ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿ ವಾರವಾಗುತ್ತಾ ಬಂದಿದ್ದರೂ ದುಃಖದ ಸೆಲೆ ಬತ್ತಿಲ್ಲ. ಈ ಮಧ್ಯೆ ಕಲಾವಿದರ ಕಣ್ಣಲ್ಲಿ, ಕೈಗಳಲ್ಲಿ ಅಪ್ಪು ಇನ್ನೂ ಜೀವಂತವಾಗಿದ್ದು ಕಲಾವಿದ ಕರಣ ಆಚಾರ್ಯ ಬಿಡಿಸಿದ ಚಿತ್ರ ಈಗ ಅಪ್ಪು ಅಭಿಮಾನಿಗಳನ್ನು ಸೆಳೆದಿದೆ.
ಮೋಡಗಳ ನಡುವೆ ಅಲ್ಲಲ್ಲಿ ಕಾಣಸಿಗುವ ಬಿಳಿ ಪಾರಿವಾಳಗಳ ನಡುವೆ ಕೂತ ಡಾ.ರಾಜ್ ಕುಮಾರ್ ಹಾಗೂ ಅವರನ್ನು ಹಿಂದಿನಿಂದ ಬಳಸಿ ಕಣ್ಮುಚ್ಚಿದ ಪುನೀತ್ ತಂದೆಯೊಂದಿಗೆ ತುಂಟಾಟವಾಡುವಂತೆ ಬಾಸವಾಗುತ್ತಿದೆ. ವೈಟ್ ಬಟ್ಟೆಯಲ್ಲಿ ಡಾ.ರಾಜ್ ಕುಮಾರ್ ಜೀವಂತವಾಗಿ ಎದ್ದು ಬಂದಂತೆ ತೋರುತ್ತಿದ್ದು, ಅವರ ಜೊತೆ ನಿಂತ ಪುನೀತ್ ಕೂಡ ವೈಟ್ ಬಟ್ಟೆಯಲ್ಲಿ ಮಿಂಚಿದಂತಿದೆ.
ಕರಣ್ ಅಚಾರ್ಯ ಬಿಡಿಸಿದ ಈ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಚಿತ್ರಕಲಾವಿದನ ಭಾವಕ್ಕೆ, ಕಲಾಗರಿಮೆಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು, ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಕರಣ್ ಆಚಾರ್ಯ ಸ್ಯಾಂಡಲ್ ವುಡ್ ನ ಹಲವು ಸೆಲೆಬ್ರೆಟಿಗಳ ಚಿತ್ರಬಿಡಿಸಿ ಮನಗೆದ್ದಿದ್ದರು. ರವಿಚಂದ್ರನ್ ಅವರನ್ನು ಚಿತ್ರಿಸಿದ್ದು ಕೂಡ ಜನಮೆಚ್ಚುಗೆ ಗಳಿಸಿತ್ತು.
ಕೇವಲ ಪೋಟೋ ಮಾತ್ರವಲ್ಲದೇ ಹಲವು ಸಿನಿಮಾಪೋಸ್ಟರ್ ಗಳನ್ನು ಸಿದ್ಧಪಡಿಸಿರುವ ಕರಣ್ ಆಚಾರ್ಯ ತಮ್ಮ ಕಲಾ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಇನ್ನೊಂದೆಡೆ ಈ ಪೋಸ್ಟರ್ ಗೆ ಸಾವಿರಾರು ಕಮೆಂಟ್ಸ್ ಹರಿದು ಬಂದಿದ್ದು ಹಲವರು ಪಾರ್ವತಮ್ಮನವರನ್ನು ಬಿಟ್ಟಿದ್ದ್ಯಾಕೆ ಅವರನ್ನು ಸೇರಿಸಿ ಚಿತ್ರ ಪೂರ್ಣಗೊಳಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಪುನೀತ್ ರಾಜ್ ಕುಮಾರ್ ಪ್ರೇರಣೆ : ನೇತ್ರದಾನಕ್ಕೆ ಒಂದೇ ದಿನ 1000 ಕ್ಕೂ ಅಧಿಕ ಮಂದಿ ನೋಂದಣಿ
ಇದನ್ನೂ ಓದಿ : ಅಪ್ಪು ಫ್ಯಾನ್ಸ್ ಗೆ ಸಿಹಿಸುದ್ದಿ: ನಗರದಲ್ಲಿ ನಿರ್ಮಾಣವಾಗಲಿದೆ ಪುನೀತ್ ಪ್ರತಿಮೆ