ಮಂಗಳವಾರ, ಏಪ್ರಿಲ್ 29, 2025
HomeCinemaಮೋಡಿ ಮಾಡಲು ರೆಡಿ ಆದ್ರು ರಚಿತಾ ರಾಮ್‌ - ರಾಣಾ ಜೋಡಿ : ಫೆ.24...

ಮೋಡಿ ಮಾಡಲು ರೆಡಿ ಆದ್ರು ರಚಿತಾ ರಾಮ್‌ – ರಾಣಾ ಜೋಡಿ : ಫೆ.24 ರಂದು ತೆರೆಗೆ ಬರಲಿದೆ ಏಕ್ ಲವ್ ಯಾ

- Advertisement -

ಹಾಡುಗಳ‌ ಮೂಲಕವೇ ಸದ್ದು ಮಾಡಿದ ರಚಿತಾ ರಾಮ್‌ ಹಾಗೂ ರಾಣಾ ನಟನೆಯ (Rachitha Ram and Rana) ಏಕ್ ಲವ್ ಯಾ ಸಿನಿಮಾ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ರ ಬಹುನೀರಿಕ್ಷಿತ ಸಿನಿಮಾ. ಒಂದಕ್ಕಿಂತ ಒಂದು ಹಿಟ್ ಹಾಡುಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿರೋ ಈ ಸಿನಿಮಾ ಎಲ್ಲ ಅಂದಕೊಂಡಂತೆ ಆಗಿದ್ದರೇ ಜನವರಿ 21 ರಂದೇ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಮೂರನೇ ಅಲೆಯ ಪ್ರಭಾವದಿಂದ ಸಿನಿಮಾ ರಿಲೀಸ್ ಮುಂದೂಡಿಕೆ ಯಾಗಿತ್ತು. ಈಗ ಅಂತಿಮವಾಗಿ ಸಿನಿಮಾ ರಿಲೀಸ್ ಮುಹೂರ್ತ ನಿಗದಿಯಾಗಿದೆ.

ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ತಮ್ಮ ಬಾಮೈದ್ ಅಂದ್ರೇ ನಟಿರಕ್ಷಿತಾ ಸಹೋದರ ರಾಣಾ ಗಾಗಿ ಮತ್ತೊಮ್ಮೆ ಡೈರೈಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಪ್ರೀತಿ ಪ್ರೇಮದ ಕತೆ ಹೇಳೋ ಏಕ್ ಲವ್ ಯಾ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಿದ್ದು, ಸಿನಿಮಾ ಟ್ರೆಂಡಿ ಸಾಹಿತ್ಯದ ಹಾಡುಗಳಿಂದ ಈಗಾಗಲೇ ಹಲವು ದಾಖಲೆ ಬರೆದಿದೆ. ಈ ಮಧ್ಯೆ ಸಿನಿಮಾ ರಿಲೀಸ್ ಜನವರಿ 21 ರಿಂದ ಮುಂದೂಡಿಕೆಯಾಗಿದ್ದು ಅಭಿಮಾನಿಗಳ ಬೇಸರ ಕ್ಕೆಕಾರಣವಾಗಿತ್ತು. ಆದರೆ ಈಗ ಸರ್ಕಾರ ಥಿಯೇಟರ್ ಗಳಿಗೆ 100 ಕ್ಕೆ 100 ಪ್ರವೇಶಾವಕಾಶ ನೀಡಿದೆ.

ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿರೋ ಏಕ್ ಲವ್ ಯಾ ತಂಡ ಫೆ.11 ರಂದು ಟ್ರೇಲರ್ ರಿಲೀಸ್ ಹಾಗೂ ಫೆ.24 ರಂದು ಸಿನಿಮಾ ತೆರೆಗೆ ತರೋದಾಗಿ ಹೇಳಿದೆ. ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ರಾಣಾ ನಾಯಕರಾಗಿ ಚಂದನವನಕ್ಕೆ ಎಂಟ್ರಿಕೊಡ್ತಿರೋ ಈ ಸಿನಿಮಾದಲ್ಲಿ ರೇಷ್ಮಾ ನಾಣಯ್ಯ ಹಾಗೂ ರಚಿತಾರಾಮ್ ನಟಿಸಿದ್ದಾರೆ.

ಈ ಸಿನಿಮಾದ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೇ ಭಗವಂತ ಹಾಡಿನ ಮೂಲಕ ತೆಲುಗಿನ ಫೇಮಸ್ ಹಾಗೂ ಕಣ್ಣೇ ಅಂದಿರಿಂದಿ ಖ್ಯಾತಿಯ ಗಾಯಕಿ ಮಂಗ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದಾರೆ. ರಿಲೀಸ್ ಆಗಿರೋ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ ಹಾಡಿನಲ್ಲಿ ಇದೇ ಮೊದಲ ಬಾರಿಗೆ ನಟಿ ರಚಿತಾರಾಮ್ ಎಣ್ಣೆ ಬಾಟಲಿಯೊಂದಿಗೆ ಕುಣಿದು ಗಮನ ಸೆಳೆದಿದ್ದಾರೆ.

ಮಾತ್ರವಲ್ಲ ಮೀಟ್ ಮಾಡನಾ ಇಲ್ಲ ಡೇಟ್ ಮಾಡನಾ ಹಾಡಿನ ಮೂಲಕವೂ ರಚಿತಾರಾಮ್ ಸಖತ್ ಹವಾ ಕ್ರಿಯೇಟ್ ಮಾಡಿದ್ದು ಈ ಹಾಡುಗಳನ್ನು ನೋಡಿರೋ ಅಭಿಮಾನಿಗಳು ಸಿನಿಮಾ ರಿಲೀಸ್ ಆದ್ರೇ ಸಾಕು ಅಂತ ಕಾಯ್ತಿದ್ದಾರೆ. ಈ ಅಭಿಮಾನಿಗಳಿಗೆ ಈಗ ಫೆ.24 ಶುಭಸುದ್ದಿ ತಂದಿದೆ.

ಇದನ್ನೂ ಓದಿ : ಲೈಂಗಿಕ ಕಾರ್ಯಕರ್ತೆಯಾದ ಶ್ರುತಿ ಹರಿಹರನ್ : ಏನಿದು ಕಹಾನಿ ಇಲ್ಲಿದೆ ಡಿಟೇಲ್ಸ್

ಇದನ್ನೂ ಓದಿ : ನಾಗ ಚೈತನ್ಯರನ್ನು ‘ಹಸ್ಬೆಂಡ್​ ಮಟಿರೀಯಲ್​’ ಎಂದು ಹೊಗಳಿದ ನಟಿ ಸಮಂತಾ ಪ್ರಭು

(Rachitha Ram and Rana Casting Movie Ek Love Ya will release on February 24)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular