ಭಾನುವಾರ, ಏಪ್ರಿಲ್ 27, 2025
HomeCinemakgf James Vikrant Rona : 2022 ರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಹಬ್ಬ: ತೆರೆಗೆ...

kgf James Vikrant Rona : 2022 ರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಹಬ್ಬ: ತೆರೆಗೆ ಬರಲಿದೆ ಮೂರು ಬಿಗ್ ಬಜೆಟ್ ಚಿತ್ರ

- Advertisement -

ಕೊರೊನಾ ನೆರಳಿನಲ್ಲೇ ಹೊಸ ನೀರಿಕ್ಷೆಗಳ ಜೊತೆ 2022 ಆರಂಭಗೊಂಡಿದೆ. ಹೊಸ ವರ್ಷದಲ್ಲಿ ಹೊಸ ಹೊಸ ಖುಷಿ, ಸಂಭ್ರಮದ ನೆನಪಿನಲ್ಲಿರೋ ಜನರಿಗೆ ಚಿತ್ರೋದ್ಯಮದಿಂದ ಏನೆಲ್ಲ ಸಿಗಲಿದೆ ಅನ್ನೋದನ್ನು ಗಮನಿಸೋದಾದರೇ ಎಲ್ಲ ಅಂದುಕೊಂಡಂತೆ ಆದರೆ‌ ಮೂರು ಹೈವೋಲ್ಟೇಜ್ (kgf James Vikrant Rona) ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಬರೋದು ಬಹುತೇಕ ಖಚಿತವಾಗಿದ್ದು ಕಳೆದ ಎರಡು ವರ್ಷಗಳಿಂದ ಥಿಯೇಟರ್ ನತ್ತ ಮುಖಮಾಡೋಕಾಗದೇ ನೊಂದಿದ್ದ ಸಿನಿಪ್ರೇಮಿಗಳಿಗೆ ರಸದೌತಣ ಬಡಿಸಲಿದೆ.

ಕಳೆದ ಎರಡು ವರ್ಷಗಳಿಂದ ಚಿತ್ರೋದ್ಯಮ ಸ್ತಬ್ಧವಾಗಿತ್ತು.‌ಜನರು ಮನೆಯಲ್ಲೇ ಬಂಧಿಯಾಗಿದ್ದರೇ ಸಿನಿಮಾರಂಗ ಮನೆಯಲ್ಲಿ ಇರೋಕಾಗದೇ ಒಪ್ಪಿಕೊಂಡ ಕೆಲಸಗಳನ್ನು ಮಾಡೋಕಾಗದೇ ಪರಿತಪಿಸಿತ್ತು. 2021 ರ ಅರ್ಧದಲ್ಲಿ ಥಿಯೇಟರ್ ಗಳು ಬಾಗಿಲು ತೆರೆದರೂ ಅರ್ಧದಷ್ಟು ಅವಕಾಶದ ಕಾರಣಕ್ಕೆ ಹಾಗೂ ಜನರು ಥಿಯೇಟರ್ ನತ್ತ ಮುಖ‌ಮಾಡ್ತಾರೋ ಇಲ್ವೋ ಅನ್ನೋ ಕಾರಣಕ್ಕೆ ಬಿಗ್ ಬಜೆಟ್ ಸಿನಿಮಾಗಳು ಬರಲಿಲ್ಲ. ವರ್ಷಾಂತ್ಯದ ವೇಳೆಗೆ ಒಂದಿಷ್ಟು ಸಿನಿಮಾಗಳು ತೆರೆಕಂಡು ಜನರನ್ನು ರಂಜಿಸಿ ಗಮನಸೆಳೆದವು. ಅದರೆ 2022 ರಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಸೋಂಕು ಉಲ್ಬಣಿಸದೇ ಎಲ್ಲಾ ಯಥಾಸ್ಥಿತಿಯಲ್ಲೇ ಇದ್ದರೇ ಬಾಕ್ಸಾಫೀಸ್ ಧೂಳೆಬ್ಬಿಸುವಂತ ಸಿನಿಮಾಗಳು ಸ್ಕ್ರಿನ್ ಬರಲಿದೆ.

ಕನ್ನಡ ಚಿತ್ರರಂಗದಲ್ಲೇ ವಿಭಿನ್ನ ಪ್ರಯೋಗ ಎನ್ನಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಫೆ.24 ರಂದು ತೆರೆಗೆ ಬರಲು ಸಿದ್ಧವಾಗಿದೆ. ಜಾಕ್ ಮಂಜು ನಿರ್ಮಾಣದ ನಿರೂಪ ಭಂಡಾರಿ ನಿರ್ದೇಶನದ ಈ ಸಿನಿಮಾ ಲೋಗೋ ದುಬೈನ ಬುರ್ಜಾ ಖಲಿಫಾದಲ್ಲಿ ಅನಾವರಣಗೊಂಡಿತ್ತು. ಅಲ್ಲದೇ ಟೀಸರ್ ಕೂಡಾ ಸಖತ್ ನೀರಿಕ್ಷೆ ಮೂಡಿಸಿದೆ. ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ಈ ಸಿನಿಮಾದಲ್ಲಿ ಗಡಂಗ ರುಕ್ಕಮ್ಮನಾಗಿ ಐಟಂ ಸಾಂಗ್ ಹಾಗೂ ಸ್ಪೆಶಲ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಇದರೊಂದಿಗೆ ಸ್ಯಾಂಡಲ್ ವುಡ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಕೆಜಿಎಫ್ ಸಿನಿಮಾದ ಸಿಕ್ವೆನ್ಸ್ ಕೆಜಿಎಫ್ 2 ಕೂಡಾ 2022 ರಲ್ಲೇ ತೆರೆಗೆ ಬರಲಿದ್ದು ಪ್ಯಾನ್ ಇಂಡಿಯಾ ಸಿನಿಮಾದ ಮೇಲೆ ಅಪಾರ ನೀರಿಕ್ಷೆ ಇದೆ. ಮೇಕಿಂಗ್, ಚಿತ್ರಕಥೆ, ನಟನೆ ಎಲ್ಲದರಲ್ಲೂ ಟಾಪ್ ಮೋಸ್ಟ್ ಹಂತದಲ್ಲಿದ್ದ ಕೆಜಿಎಫ್ ಸಿನಿಮಾ ನೋಡಿದ ಪ್ರೇಕ್ಷಕನಿಗೆ ಕೆಜಿಎಫ್ 2 ಸಿನಿಮಾದ ಮೇಲೆ‌ ಸಹಜವಾಗಿಯೇ ಸಾಕಷ್ಟು ನೀರಿಕ್ಷೆ ಇದೆ. ಎಪ್ರಿಲ್‌ 14 ರಂದು ಸಿನಿಮಾ‌ತೆರೆಗೆ ಬರಲು‌ಮುಹೂರ್ತ ಫಿಕ್ಸ್ ಆಗಿದೆ.

ಇನ್ನೂ ಕರುನಾಡಿಗೆ ಶಾಕ್ ಕೊಟ್ಟು ದುಃಖದಲ್ಲಿ ಮುಳುಗಿಸಿದ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಈ ಚಿತ್ರದ ಒಂದು ಹಾಡು ಮಾತ್ರ ಶೂಟಿಂಗ್ ಆಗಬೇಕಿದೆ. ಹೀಗಾಗಿ ಈ ಸಿನಿಮಾ ಕೂಡಾ 2022 ರಲ್ಲೇ ಥಿಯೇಟರ್ ಗೆ ತರಲು ಚಿತ್ರತಂಡ ನಿರ್ಧರಿಸಿದೆ. ಪುನೀತ್ ಬರ್ತಡೇಯಂದೇ ಈ ಸಿನಿಮಾ ಪ್ರದರ್ಶನ ಆರಂಭವಾಗೋ ಸಾಧ್ಯತೆ ಇದೆ. .ಹೀಗಾಗಿ 2022 ನೇ ವರ್ಷ ಸಿನಿಪ್ರೇಮಿಗಳಿಗೆ ಸಖತ್ ಧಮಾಕಾ ತರಲಿದ್ದು, ಕೊರೋನಾ ಹಾಗೂ ಓಮೈಕ್ರಾನ್ ಸಿನಿ ಪ್ರೇಕ್ಷಕರ ಖುಷಿ ಕಸಿಯದಿರಲಿ ಅನ್ನೋದು ನಮ್ಮ ಹಾರೈಕೆ.

ಇದನ್ನೂ ಓದಿ : ರಾಧಿಕಾ ಹಂಚಿಕೊಂಡ ಪೋಟೋದಲ್ಲಿ ಅಮ್ಮನನ್ನು ಮೀರಿಸಿದ ಮಗಳು ಆರ್ಯ

ಇದನ್ನೂ ಓದಿ : ರಶ್ಮಿಕಾ ಸಿನಿ ಜರ್ನಿಗೆ ಐದು ವರ್ಷದ ಸಂಭ್ರಮ : ಕಲಿತ ಪಾಠ ಹಂಚಿಕೊಂಡ ನ್ಯಾಶನಲ್ ಕ್ರಶ್

(Sandalwood Star Festival in 2022: kgf, James, Vikrant Rona Three Big Budget movie to hit the screens)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular