ಪ್ರತಿ ಮಗುವೂ ಕೃಷ್ಣನಾಗಿ, ಪ್ರತಿ ಮನೆಯೂ ನಂದಗೋಕುಲವಾಗುವ ಶ್ರೀಕೃಷ್ಣಜನ್ಮಾಷ್ಟಮಿಯ ಸಂಭ್ರಮ ಎಲ್ಲೆಡೆ ಹರಡಿದೆ. ಸ್ಯಾಂಡಲ್ ವುಡ್ ನಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಜೋರಾಗಿದ್ದು, ಮೇಘನಾ ಸರ್ಜಾ ಜ್ಯೂನಿಯರ್ ಚಿರು ಕೃಷ್ಣಾವತಾರದ ಪೋಟೋ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾಕಾಲ ಆಕ್ಟಿವ್ ಆಗಿರೋ ಮೇಘನಾ ರಾಜ್ ತಮ್ಮ ಮಗನ ಪ್ರತಿಯೊಂದು ಬೆಳವಣಿಗೆ, ಸ್ಪೆಶಲ್ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೃಷ್ಣಜನ್ಮಾಷ್ಟಮಿಯಂದು ಶ್ರೀಲೋಲ ಕೃಷ್ಣನಾಗಿ ನಿಂತ ಜ್ಯೂನಿಯರ್ ಚಿರು ಪೋಟೋವನ್ನು ಮೇಘನಾ ಶೇರ್ ಮಾಡಿದ್ದಾರೆ.

ಮೆರೂನ್ ಕಲರ್ ಧೋತಿ ಹಾಗೂ ಸಿಂಪಲ್ ಅಲಂಕಾರದಲ್ಲಿ ಜ್ಯೂನಿಯರ್ ಚಿರು ಕೃಷ್ಣನಂತೆ ಕಂಗೊಳಿಸಿದ್ದು, ಈ ಮುದ್ದು ಕೃಷ್ಣನಿಗೆ ಚಿರು ಹಾಗೂ ಮೇಘನಾ ಸ್ನೇಹಿತ ಪನ್ನಗಾಭರಣ ಪುತ್ರ ವೇದ ಭರಣ ಕೂಡ ಸಾಥ್ ನೀಡಿದ್ದಾನೆ.
https://www.instagram.com/p/CTLyYmcPJlb/?utm_medium=share_sheet
ಮಗನ ಮುದ್ದು ಕೃಷ್ಣ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರೋ ನಟಿ ಮೇಘನಾ ರಾಜ್ ನನ್ನ ಬೆಣ್ಣೆ ಮುದ್ದು ಮುದ್ದು ಬಂಗಾರಾ ಎಂದು ಕ್ಯಾಪ್ಸನ್ ನೀಡಿದ್ದಾರೆ. ಮೇಘನಾ ಹಂಚಿಕೊಂಡ ಜ್ಯೂನಿಯರ್ ಚಿರು ಪೋಟೋಗೆ ಸಖತ್ ಲೈಕ್ಸ್ ಬಂದಿದ್ದು, ಚಿರು ಮೇಘನಾ ಅಭಿಮಾನಿಗಳು ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.