Crime News : ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ : ಬಲವಂತವಾಗಿ ವಿಷ ಕುಡಿಸಿ ಕೊಲೆಗೈದ ಕಾಮುಕರು

ಚಂಢೀಗಡ: ಅಪ್ರಾಪ್ತ ಸಹೋದರಿಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ನಂತರ ನಾಲ್ವರು ಕಾಮುಕರು ಬಲವಂತವಾಗಿ ಕೀಟನಾಶಕ ಕುಡಿಸಿ ಕೊಲೆಗೈದ ಘಟನೆ ಹರಿಯಾಣದ ಸೊನಿಪತ್‌ ಬಳಿ ನಡೆದಿದೆ.

ಮೃತ ಬಾಲಕಿರಿಬ್ಬರೂ 14 ಮತ್ತು 16 ವರ್ಷ ವಯಸ್ಸಿನವರಾಗಿದ್ದಾರೆ. ತಾಯಿಯ ಜೊತೆಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಅಪ್ರಾಪ್ತ ಸಹೋದರಿಯರ ಮನೆಯ ಪಕ್ಕದಲ್ಲಿಯೇ ನಾಲ್ವರು ಯುವಕರು ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ತಡರಾತ್ರಿ ಮನೆಯೊಳಗೆ ನುಗ್ಗಿದ ಕಾಮುಕರು ತಾಯಿಗೆ ಬೆದರಿಕೆಯೊಡ್ಡಿದ್ದಾರೆ. ನಂತರ ಇಬ್ಬರೂ ಸಹೋದರಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ. ಕೃತ್ಯ ಯಾರಿಗೂ ತಿಳಿಯ ಬಾರದು ಅನ್ನೋ ಕಾರಣಕ್ಕೆ ಕೀಟನಾಶಕವನ್ನು ಬಲವಂತವಾಗಿ ಕುಡಿಸಿದ್ದಾರೆ. ಯಾರಾದ್ರೂ ಕೇಳಿದ್ರೆ ಹಾವು ಕಡಿದಿದೆ ಎಂದು ಸುಳ್ಳು ಹೇಳುವಂತೆ ಸೂಚಿಸಿ ಕಾಮುಕರು ಪರಾರಿಯಾಗಿದ್ದರು.

ಇದನ್ನೂ ಓದಿ : ಮಗಳನ್ನು ವೈದ್ಯೆಯನ್ನಾಗಿಸುವ ಕನಸು ಕಂಡಿದ್ದಳು ತಾಯಿ : ಆದರೆ ಹೆತ್ತಾಕೆಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಪುತ್ರಿ

ಸ್ವಲ್ಪ ಹೊತ್ತಲ್ಲೇ ಇಬ್ಬರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಹೋದರಿಯರು ಸಾವನ್ನಪ್ಪಿದ್ದಾರೆ. ಪ್ರಾಣಭಯದಿಂದ ತಾಯಿ ಆರಂಭದಲ್ಲಿ ಹಾವು ಕಡಿದಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು. ಆದರೆ ಮಕ್ಕಳು ಸಾವನ್ನಪ್ಪುತ್ತಿದ್ದಂತೆಯೇ ನೈಜ ಘಟನೆಯನ್ನು ವಿವರಿಸಿದ್ದಾಳೆ. ಅಲ್ಲದೇ ಮರಣೋತ್ತರ ಪರೀಕ್ಷೆಯಲ್ಲಿಯೂ ಅತ್ಯಾಚಾರ ಹಾಗೂ ವಿಷ ಸೇವನೆ ಮಾಡಿರುವುದು ಬಯಲಾಗಿದೆ.

ಇದನ್ನೂ ಓದಿ : ವಿದ್ಯಾರ್ಥಿನಿಯನ್ನೇ ಅತ್ಯಾಚಾರವೆಸಗಿ, ನಗ್ನ ಪೋಟೋ ತೋರಿಸಿ ಬ್ಲ್ಯಾಕ್‌ಮೇಲ್‌ : ಶಿಕ್ಷಕ ದಂಪತಿ ಅರೆಸ್ಟ್‌

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಪೊಲೀಸರ ತನಿಖೆಯನ್ನು ಮುಂದುವರಿಸಿದ್ದಾರೆ.

Comments are closed.