ಪುನೀತ್‌ ರಾಜ್‌ ಕುಮಾರ್‌ ಪ್ರೇರಣೆ : ನೇತ್ರದಾನಕ್ಕೆ ಒಂದೇ ದಿನ 1000 ಕ್ಕೂ ಅಧಿಕ ಮಂದಿ ನೋಂದಣಿ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ನಿಧನವಾದ ಬಳಿಕ ಜನರಲ್ಲಿ ಹೃದಯಾಘಾತದ ಭಯ ಶುರುವಾಗಿದೆ.‌ ಜನರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಪುನೀತ್ ಸಾವಿನಿಂದ ಕೆಲವರು ಭಯ ಪಟ್ಟು ಕೊಂಡರೆ, ಇನ್ನೂ ಹಲವರು ಪುನೀತ್ ಮಾಡಿದ ನೇತ್ರದಾನದಿಂದ ಪ್ರೇರಣೆಗೊಂಡು ತಾವು ನೇತ್ರದಾನ ಮಾಡಲು ಮುಂದಾಗಿದ್ದಾರೆ.

ನಟ ಪುನೀತ್ ರಾಜ್‍ಕುಮಾರ್ ನೇತ್ರದಾನದ ಬಳಿಕ ಪುನೀತ್ ರಿಂದ ಪ್ರೇರಣೆ ಗೊಂಡು ಸಾಕಷ್ಟು ಜನರು ನೇತ್ರದಾನ ಮಾಡಲು ಬರುತಿದ್ದಾರೆ. ಇಂದು ಒಂದೇ ದಿನ 1000 ಕ್ಕೂ ಹೆಚ್ಚು ಜನರಿಂದ ನೇತ್ರದಾನದ  ನೋಂದಣಿ ಮಾಡಿಕೊಳ್ಳಲಾಗಿದೆ. ಈ ಹಿಂದೆ ಇಷ್ಟು ಜನರು ನೇತ್ರದಾನಕ್ಕೆ ಮುಂದೆ ಬರುತ್ತಿರಲಿಲ್ಲಾ. ಇದೀಗ 2, 3 ದಿನದಿಂದ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ‌.  ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: Puneeth- Padma shri Award : ಪುನೀತ್ ಗೆ ಸಲ್ಲಲಿ ಪದ್ಮಶ್ರೀ: ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಪುನೀತ್ ರಾಜ್‍ಕುಮಾರ್ ಅವರ ತಂದೆಯ ಹಾದಿಯಲ್ಲಿ ನಡೆದು ನೇತ್ರದಾನ ಮಾಡಿದ್ದಾರೆ. ಪುನೀತ್ ಕಣ್ಣುಗಳು ಹೆಚ್ಚು ಆರೋಗ್ಯ ವಾಗಿರುವುದರಿಂದ 4 ಜನರ ಪಾಲಿನ ದೀಪವಾಗಿದೆ. ನೇತ್ರದಾನ ಮಾಡುವವರ 2 ಕಣ್ಣುಗಳು ತುಂಬಾ ಆರೋಗ್ಯವಾಗಿದ್ದರೆ ಕಾರ್ನಿಯಾವನ್ನು 4  ಭಾಗ ಮಾಡಬಹುದು. ಕಾರ್ನಿಯವನ್ನು ಒಂದು ಗ್ಲಾಸ್ ಎಂದು ಊಹಿಸಿದರೆ ಅದರಲ್ಲಿ ಮುಂಭಾಗ ಮತ್ತು ಹಿಂಭಾಗ ಇರುತ್ತದೆ. ಮುಂಭಾಗದ ಕಣ್ಣಿನ ಸಮಸ್ಯೆ ಇರುವವರಿಗೆ ಮುಂಭಾಗ , ಹಿಂಭಾಗದ ಕಣ್ಣಿನ ಸಮಸ್ಯೆ ಇರುವವರಿಗೆ ಹಿಂಭಾಗವನ್ನು ಅಳವಡಿಸಲಾಗುತ್ತದೆ.

ಇದನ್ನೂ ಓದಿ; Puneeth Rajkumar : 2 ಕಣ್ಣುಗಳ ಮೂಲಕ ನಾಲ್ಕು ಮಂದಿಗೆ ದೃಷ್ಟಿ ನೀಡಿದ ಪುನೀತ್‌ ರಾಜ್‌ ಕುಮಾರ್‌

ಈ ರೀತಿಯಾಗಿ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳು 4 ಜನರಿಗೆ ಬಳಸಲಾಗಿದೆ. 4  ಜನರ ಜೀವನಕ್ಕೆ ಪುನೀತ್ ರಾಜ್ ಕುಮಾರ್ ಅವರ ಅಮೂಲ್ಯವಾದ ಕಣ್ಣುಗಳು  ಬೆಳಕಾಗಿವೆ. ಪುನೀತ್ ರಾಜ್ ಕುಮಾರ್ ಅವರ ನೇತ್ರದಾನದಿಂದ ಅಭಿಮಾನಿಗಳು ಪ್ರೇರಣೆಗೊಂಡು ತಾವು ನೇತ್ರದಾನವನ್ನು ಮಾಡುತ್ತಿದ್ದಾರೆ. ಅದೂ ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿಗಳಾಗುತ್ತಿವೆ. ಏನೇ ಆದರು ಪುನೀತ್ ರಾಜ್ ಕುಮಾರ್ ನಿಧನರಾದ ಮೇಲು ತಮ್ಮ ಉತ್ತಮ ಆದರ್ಶ ಗಳಿಂದ  ಹೇಗೆ ಬದುಕ ಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

(Puneet Rajkumar Inspired : More than 1000 registered for eye donation on a single day)

Comments are closed.