ಭಾನುವಾರ, ಏಪ್ರಿಲ್ 27, 2025
HomeCinemaSuman Ranganath : ಪೆಟ್ರೋಮ್ಯಾಕ್ಸ್ ಗೆ ಸುಮನ್ ರಂಗನಾಥ್ : ಡಿಗ್ಲ್ಯಾಮರ್ ಪಾತ್ರದಲ್ಲಿ ಗ್ಲಾಮರ್ ಬೊಂಬೆ

Suman Ranganath : ಪೆಟ್ರೋಮ್ಯಾಕ್ಸ್ ಗೆ ಸುಮನ್ ರಂಗನಾಥ್ : ಡಿಗ್ಲ್ಯಾಮರ್ ಪಾತ್ರದಲ್ಲಿ ಗ್ಲಾಮರ್ ಬೊಂಬೆ

- Advertisement -

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕವೇ ಜನ ಹುಬ್ಬೇರಿಸುವಂತೆ ಮಾಡಿದವರು ನಿರ್ದೇಶಕ ವಿಜಯ್ ಪ್ರಸಾದ್. ಸಿಂದ್ಲಿಂಗು, ನೀರದೋಸೆ, ತೋತಾಪುರಿಯಂತಹ ಸಿನಿಮಾಗಳ ಬಳಿಕ ಪೆಟ್ರೋಮ್ಯಾಕ್ಸ್ ತೆರೆಗೆ ತರ್ತಿದ್ದಾರೆ ವಿಜಯ್. ಈ ಸಿನಿಮಾದ ಮುಕ್ತಾಯದ ಹೊತ್ತಿನಲ್ಲಿ ವಿಶೇಷ ಅತಿಥಿಯೊಬ್ಬರು (Suman Ranganath) ಸೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸದಾ ತಮ್ಮ ಎವರ್ ಗ್ರೀನ್ ಚೆಲುವೆಯಿಂದಲೇ ಗಮನ ಸೆಳೆದವರು ಸುಮನ್ ರಂಗನಾಥ್. ತಮ್ಮ ಮೊದಲ. ಚಿತ್ರದಿಂದ ಇಂದಿನವರೆಗೂ ಅದೇ ಮಾದಕ ಸೌಂದರ್ಯ ಉಳಿಸಿಕೊಂಡ ಸುಮನ್ ಈಗ ಪೆಟ್ರೋಮ್ಯಾಕ್ಸ್ ಗೆ ಸ್ಪೆಶಲ್ ಎಂಟ್ರಿ ಕೊಡ್ತಿದ್ದಾರೆ. ವಿಜಯ್ ಪ್ರಸಾದ್ ಹಾಗೂ ನಟ ನೀನಾಸಂ ಸತೀಶ್ ಕಾಂಬಿನೇಷನ್ ನಲ್ಲಿ ಮೂಡಿ ಬರ್ತಿರೋ ಸಿನಿಮಾದಲ್ಲಿ ಹರಿ ಪ್ರಿಯಾ ನಾಯಕಿಯಾಗಿದ್ದಾರೆ.

ಈ ವಿಭಿನ್ನ ಸಿನಿಮಾ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಈ ಹೊತ್ತಲ್ಲಿ ಸ್ಯಾಂಡಲ್ ವುಡ್ ನ ಗ್ಲ್ಯಾಮರ್ ಬೊಂಬೆ ಸುಮನ್ ರಂಗನಾಥ್ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ,ನೀರದೋಸೆ,ಸಿಂದ್ಲಿಂಗು ಚಿತ್ರಗಳಲ್ಲೂ ಸುಮನ್ ರಂಗನಾಥ್ ನಟಿಸಿದ್ದರು. ಈಗ ಮತ್ತೊಮ್ಮೆ ಸುಮನ್ ಹಾಗೂ ವಿಜಯ್ ಪ್ರಸಾದ್ ಕಾಂಬಿನೇಶನ್ ಮುಂದುವರೆದಿದೆ.

ಆದರೆ ಇದೇ ಮೊದಲ ಬಾರಿಗೆ ಸುಮನ್ ರಂಗನಾಥ್ ಡಿ ಗ್ಲ್ಯಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷತೆ. ಈ ಸಿನಿಮಾದಲ್ಲಿ ಸುಮನ್ ರಂಗನಾಥ್ ಸುಬ್ಬುಲಕ್ಷ್ಮೀ ಎಂಬ ಡಿಗ್ಲ್ಯಾಮರ್ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದುರ್ಗ ಮೂಲದ ಸುಬ್ಬುಲಕ್ಷ್ಮೀ ಪಾತ್ರದಲ್ಲಿ ಹಾಡೊಂದರಲ್ಲಿ ಸುಮನ್ ರಂಗನಾಥ್ ಬಂದು ಹೋಗುತ್ತಾರಂತೆ. ಅಷ್ಟೇ ಅಲ್ಲ ಒಂದಿಷ್ಟು ವೃದ್ಧಾಶ್ರಮದ ದೃಶ್ಯಗಳಲ್ಲಿ ವಿಜಯಲಕ್ಷ್ಮೀಸಿಂಗ್ ಅವರ ಜೊತೆಗೂ ಕಾಣಿಸಿಕೊಳ್ಳುತ್ತಾರಂತೆ. ಈಗಾಗಲೇ ಸುಮನ್ ರಂಗನಾಥ್ ಪಾತ್ರದ ಶೂಟಿಂಗ್ ಕೂಡ ಆರಂಭವಾಗಿದೆ.

ಸದಾಕಾಲ ಗ್ಯ್ಲಾಮರ್ ಪಾತ್ರದಲ್ಲೇ ಕಾಣಿಸಿಕೊಳ್ತಿದ್ದರು ಸುಮನ್ ರಂಗನಾಥ್. ಈ ಟ್ರ್ಯಾಕ್ ಬ್ರೇಕ್ ಮಾಡಬೇಕೆಂಬ ಕಾರಣಕ್ಕೆ‌ಮೊದಲ ಬಾರಿಗೆ ಡಿಗ್ಲ್ಯಾಮರ್ ಪಾತ್ರ ದಲ್ಲಿ ಸುಮನ್ ಅವರನ್ನು ತೋರಿಸುವ ಪ್ರಯತ್ನ ನಡೆಸಿದ್ದೇವೆ. ಯಾವುದೇ ಪಾತ್ರಕ್ಕೂ ನ್ಯಾಯ ಒದಗಿಸುವ ಶಕ್ತಿ ಅವರಿಗೆ ಎಂಬ ವಿಶ್ವಾಸ ನಮಗಿದೆ ಅಂತಾರೆ ನಿರ್ದೇಶಕ ವಿಜಯ್ ಪ್ರಸಾದ್.

1989 ರಲ್ಲಿ ತೆರೆಕಂಡ ಕನ್ನಡದ ಚಿತ್ರ ಸಿಬಿಐ ಶಂಕರ್ ಜೊತೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಸುಮನ್ ರಂಗನಾಥ್ ಹಿಂದಿ ತೆಲುಗು ತಮಿಳು ಮಲೆಯಾಳಂ ಸೇರಿ ಹಲವು ಭಾಷೆ ಯಲ್ಲಿ ನಟಿಸಿದ್ದು, ಮಾಡೆಲ್ ಆಗಿ ವೃತ್ತಿ ಆರಂಭಿಸಿದ್ದರು.

ಇದನ್ನೂ ಓದಿ : Pooja Hegde : ಮಾಲ್ಡೀವ್ಸ್ ಗೆ ಸೆಲೆಬ್ರೇಟಿಸ್ ದಂಡು: ಮತ್ತೇರಿಸೋ ಪೋಸ್ ನಲ್ಲಿ ಪೂಜಾ ಹೆಗ್ಡೆ

ಇದನ್ನೂ ಓದಿ : Sanjanaa Anand : ಸಲಗ ಸುಂದರಿ ಟಾಲಿವುಡ್ ಗೆ: ಹೊಸ ಜರ್ನಿ ಖುಷಿ‌ ಹಂಚಿಕೊಂಡ ಸಂಜನಾ

( Suman Ranganath to Petromax: The Glamor Doll in the role of Diglamer)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular