Drugs Case : ಡ್ರಗ್ಸ್‌ ಕೇಸ್‌ ಪ್ರಕರಣ : ಬಂಧನ ಭೀತಿಯಲ್ಲಿ ನಟಿ ಸೋನಿಯಾ ಅಗರ್‌ವಾಲ್‌

ಬೆಂಗಳೂರು : ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ನಟಿಗೆ ಬಂಧನದ ಭೀತಿ ಎದುರಾಗಿದೆ. ಸ್ಯಾಂಡಲ್‌ವುಡ್‌ ನಟಿ ಸೋನಿಯಾ ಅಗರ್‌ವಾಲ್‌ ಮನೆಯಲ್ಲಿ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ದಕ್ಷಿಣ ವಲಯ ಪೊಲೀಸರು ಇಂದು ಮೂವರು ಉದ್ಯಮಿ ಹಾಗೂ ಸೆಲೆಬ್ರಿಟಿಗಳ ಮನೆಯ ಮೇಲೆ ದಾಳಿಯನ್ನು ನಡೆಸಿದ್ದಾರೆ. ನಟಿ ಸೋನಿಯಾ ಅಗರ್‌ವಾಲ್‌ ಮನೆಯ ಮೇಲೆ ನಡೆಸಿದ ದಾಳಿಯ ವೇಳೆಯಲ್ಲಿ ಸುಮಾರು 40 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಕಾಸ್ಮೆಟಿಕ್‌ ವ್ಯವಹಾರವನ್ನುನಡೆಸುತ್ತಿರುವ ನಟಿ ಸೋನಿಯಾ ಅಗರ್‌ವಾಲ್‌ ಉದ್ಯಮಿಗಳು, ಸೆಲೆಬ್ರಿಟಿಗಳ ಜೊತೆಗೆ ಸಂಪರ್ಕವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಇನ್‌ಸ್ಪೆಕ್ಟರ್‌ ಕಿರಣ್‌ ನೇತೃತ್ವದ ಪೊಲೀಸರ ತಂಡ ಈ ದಾಳಿಯನ್ನು ನಡೆಸಿದ್ದು, ದಾಳಿಯ ವೇಳೆಯಲ್ಲಿ ನಟಿ ಸೋನಿಯಾ ಅಗರ್‌ವಾಲ್‌ ಮನೆಯಲ್ಲಿ ಇರಲಿಲ್ಲ. ಠಾಣೆಗೆ ಬರುವಂತೆ ಸೂಚನೆಯನ್ನು ನೀಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಗೋವಿಂದಪುರ ಡ್ರಗ್ಸ್‌ ಕೇಸ್‌ ಪ್ರಕರಣ : ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸ್‌ ದಾಳಿ

ಇದನ್ನೂ ಓದಿ : ಖ್ಯಾತ ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ ನಿರ್ದೇಶಕ ! ದೂರು ದಾಖಲಿಸಿದ ನಟಿ

Comments are closed.