ಭಾನುವಾರ, ಏಪ್ರಿಲ್ 27, 2025
HomeCinemaಸಿಂಪಲ್ ಸಿನಿ ಜರ್ನಿಗೆ 11 ರ ಸಂಭ್ರಮ….! ರಿಚರ್ಡ್ ಆಂಟನಿಗೆ ಶುಭಾಶಯಗಳ ಮಹಾಪೂರ….!!

ಸಿಂಪಲ್ ಸಿನಿ ಜರ್ನಿಗೆ 11 ರ ಸಂಭ್ರಮ….! ರಿಚರ್ಡ್ ಆಂಟನಿಗೆ ಶುಭಾಶಯಗಳ ಮಹಾಪೂರ….!!

- Advertisement -

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ಖ್ಯಾತಿಯ ನಟ,ನಿರ್ದೇಶಕ,ನಿರ್ಮಾಪಕ ಹೀಗೆ ಬಹುಮುಖ ಪ್ರತಿಭೆ ರಕ್ಷಿತ್ ಶೆಟ್ಟಿ ಚಂದನವನಕ್ಕೆ ಕಾಲಿಟ್ಟು 11 ವರ್ಷಗಳಾದ ಸಂಭ್ರಮದಲ್ಲಿದ್ದಾರೆ. ನಮ್ ಏರಿಯಾದಲ್ಲೊಂದು ದಿನ ದಿಂದ ಆರಂಭವಾದ ಸಿನಿಜರ್ನಿ ಪ್ರತಿಷ್ಠಿತ ಹೊಂಬಾಳೆ ಫಿಲ್ಸ್ಮಂ ನ ರಿಚರ್ಡ್ ಆಂಟ್ಯನಿವರೆಗೆ ಬಂದು ನಿಂತಿದ್ದು, ಅಭಿಮಾನಿಗಳು ಕಾಮನ್ ಡಿಪಿ ಮೂಲಕ ಶುಭ ಹಾರೈಸುತ್ತಿದ್ದಾರೆ.

2010 ಜುಲೈ 23 ರಂದು ನಮ್ಮ ಏರಿಯಾದಲ್ಲೊಂದು ದಿನ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು. ಆದರೆ ಮೊದಲಿನ ಎರಡು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ಮನಗೆಲ್ಲಲಿಲ್ಲ. ಆದರೂ ಛಲ ಬಿಡದೇ ಪ್ರಯತ್ನ ಪಟ್ಟ ರಕ್ಷಿತ್ ಶೆಟ್ಟಿ, ಸಿಂಪಲ್ಲಾಗ ಒಂದು ಲವ್ ಸ್ಟೋರಿ ಮೂಲಕ ಪ್ರೇಕ್ಷಕರ ಮನಗೆದ್ದರು.

2014 ರಲ್ಲಿ ನಟನೆಯ ಜೊತೆಗೆ ನಿರ್ದೇಶನಕ್ಕೂ ಕಾಲಿಟ್ಟ ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆಯಂತಹ ವಿಭಿನ್ನ ಸಿನಿಮಾದ ಮೂಲಕ ಚಂದನವನದಲ್ಲಿ ಸ್ಟಾರ್ ಪಟ್ಟಕ್ಕೇರಿದರು. ಉಳಿದವರು ಕಂಡಂತೆ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕ್ಲಿಕ್ ಆದ ರಕ್ಷಿತ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ರಿಕ್ಕಿ ವಾಸ್ತುಪ್ರಕಾರದಂತಹ ಸಿನಿಮಾಗಳಲ್ಲಿ ನಟಿಸಿದರು.

ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿಯ ಅದೃಷ್ಟವನ್ನೇ ಬದಲಾಯಿಸಿದ್ದು, ಈ ಸಿನಿಮಾದ ಸಕ್ಸಸ್ ರಕ್ಷಿತ್ ಶೆಟ್ಟಿಯನ್ನು ಬೆಳೆಸಿತು. ಅವನೇ ಶ್ರೀಮನ್ನಾರಾಯಣ ಸಿನಿಮಾ ಹೇಳಿಕೊಳ್ಳುವಂತ ಯಶಸ್ಸು ಪಡೆಯಲಿಲ್ಲ.  ಆಬಳಿಕ ಚಿಕ್ಕ ಬ್ರೇಕ್ ಪಡೆದಿದ್ದ ರಕ್ಷಿತ್ ಶೆಟ್ಟಿ ಈಗ 777 ಚಾರ್ಲಿ  ಮೂಲಕ ಮತ್ತೆ ತೆರೆಗೆ ಬರಲು ಸಿದ್ಧವಾಗಿದ್ದಾರೆ.

ಇದಲ್ಲದೇ ಸಪ್ತಸಾಗರದಾಚೆ ಎಲ್ಲೂ ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದೆ. ಅದರೊಂದಿಗೆ ಇದೇ ತಿಂಗಳು ರಕ್ಷಿತ್ ಶೆಟ್ಟಿ ಹೊಂಬಾಳೆ ಫಿಲ್ಸ್ಮಂ ಜೊತೆ ರಿಚರ್ಡ್ ಆಂಟ್ಯನಿ ಸಿನಿಮಾ ಘೋಷಿಸಿದ್ದು, ತಮ್ಮ ಸಿಂಪಲ್ ಫ್ಯಾನ್ ಗಳಿಗೆ ಮುಂದಿನ ದಿನದಲ್ಲಿ ಭರ್ಜರಿ ಸಿನಿಮಾ ಭೋಜನ ಮಾಡಿಸಲಿದ್ದಾರೆ.

ತಮ್ಮ 11 ವರ್ಷಗಳ ಸಿಂಪಲ್, ಸೂಪರ್ ಸಿನಿಜರ್ನಿಯನ್ನು ಟ್ವೀಟ್ ನಲ್ಲಿ ಸ್ಮರಿಸಿರುವ ರಕ್ಷಿತ್ ಶೆಟ್ಟಿ 11 ವರ್ಷದ ಸಿನಿಮಾ ಜರ್ನಿಯಲ್ಲಿ ಜೊತೆಗಿರುವ ಅಭಿಮಾನಿಗಳಿಗೆ ಧನ್ಯವಾದ ಎಂದಿದ್ದಾರೆ.

RELATED ARTICLES

Most Popular