ್ರಸ್ತಾವನೆ ಗೆ ಅನುಮೋದನೆ ನೀಡೋ ಸಾದ್ಯತೆ ಇದೆ.

ಪ್ರತಿ ವರುಷ ಜಲಮಂಡಳಿಗೆ ನಷ್ಟವಾಗುತ್ತಿದ್ದು ವೆಚ್ಚ ಪ್ರತಿ ವರುಷ ಹೆಚ್ಚಳವಾಗುತ್ತಿದೆ. 2013-14ರಲ್ಲಿ 390 ಕೋಟಿ ವಿದ್ಯುಚ್ಛಕ್ತಿ ವೆಚ್ಚ, 2020-21ರಲ್ಲಿ 669 ಕೋಟಿ ವಿದ್ಯುಚ್ಛಕ್ತಿ ವೆಚ್ಚ
ಕಳೆದ ಎಂಟು ವರುಷದಲ್ಲಿ ಶೇ.79.26 ವೆಚ್ಚ ಹೆಚ್ಚಳವಾಗಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಬಿಡಬ್ಲುಎಸ್ಎಸ್ಬಿ ಬೆಲೆ ಏರಿಕೆಯ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈ ಪ್ರಸ್ತಾಪಕ್ಕೆ ನಗರದಲ್ಲಿ ವಿರೋಧ ವ್ಯಕ್ತ ವಾಗಿದ್ದು, ಈಗಾಗಲೇ ಕೊರೋನಾದಿಂದ ಕಂಗೆಟ್ಟಿರುವ ಜನರಿಗೆ ಇದು ಹೊರೆಯಾಗಲಿದೆ ಎಂಬ ಮಾತು ಕೇಳಿಬಂದಿದೆ. ಇನ್ನೊಂದೆಡೆ ಮುಂಬರುವ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಗೆ ಸರ್ಕಾರ ಅನುಮೋದನೆ ನೀಡದಿರುವ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು

ಇದನ್ನೂ ಓದಿ : ರಾಗಿ ತಿಂದವ ನಿರೋಗಿ; ಮಕ್ಕಳ ಬೆಳವಣಿಗೆಗೆ ರಾಗಿ ಹೆಚ್ಚು ಪ್ರಯೋಜನಕಾರಿ ಎಂದ ಅಧ್ಯಯನ

( water price hike in Bangalore, Water Board Proposal to Karnataka Government )

Comments are closed.