ಹಳೆ ವರ್ಷದ ಕಹಿನೆನಪುಗಳನ್ನು ಮರೆಸುವಂತೆ ಹೊಸ ವರ್ಷ ಕಾಲಿಟ್ಟಿದೆ. ಹೊಸ ವರ್ಷವನ್ನು ಸೆಲೆಬ್ರೆಟಿಗಳು ತಮ್ಮ ಆಪ್ತರ ಜೊತೆ ಸ್ವಾಗತಿಸೋದು ಕಾಮನ್. ಹಲವು ನಟ-ನಟಿಯರು ಮಾಲ್ಡೀವ್ಸ್ ಗೆ ಹಾರಿದ್ದರೇ ನ್ಯಾಶನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಮಾತ್ರ ಗೋವಾ ಕಡಲತೀರದಲ್ಲಿ (Rashmika in Goa) ಬೀಡುಬಿಟ್ಟಿದ್ದಾರಂತೆ. ಈ ಕೊಡಗಿನ ಸುಂದರಿಯ ನ್ಯೂ ಇಯರ್ ಸೆಲೆಬ್ರೇಶನ್ ಗೆ ಸಾಥ್ ಕೊಟ್ಟಿದ್ದಾರೆ ಟಾಲಿವುಡ್ ಹೀರೋ ವಿಜಯ್ ದೇವರಕೊಂಡ.
ಟಾಲಿವುಡ್ ನ ಗೀತ ಗೋವಿಂದಂ ಸಿನಿಮಾದ ಹಿಟ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿ ಕೆಮೆಸ್ಟ್ರಿ ಬಗ್ಗೆ ಎಲ್ಲರೂ ಮಾತನಾಡಲಾರಂಭಿಸಿದರು. ಈ ಮಾತು ಸುಳ್ಳಾಗಲಿಲ್ಲ.ಅಲ್ಲಿಯವರೆಗೂ ಸಿಂಗಲ್ ಆಗಿದ್ದ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಲಾರಂಭಿಸಿದ್ದಾರೆ. ಮುಂಬೈನ ಜಿಮ್ ಹಾಗೂ ಹೈದ್ರಾಬಾದ್ ನ ಜಿಮ್ ನಲ್ಲೂ ಈ ಜೋಡಿ ಒಟ್ಟಿಗೆ ವರ್ಕೌಟ್ ಮಾಡುವ ಮೂಲಕ ಗಾಸಿಪ್ ಗಳಿಗೆ ಆಹಾರವಾಗಿದ್ಧರು. ಅಷ್ಟೇ ಅಲ್ಲ ಗೀತ ಗೋವಿಂದಂ ಬಳಿಕ ಡಿಯರ್ ಕಾಮ್ರೇಡ್ ಸಿನಿಮಾದಲ್ಲೂ ಒಟ್ಟಿಗೆ ನಟಿಸಿ ಅಭಿಮಾನಿಗಳಿಗೆ ಹಬ್ಬವಾಗಿದ್ದರು.
ಇತ್ತೀಚಿಗೆ ಮುಂಬೈನ ಹೊಟೇಲ್ ನಲ್ಲಿ ತಡರಾತ್ರಿ ಒಟ್ಟಿಗೆ ಡಿನ್ನರ್ ನಲ್ಲಿ ಪಾಲ್ಗೊಂಡಿದ್ದ ಈ ಜೋಡಿ ಬಳಿಕ ಒಂದೇ ಕಾರಿನಲ್ಲಿ ತೆರಳಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈಗ ಹೊಸ ವರ್ಷ ಸ್ವಾಗತಿಸಲು ಈ ಜೋಡಿ ಒಟ್ಟಿಗೆ ಗೋವಾದಲ್ಲಿ ಕಾಣಿಸಿಕೊಂಡಿದ್ದು ಗೋವಾದ ರೆಸಾರ್ಟ್ ಹಾಗೂ ಬೀಚ್ ನಲ್ಲಿ ಸಂಭ್ರಮಿಸುತ್ತ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕ್ ಅಪ್ ಬಳಿಕ ಒಂಟಿಯಾಗಿದ್ದರು. ಆದರೆ ಈಗ ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗತ್ತಿದೆ. ಆದರೆ ಈ ವಿಚಾರವನ್ನು ರಶ್ಮಿಕಾ ಒಪ್ಪಿಕೊಂಡಿಲ್ಲ. ಬದಲಾಗಿ ನಾವಿಬ್ಬರೂ ಉತ್ತಮ ಸ್ನೇಹಿತರು ಎಂದಿದ್ದಾರೆ. ಸದ್ಯ ರಶ್ಮಿಕಾ ಪುಷ್ಪ ಗೆಲುವಿನ ಸಂಭ್ರಮದಲ್ಲಿದ್ದು ಈಗಾಗಲೇ ಸಿನಿಮಾ ಕೋಟಿ ಕ್ಲಬ್ ಸೇರಿದೆ. ಇದಲ್ಲದೇ ಇನ್ನೊಂದು ತೆಲುಗು ಸಿನಿಮಾಗೂ ರಶ್ಮಿಕಾ ಸಹಿಹಾಕಿದ್ದಾರೆ.
ಬಾಲಿವುಡ್ ನಲ್ಲಿ ಮಿಶನ್ ಮಜ್ನು ಹಾಗೂ ಗುಡ್ ಬೈ ಸಿನಿಮಾದಲ್ಲಿ ನಟಸಿದ ರಶ್ಮಿಕಾಗೆ ಟಾಲಿವುಡ್,ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಸಖತ್ ಅವಕಾಶಗಳು ಒಲಿದುಬರುತ್ತಿದೆ. ಆದರೆ ರಶ್ಮಿಕಾ ಸ್ಯಾಂಡಲ್ ವುಡ್ ನಿಂದ ಮಾತ್ರ ಅಂತರ ಕಾಯ್ದುಕೊಂಡಿದ್ದು, ಪೊಗರು ಬಳಿಕ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ.
ಇದನ್ನೂ ಓದಿ : ಗಾಯ ಆರಲು ಏನೋ ಬೇಕೋ ಅದನ್ನು ಮಾಡೋಣ: ಹೊಸ ವರ್ಷಕ್ಕೆ ಸಮಂತಾ ಸಂದೇಶ
ಇದನ್ನೂ ಓದಿ : ಶ್ರೀಲಂಕಾ ಬೆಡಗಿ ಮತ್ತು ಇಡಿ ವಂಚಕ : ತೆರೆಗೆ ಬರುತ್ತಾ ಜಾಕ್ವಲಿನ್ ಫರ್ನಾಂಡಿಸ್ ಲೈಫ್ ಸ್ಟೋರಿ
(Rashmika in Goa : Mandanna new year celebration with Vijay Deverakonda)