ಸೋಮವಾರ, ಏಪ್ರಿಲ್ 28, 2025
HomeCinemaSathyajith : ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ಸತ್ಯಜಿತ್‌ ಇನ್ನಿಲ್ಲ

Sathyajith : ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ಸತ್ಯಜಿತ್‌ ಇನ್ನಿಲ್ಲ

- Advertisement -

ಬೆಂಗಳೂರು : ಸ್ಯಾಂಡಲ್‌ವುಡ್‌ನ ಹಿರಿಯ ನಟ ಸತ್ಯಜಿತ್‌ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೀಗ ಚಿಕಿತ್ಸೆ ಫಲಕಾರಿಯಾಗದೇ ಸತ್ಯಜಿತ್‌ ಕೊನೆಯುಸಿರೆಳೆದಿದ್ದಾರೆ.

ಸತ್ಯಜಿತ್‌ ಅವರ ಮೊದಲ ಹೆಸರು ಸಯ್ಯದ್‌ ನಿಜಾಮುದ್ದೀನ್.‌ ಸಿನಿಮಾ ರಂಗಕ್ಕೆ ಕಾಲಿಟ್ಟ ನಂತರದಲ್ಲಿ ತನ್ನ ಹೆಸರನ್ನು ಸತ್ಯಜಿತ್‌ ಎಂದು ಬದಲಾಯಿಸಿಕೊಂಡಿದ್ದರು. 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದಲೂ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತ್ಯಜಿತ್‌ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 2 ಗಂಟೆಗೆ ನಿಧನರಾಗಿದ್ದಾರೆ.

ಈ ಮೊದಲು ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರು. ಅಲ್ಲದೇ ಮಧುಮೇಹದಿಂದಲೂ ಬಳಲುತ್ತಿದ್ದರು. ಇದೀಗ ಪಾರ್ಥವ ಶರೀರವನ್ನು ಬೆಂಗಳೂರಿನಿ ಹೆಗಡೆ ನಗರದಲ್ಲಿರುವ ನಿವಾಸಕ್ಕೆ ಕರೆತರಲಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಹೆಗಡೆ ನಗರದ ಖಬರಸ್ಥಾನದಲ್ಲಿ ಅಂತ್ಯಕ್ರೀಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬಾಲಿವುಡ್‌ನ ಅಂಕುಷ್‌ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸತ್ಯಜಿತ್‌, ಅರುಣ ರಾಗ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ನಲ್ಲಿ ನಟಿಸೋದಕ್ಕೆ ಆರಂಭಿಸಿದ್ದರು. ಮೊದಲ ಸಿನಿಮಾದಲ್ಲಿಯೇ ಮನೋಜ್ಞ ಅಭಿನಯದ ಮೂಲಕ ಸತ್ಯಜಿತ್‌ ಮನೆ ಮಾತಾದ್ರು. ನಂತರ ಮಿ.ರಾಜ, ತಾಯಿಗೊಮ್ಮ ಕರ್ಣ, ಶಿವ ಮೆಚ್ಚಿದ ಕಣ್ಣಪ್ಪ, ರಣರಂಗ, ನಮ್ಮೂರ ರಾಜ, ಯುದ್ದಕಾಂಡ, ಪದ್ಮವ್ಯೂಹ, ಇಂದ್ರಜಿತ್‌, ನಮ್ಮೂರ ಹಮ್ಮೀರ, ಪೊಲೀಸ್‌ ಲಾಕ್‌ ಅಪ್‌, ಚೈತ್ರದ ಪ್ರೇಮಾಂಜಲಿ, ಸಂಘರ್ಷ, ಪುಣ್ನಂಜ, ಯಮಕಿಂಕರ, ಮೋಜುಗಾರ ಸೊಗಸುಗಾರ, ಪೊಲೀಸ್‌ ಸ್ಟೋರಿ, ಗುಲಾಬಿ, ಹನಿಮೂನ್‌, ಇಂದ್ರ, ಅರಸರು, ಹುಡುಗಾಟ, ಆಪ್ತಮಿತ್ರ, ಅಭಿ, ಧಮ್‌, ಅಪ್ಪು, ಸತ್ಯಮೇವ ಜಯತೆ, ಫ್ರಿನ್ಸ್‌, ಕಳ್ಳಮಂಜ, ಕಟಾರಿವೀರ ಸಂಗೊಳ್ಳಿ ರಾಯಣ್ಣ, ಸ್ನೇಹಿತರು, ಗಾಡ್‌ ಫಾದರ್‌, ಲಕ್ಕಿ, ಶಾರ್ಪ್‌ ಶೂಟರ್‌, ಉಪ್ಪಿ -2. ವಿರಾಟ್‌ ಸೇರಿದಂತೆ ಒಟ್ಟು 650 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಸತ್ಯಜಿತ್‌ 2018 ರಲ್ಲಿ ತೆರೆಕಂಡ 2nd Half ಅವರು ನಟನೆಯ ಕೊನೆಯ ಸಿನಿಮಾ ಆಗಿದೆ. ಸತ್ಯಜಿತ್‌ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ : ಆರ್ಯನ್‌ ಖಾನ್‌ ನಿಂದ ತಂದೆಯ ಜಾಹೀರಾತಿಗೆ ಕತ್ತರಿ : ಶಾರುಖ್ ಖಾನ್ ನಟಿಸಿರುವ ಜಾಹೀರಾತು ನಿಲ್ಲಿಸಿದ BYJU’s

ಇದನ್ನೂ ಓದಿ :  ನಾಯಕಿ ಪೋಸ್ಟರ್ ಬಿಡುಗಡೆ ಮಾಡಿದ ‘ಭಜರಂಗಿ 2’ ಚಿತ್ರ ತಂಡ

(Sandalwood’s actor Satyajit is no more )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular