Bandipora Encounter : ಬಂಡಿಪೋರಾದಲ್ಲಿ ಉಗ್ರರಿಬ್ಬರ ಹೊಡೆದುರುಳಿಸಿದ ಸೇನಾಪಡೆ

ನವದೆಹಲಿ : ಭಾರತೀಯ ಸೇನಾ ಪಡೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ನಡೆಸಿದ ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದು ಉರುಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಜಮ್ಮು- ಕಾಶ್ಮೀರದ ಬಂಡಿಪೋರಾದ ಸುಮ್ಬ್ಲಾರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇಲೆ ಸೇನಾಪಡೆ ದಾಳಿಯನ್ನು ನಡೆಸಿದೆ. ಭದ್ರತಾ ಪಡೆಯ ಕಾರ್ಯಾಚರಣೆಯ ವೇಳೆಯಲ್ಲಿ ಉಗ್ರರು ಪ್ರತಿದಾಳಿಯನ್ನು ನಡೆಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಹೊಡೆದು ಉರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಸ್ಥಳದಲ್ಲಿ ಭದ್ರತಾ ಪಡೆ ಸುತ್ತುವರಿದ್ದಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಿದೆ. ಆರಂಭದಲ್ಲಿ ಉಗ್ರರಿಗೆ ಶರಣಾಗತರಾಗಲು ಅವಕಾಶ ನೀಡಲಾಗಿತ್ತು. ಆದರೆ ಉಗ್ರರು ಈ ಅವಕಾಶವನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್‌ಕೌಂಟರ್‌ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Comments are closed.