ಸೋಮವಾರ, ಏಪ್ರಿಲ್ 28, 2025
HomeCinemaRishab Shetty: ರಿಷಬ್ ಶೆಟ್ಟಿ ಹುಟ್ಟೂರಿನಲ್ಲಿ ಹೊಸ ಸಿನಿಮಾಕ್ಕೆ ಮುಹೂರ್ತ: ಕಾಂತಾರಕ್ಕೆ ಸಜ್ಜಾದ ಹೊಂಬಾಳೆ...

Rishab Shetty: ರಿಷಬ್ ಶೆಟ್ಟಿ ಹುಟ್ಟೂರಿನಲ್ಲಿ ಹೊಸ ಸಿನಿಮಾಕ್ಕೆ ಮುಹೂರ್ತ: ಕಾಂತಾರಕ್ಕೆ ಸಜ್ಜಾದ ಹೊಂಬಾಳೆ ಫಿಲ್ಸ್ಮಂ

- Advertisement -

ಡಾ.ಶಿವರಾಜ್ ಕುಮಾರ್ ರನ್ನು ಜಾನಪದ ಕ್ರೀಡೆ ಕಂಬಳದ ಪಾತ್ರದಾರಿಯಾಗಿ ಬಿಂಬಿಸೋ ಕಾಂತಾರ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ನಿರ್ದೇಶಕ ರಿಷಬ್ ಶೆಟ್ಟಿ ಆಕ್ಷ್ಯನ್ ಕಟ್ ಹೇಳಲಿರುವ ಸಿನಿಮಾವನ್ನು ಹೊಂಬಾಳೆ ಫಿಲ್ಸಂ ನಿರ್ಮಿಸಲಿದೆ.

ರಿಷಬ್ ಶೆಟ್ಟಿಯ ಹುಟ್ಟೂರಾದ ಆನೆಗುಡ್ಡೆಯ ವಿನಾಯಕ ದೇವಾಲಯದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿಸಲಾಗಿದ್ದು, ನಿರ್ಮಾಪಕ ವಿಜಯ್ ಕಿರಂಗದೂರು ಜೊತೆಗೆ ಚಿತ್ರದ ತಾಂತ್ರಿಕ ತಜ್ಞರು,ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಸಹ ಪಾಲ್ಗೊಂಡಿದ್ದರು.

ಚಿತ್ರದ ಮುಹೂರ್ತದ ಬಳಿಕ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ಕಾಂತಾರ ಚಿತ್ರದ ಮುಹೂರ್ತ ಇಂದು ಹುಟ್ಟೂರಿನ ಆನೆಗುಡ್ಡ ಆಂಜನೇಯ ದೇವಾಲಯದಲ್ಲಿ ನೆರವೇರಿತು. ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ವಿಜಯ್ ಕಿರಂಗದೂರು ಅವರಿಗೆ ಧನ್ಯವಾದಗಳು. ಕಾಂತಾರ ಸಿನಿಮಾಕ್ಕೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದಿದ್ದಾರೆ.

ಕಾಂತಾರ ಸಿನಿಮಾ ಕರಾವಳಿಯ ಜಾನಪದೀಯ ಕಲೆ ಕಂಬಳವನ್ನು ಆಧರಿಸಿದ್ದು, ಮೊದಲನೇ ಬಾರಿಗೆ ಇಂತಹದೊಂದು ವಿಭಿನ್ನ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲ್ಮಂ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದು, ಇದರಲ್ಲಿ ಪುನೀತ್ ರಾಜಕುಮಾರ್ ನಟನೆಯ ದ್ವಿತ್ವ, ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟ್ಯನಿ ಹಾಗೂ ಕಾಂತಾರ ಸೇರಿದೆ.

RELATED ARTICLES

Most Popular