ಸಿನಿಮಾ ಶೂಟಿಂಗ್ ವೇಳೆ ನಟ ಪ್ರಕಾಶ್ ರೈ ಕುಸಿದು ಬಿದ್ದು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಪ್ರಕಾಶ್ ರೈ ಹೈದ್ರಾಬಾದ್ ಗೆ ತೆರಳಿದ್ದಾರೆ.

ನಟ ಧನುಷ್ ಅಭಿನಯದ #ಡಿ44 ಚಿತ್ರದ ಶೂಟಿಂಗ್ ವೇಳೆ ಪ್ರಕಾಶ್ ರೈ ಕುಸಿದು ಬಿದ್ದಿದ್ದು, ಬಿದ್ದ ರಭಸಕ್ಕೆ ಅವರ ಕೈ ಮುರಿದು ಹೋಗಿದೆ. ಕೈಮೂಳೆ ಮುರಿದಿದ್ದನ್ನು ಸ್ಥಳೀಯ ವೈದ್ಯರು ಖಚಿತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಹೈದ್ರಾಬಾದ್ ತೆರಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಪ್ರಕಾಶ್ ರೈ, ಕೆಳಗೆ ಬಿದ್ದು ಕೈಗೆ ಚಿಕ್ಕ ಪೆಟ್ಟಾಗಿದೆ. ಹೈದ್ರಾಬಾದ್ ನ ನನ್ನ ಸ್ನೇಹಿತ ಡಾ.ಗುರುವಾ ರೆಡ್ಡಿ ಬಳಿ ಚಿಕಿತ್ಸೆ ಪಡೆಯಲು ತೆರಳುತ್ತಿದ್ದೇನೆ. ಶೀಘ್ರವೇ ಗುಣಮುಖನಾಗುತ್ತೇನೆ. ನಿಮ್ಮ ಹಾರೈಕೆ ಇರಲಿ ಎಂದು ಹೇಳಿದ್ದಾರೆ.
ಮೂಳೆ ಮುರಿದಿರೋದರಿಂದ ಮೇಜರ್ ಸರ್ಜರಿ ನಡೆಯಲಿದೆ. ಹೀಗಾಗಿ ಒಂದಷ್ಟು ದಿನ ವಿಶ್ರಾಂತಿ ಪಡೆಯೋದು ಅನಿವಾರ್ಯವಾಗಿದ್ದು, ಪ್ರಕಾಶ್ ರೈ ಶೂಟಿಂಗ್ ಗೆ ಗೈರಾಗಲಿದ್ದಾರೆ.