ಆಯುರ್ವೇದದಲ್ಲಿದೆ ಸೌಂದರ್ಯದ ಗುಟ್ಟು

0
  • ಅಂಚನ್ ಗೀತಾ

ಪ್ರತಿಯೊಬ್ಬ ಮಹಿಳೆ ಕೂಡ ತಾನು ಸುಂದರವಾಗಿರಬೇಕು… ಇತರರಿಗಿಂತ ಭಿನ್ನವಾಗಿರಬೇಕೆಂದು ಬಯಸ್ತಾಳೆ…. ಆದ್ರೆ ಕೆಲವರು ಕಾಸ್ಮೆಟಿಕ್ ಗಳ ಮೊರೆ ಹೋಗ್ತಾರೆ. ನಮ್ಮ‌ ಆರ್ಯವೇದಿಯ ಗುಣಗಳಿರೋ ಸಸ್ಯ, ತರಕಾರಿ, ಹಣ್ಣುಗಳ ಬಗ್ಗೆ ಮಾಹಿತಿ ಇರಲ್ವೋ ಅಥವಾ ಯಾರು ಅಷ್ಟೊಂದು ಟೈಮ್ ವೇಸ್ಟ್ ಮಾಡೋದು ಅಂತಾ ಹೀಗೆಲ್ಲಾ ಮಾಡ್ತಾರೋ ಗೊತ್ತಿಲ್ಲ.

ಆದ್ರೆ ಮನೆಯಲ್ಲಿದ್ದುಕೊಂಡೆ ನಿಮ್ಮ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು. ಅದು ಹೇಗೆ ಅಂತೀರಾ? ಇಲ್ಲಿ ನಾ ನಿಮಗೆ ಹಲವಾರು‌ ಉಪಯೋಗಕಾರಿ ಟಿಪ್ಸ್ ಹೇಳ್ತಿನಿ. ಅದು ನನಿಗೆ ಉಪಯೊಗವಾಗಿರೋದ್ರಿಂದ ನಿಮಗೆ ಸಲಹೆಗಳನ್ನು ನೀಡ್ತಿನಿ ಕೇಳಿ.

ಕೆಲವರಿಗೆ ಮೇಕಪ್ ಮಾಡೋದು ಬಹಳ ಇಷ್ಟ‌ ಆದ್ರೆ ನೈಟ್ ಪಾರ್ಟಿಗಳಿಗೆ ಹೋಗಿ ‌ಮೇಕಪ್ ತೆಗೆಯದೆ ಹಾಗೆ ಮಲಗಿದ್ರೆ ಅದು ತ್ವಚೆಯನ್ನು ಹಾಳುಮಾಡೋದ್ರಲ್ಲಿ ಸಂಶಯವಿಲ್ಲ. ಹಾಗಾಗಿ ಮೇಕಪ್ ತೆಗೆದು ಮಲಗಿ. ತದನಂತರ ಮಲಗೋಕು ಮುನ್ನ ಅಲೋವಿರಾ ಜೆಲ್ ನ ಮುಖಕ್ಕೆ ಅಪ್ಲೈ ಮಾಡಿ ಮುಂಜಾನೆ ಶುಭ್ರ ನೀರಲ್ಲಿ ತೊಳೆಯಿರಿ.

ಇನ್ನು ಕೆಲವರಿಗೆ ಮುಖದ ಸುತ್ತ ಕಪ್ಪು ಕಲೆ, ಬಿಳಿ ಕಲೆಗಳು ( blackheads & whiteheads)ಹೆಚ್ಚಾಗಿರುತ್ತೆ ಅದನ್ನ ಮನೆಯಲ್ಲಿದ್ದೆ ಸರಿಪಡಿಸಬಹುದು…

ಅದಕ್ಕಾಗಿ 1 ಬೌಲ್ ನಲ್ಲಿ ಟಮೋಟೊ ಹಣ್ಣನ್ನು ಹಾಕಿ ಜಜ್ಜಿ ಅದರ ನೀರಿಗೆ 1 ಸ್ಪೂನ್ ಅಲೋವಿರಾ ಜೆಲ್ ಹಾಕಿ, 2ಸ್ಪೂನ್ ಅಕ್ಕಿಹಿಟ್ಟು ಹಾಕಿ, 1ಸ್ಪೂನ್ ಅರಿಶಿನ ಹಾಕಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷದ ಬಳಿಕ ತಣ್ಣನೆ ನೀರಲ್ಲಿ ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡಿದ್ರೆ ಉತ್ತಮ ಫಲಿತಾಂಶ‌ ಸಿಗುತ್ತದೆ.

ಇನ್ನು ಪ್ರತಿನಿತ್ಯ ಯೋಗ, ಜಾಗಿಂಗ್, exercise ಮಾಡಿದ್ರೆ ದೇಹದ ರಕ್ತ ಪರಿಚಲನೆ ಸಮತೋಲನವಾಗಿ ಸುಂದರ ತ್ವಚೆ ನಿಮ್ಮದಾಗುತ್ತೆ.

ಇನ್ನು ಆಹಾರ ಪದ್ದತಿಯಲ್ಲಿ ಬದಲಾವಣೆ ತನ್ನಿ ಹಸಿ ತರಕಾರಿ, ಹಣ್ಣು ಹೆಚ್ಚಾಗಿ ಸೇವಿಸಿ. ಎಣ್ಣೆಯಲ್ಲಿ ಖರೀದ ಪದರ್ಥಾಗಳನ್ನು ಮುಟ್ಟಲೆಬೇಡಿ. ಬದಲಿಗೆ ಚಪಾತಿ, ಓಟ್ಸ್,ಫ್ರೂಟ್ಸ್, ಆಪಲ್ ಸಾಸ್ ಬಳಸಿ.

ಮುಂಜಾನೆ ಎದ್ದಾಕ್ಷಣ ತೆಂಗಿನ ಎಣ್ಣೆಯಲ್ಲಿ ಬಾಯಿ ಮುಕ್ಕಳಿಸಿ ಇದು ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸುತ್ತದೆ. ನಿಮ್ಮ ಪ್ರತಿನಿತ್ಯದ ದಿನಚರಿ ಈ ರೀತಿ ಇದ್ದರೆ ತ್ವಚೆಯಂತೂ ಸುಂದರವಾಗಿ ಕಂಗೊಳಿಸುತ್ತೆ.

(Ayurveda is a beauty secret )

Leave A Reply

Your email address will not be published.